ಕಡಲ್ಕೊರೆತ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಜನಪ್ರತಿನಿಧಿ

Spread the love

ಕಡಲ್ಕೊರೆತಕ್ಕೆ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಜನಪ್ರತಿನಿಧಿ

ಕಾಪು: ದಿನಬೆಳಗಾದರೆ ಕಡಲಿನ ಅಲೆಗಳನ್ನು ನೋಡುತ್ತ ಬದುಕಿದವರು ನಾವು . ಮಳೆಗಾಲ ಬಂದರೆ ಸಾಕು ನಾವು ಮನೆ ಬಿಟ್ಟು ಬದುಕಬೇಕಾದ ಪರಿಸ್ಥಿತಿ.ಕಡಲುಯಾವಾಗ ಪ್ರಕ್ಷುಬ್ದಗೊಳ್ಳುವುದೋ ಅನ್ನೋ ಭಯ. ಒಪ್ಪತ್ತಿನ ಊಟಕ್ಕೂ ನಾವು ಕಡಲ ಕಸುಬನ್ನು ಅವಲಂಬಿಸುವವರು. ಅಲೆಗಳ ಅಬ್ಬರಕ್ಕೆ ಬ್ರೇಕ್ ಹಾಕಲು ಏನಾದರೊಂದು ಮಾಡಿಕೊಡಿಅಂತಾ ಹಲವಾರು ವರ್ಷಗಳಿಂದ ಕಾಡಿಬೇಡಿದ್ದೇವೆ ಆದ್ರೆ ಪರಿಹಾರ ಮಾತ್ರ ಶೂನ್ಯ. ಹೀಗೆ ತನ್ನ ನೋವಿನ ಅಳಲನ್ನು ಹೇಳಿಕೊಂಡವರು ಮಟ್ಟು ಪ್ರದೇಶದ ನಿವಾಸಿ ಅಶೋಕ್.

ಹೌದು ಕಡಲ ತಡಿಯಲ್ಲಿ ವಾಸಿಸುವವರಿಗೆ ಕಡಲ ಕೊರೆತ ಅನ್ನೋದು ಮಳೆಗಾಲದಲ್ಲಿ ಬಹುದೊಡ್ಡ ಸಮಸ್ಯೆ . ಹಲವಾರು ವರ್ಷಗಳಿಂದ ಈ ಭಾಗದ ಜನರಿಗೆ ಕಡಲ ಭಯವಿಲ್ಲದಿದ್ದರೂ ಮಳೆಗಾಲದಲ್ಲಿ ಕಡಲ ಕೊರೆತದ ಭಯ ಇದ್ದೇ ಇರುತ್ತದೆ. ಕಡಲ ಕಸುಬು ಮಾಡಿಕೊಂಡು ಜೀವನ ಸಾಗಿಸೋ ಇಲ್ಲಿನಜನರು ಮುಂಜಾನೆ ಬೆಳಕು ಹರಿಯುವ ಮೊದಲೇ ದುಡಿಮೆ ಆರಂಭಿಸುತ್ತಾರೆ .ಆದ್ರೆ ಕಡಲು ಮನೆ ತನಕ ಬಂದು ಮನೆಯನ್ನು ಆಕ್ರಮಿಸಿಕೊಂಡರೆ ಅನ್ನೋದು ಎಂಬ ಕಡಲವಾಸಿಗಳನ್ನು ಕಾಡುತ್ತಲೇಇರುತ್ತದೆ.

ವರ್ಷಂಪ್ರತಿ ಜನಪ್ರತಿನಿಧಿಗಳಿಗೆ ಕಡಲ ಕೊರೆತಕ್ಕೊಂದು ಶಾಶ್ವತ ಪರಿಹಾರ ಒದಗಿಸಿಕೊಡಿ ಅಂತಾ ಬೇಡಿದಾಗ ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ಕಡಲಿಗೆ ಆಹಾರದಂತೆ ಕಲ್ಲು ತುಂದು ಸುರಿದು ಕಿಸೆ ತುಂಬಿಸಿಕೊಂಡವರೇ ಹೆಚ್ಚು. ಆದ್ರೆ ಶಾಶ್ವಾತ ಪರಿಹಾರದ ಬಗ್ಗೆ ಯಾರು ಚಿಂತಿಸಿಲ್ಲ. ಈ ಬಾರಿ ನಮ್ಮಜನಪ್ರತಿನಧಿ ಅನಿಸಿಕೊಂಡ ನಮ್ಮ ಭಾಗದ ಶಾಸಕರು ನಮ್ಮಕಷ್ಟವನ್ನು ಅರಿತು ಸ್ಪಂದಿಸಿ ಶಾಶ್ವಾತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಕಡಲ ಮಕ್ಕಳ ನೋವಿಗೆ ದನಿಯಾಗಿದ್ದಾರೆ. ಅಲ್ಲದೇ ಕಡಲ ತೀರದ ಪಕ್ಕದಲ್ಲಿರುವ ನದಿ ತೀರದ ಪ್ರದೇಶದ ಜನರು ಕೂಡಾ ನದಿ ಕೊರೆತದಿಂದಾಗಿ ಸಮಸ್ಯೆಗೆ ಒಳಗಾಗಿದ್ದು ಇದೀಗ ಈ ಪ್ರದೇಶದಲ್ಲಿ ಸುತ್ತಲೂ ತಡೆಗೋಡೆ ಮತ್ತು ರಸ್ತೆ ನಿರ್ಮಾಣಗೊಂಡು ಜನರಿಗೆ ಬಹಳಷ್ಟು ಅನುಕೂಲವಾಗಿದೆ.

ಆದ್ರೆ ಈ ಬಾರಿ ವಿನಯಶೀಲ ಜನಪ್ರತಿನಿಧಿಯೊಬ್ಬರು ಕಡಲಕೊರೆತಕ್ಕೆ ಶಾಶ್ವತ ಪರಿಹಾರಕೊಂಡಿಕೊಂಡಿದ್ದಾರೆ. ಜಪಾನ್ ಮಾದರಿಯಲ್ಲಿ ಕಡಲ ಕೊರೆತ ತಡೆಗೋಡೆ ನಿರ್ಮಾಣ ಮಾಡುವುದುರ ಮೂಲಕ ಕಡಲ ಮಕ್ಕಳಿಗೆ ಫುಲ್ರಿಲೀಫ್ ಒದಗಿಸಿದ್ದಾರೆ. ಕಡಲ ರೌದ್ರ ನರ್ತನಕ್ಕೆ ವರ್ಷಂಪ್ರತಿ ಕಡಲಿಗೆ ಹಾಕಿದ ಕಲ್ಲುಗಳು ಮಾಯವಾಗುತ್ತಿತ್ತು. ಕಡಲ ತೀರದಲ್ಲಿ ವಾಸಿಸುವ ಕಡಲ ಮಕ್ಕಳ ಮನೆಗಳು ಒಂದಿಷ್ಟು ತೆಂಗಿನ ಮರಗಳು , ಮೀನುಗಾರಿಕಾ ರಸ್ತೆಗಳು ಕಡಲಿಗೆ ಕಲ್ಲುಗಳೊಂದಿಗೆ ಆಹಾರವಾಗುತ್ತಿತ್ತು. ಕಡಲ ತಡಿಯ ಮಕ್ಕಳ ರೋದನಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.

ಜಪಾನ್ ಮಾದರಿಯ ತಂತ್ರಜ್ನಾನದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯ ಕಾಪುವಿನ ಮಟ್ಟು ಉದ್ಯಾವರದವರೆಗೂ ನಡೆಯುತ್ತಿದೆ. ತಾತ್ಕಾಲಿಕ ತಡಗೋಡೆ ನಿರ್ಮಾಣದಿಂದಾಗಿ ಸಮಸ್ಯೆಗೊಳಗಾಗಲಿದ್ದ ಜನತೆ ಈ ಯೋಜನಯಿಂದಾಗಿ ಸಂಪೂರ್ಣ ನಿಟ್ಟುಸಿರು ಬಿಡುವಂತಾಗಿದೆ.

ಮೊನ್ನೆಯ ದಿನ ಕಡಲ ಉಬ್ಬರ ಇಳಿತದ ಸಂದರ್ಭ ನಾವೆಲ್ಲಾ ಭಯಪಟ್ಟಿಕೊಂಡಿದ್ದೇವು.ಈ ಬಾರಿ ಬೇಸಿಗೆಯಲ್ಲಿ ಮನೆ ಬಿಡಬೇಕಾಗುತ್ತದೆ ಎಂದುಆದರೆ ಹಾಗಾಗಾಲಿಲ್ಲ. ಈ ಬಾರಿ ನಿರ್ಮಾಣವಾದ ತಡೆಗೋಡೆಯಿಂದ ಕಡಲ ಕೊರೆತ ಸಂಭವಿಸಿಲ್ಲ ಅನ್ನೋ ಸಮಧಾನ ತಂದಿದೆ. ಈ ಭಾರಿಯ ಶಾಸಕರ ಪ್ರಯತ್ನ ಫಲಕೊಟ್ಟಿದೆ ಎನ್ನುತ್ತಾರೆ ಮಟ್ಟು ನಿವಾಸಿ ಅಶೋಕ್.

ನದಿ ಕೊರೆತದ ಸಂಧರ್ಭ ನಮ್ಮ ಮನೆ ಬಿರುಕು ಬಿಟ್ಟು ಮನೆ ಕಟ್ಟಡ ಕುಸಿದು ಹೋಗಿತ್ತು. ನಮ್ಮ ಶಾಸಕರು ನದಿ ಕೊರೆತಕ್ಕೆ ಪರಿಹಾರ ಕಂಡುಕೊಂಡು ಸುತ್ತಲೂ ತಡೆಗೋಡೆ ನಿರ್ಮಾಣ ಮಾಡೋಕಾರ್ಯ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯೋಕೆ ಆಗಲ್ಲ. ಅವರಿಗೆ ನಾವು ಅಭಾರಿ ಎಂದು ಸಂತೃಪ್ತ ಭಾವದ ಮಾತನ್ನಾಡುತ್ತಾರೆ ಇನ್ನೋರ್ವ ಮಟ್ಟು ನಿವಾಸಿ ಜಾನಕಿ.


Spread the love