ಕಟಪಾಡಿ ಚರ್ಚಿನಲ್ಲಿ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮ
ಕಟಪಾಡಿ: ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ಕೆಥೊಲಿಕ್ ಸಭಾ, ಸಂತ ವಿನ್ಸೆಂಟ್ ಡಿಪಾವ್ಲ್’ಚರ್ಚ್ ಇದರ ಆಶ್ರಯದಲ್ಲಿ ಭಾನುವಾರ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮ ಚರ್ಚಿನ ಸಭಾಂಗಣದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಜೋಸೆಫ್ ರೆಬೆಲ್ಲೊ ಕಲ್ಯಾಣಪುರ ಇವರು ಮನುಷ್ಯ, ನೀರು ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧ, ಪ್ರಜ್ಞಾವಂತರು ಎಂದು ಹಣೆಪಟ್ಟಿ ಕಟ್ಟಿಕೊಂಡ ಮಾನವ ನೀರನ್ನು ಪೋಲು ಮಾಡುವ ರೀತಿ, ಅದರೊಂದಿಗೆ ಪ್ರಕೃತಿಯ ನಾಶ, ಮುಂದಿನ ಜನಾಂಗಕ್ಕೆ ನೀರಿನ ಸದ್ಬಳಕೆ ಯಾವ ರೀತಿಯಲ್ಲಿ ಮಾಡಬೇಕು ಎಂಬ ಕುರಿತು ಮಾಹಿತಿ ನೀಡಿದರು.
ಕೆಥೊಲಿಕ್ ಸಭಾ ಅಧ್ಯಕ್ಷ ಬ್ರಾಯನ್ ಕೊರೆಯಾ ಸ್ವಾಗತಿಸಿದರು. ಚರ್ಚಿನ ಧರ್ಮಗುರು ವಂ ರೋನ್ಸನ್ ಡಿಸೋಜಾ ಅವರು ಧನ್ಯವಾದವಿತ್ತರು.