Home Mangalorean News Kannada News ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ

ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ

Spread the love

ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು ಇದ್ದಕ್ಕೆ 15 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

 ಕಣ್ಣಗುಡ್ಡೆ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಅವರು ಸ್ಥಳೀಯರೊಂದಿಗೆ ಸಮಾಲೋಚಿಸಿದರು. ಈ ಪ್ರದೇಶದ ಜನರಿಂದ ರಸ್ತೆ ನಿರ್ಮಿಸಲು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇವರ ಬೇಡಿಕೆಯನ್ನು ಗಮನಿಸಿ ನಗರ ಪ್ರದೇಶಕ್ಕೆ ಅನುದಾನ ಬರದಿದ್ದರೂ ಸಿ ಆರ್ ಎಫ್ ನಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇನೆ. ಇನ್ನೂ ಇದಕ್ಕೆ 10  ಕೋಟಿ ರೂಪಾಯಿ ಬೇಕಾಗುತ್ತದೆ. ಜನರ ಸಹಕಾರ ಸಿಕ್ಕಿದರೆ ಆ ಹಣವನ್ನೂ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ಈ ರಸ್ತೆ ನಿರ್ಮಾಣವಾದರೆ ಎರಡು ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಅವಕಾಶವಾಗುತ್ತದೆ. ಈ ಮುಂದಾಲೋಚನೆಯನ್ನು ಗಮನಿಸಿಯೇ ಯೋಜನೆ ಕೈಗೊಳ್ಳಲು ಮುಂದಾಗಿರುವುದಾಗಿ ತಿಳಿಸಿದರು.

ಈ ಪ್ರದೇಶಕ್ಕೆ 10 ಮೀಟರ್ ಅಗಲದ ರಸ್ತೆ ಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೂಡಾ ಬರೆದಿದ್ದೇನೆ. ಈ ರಸ್ತೆ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಭಾರೀ ಬೆಲೆ ಬರುತ್ತದೆ. ಸಾರ್ವಜನಿಕರ ಸಹಕಾರ ಸಿಕ್ಕಿದರೆ ಅತೀ ಅಗತ್ಯವಾದ ಸರಿಯಾದ ರಸ್ತೆ ನಿರ್ಮಾಣವಾಗತ್ತದೆ. ಒಳ್ಳೆಯ ರಸ್ತೆ ನಿರ್ಮಾಣ ಮಾಡುವುದು ಮುಖ್ಯ ಉದ್ದೇಶ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಪ್ರಕಾಶ್ ಅಳಪೆ, ಡೆನ್ನೀಸ್ ಡಿಸಿಲ್ವಾ, ಎನ್ ಎಚ್ ಅಧಿಕಾರಿ ಅಬ್ದುಲ್ ರಹಮಾನ್, ಮಂಗಳೂರು ಪಾಲಿಕೆ ಅಧಿಕಾರಿ ಶ್ರೀನಿವಾಸ್, ಯಶವಂತ, ಕೆ.ಎಸ್.ಆರ್.ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಸ್ಥಳೀಯರಾದ ಹೆನ್ರೀ ಡಿಸೋಜ, ಅರುಣ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version