Home Mangalorean News Kannada News ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಕನ್ನಡಿಗ ಡಾ.ರೋಹಿತ್ ಶೆಟ್ಟಿ ಅವರಿಗೆ ಪಿ.ಎಚ್.ಡಿ ಪದವಿ

ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಕನ್ನಡಿಗ ಡಾ.ರೋಹಿತ್ ಶೆಟ್ಟಿ ಅವರಿಗೆ ಪಿ.ಎಚ್.ಡಿ ಪದವಿ

Spread the love

ನೇದರ್‍ಲ್ಯಾಂಡ್ಸ್‍ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮೊಟ್ಟಮೊದಲ ಭಾರತೀಯ ವೈದ್ಯ

ಡಾ ರೋಹಿತ್ ಶೆಟ್ಟಿ ಅವರು ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆಯುವ ಮೂಲಕ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ನೇದರ್‍ಲ್ಯಾಂಡ್ಸ್‍ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪಿ.ಎಚ್.ಡಿ ಪದವಿ ಪಡೆದ ಮೊಟ್ಟಮೊದಲ ವೈದ್ಯ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಮನುಕುಲದ ಉನ್ನತಿಗೆ ಶ್ರಮಿಸಬೇಕೆನ್ನುವ ಅವರ ಆಂತರ್ಯದ ತುಡಿತವು ಅವರನ್ನು ಕಣ್ಣೀರಿನ ಕುರಿತಾದ ಈ ಅಪರೂಪದ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ಪ್ರೇರಣೆಯನ್ನು ನೀಡಿತ್ತು. ಅತ್ಯಂತ ಹೆಮ್ಮೆ ಪಡಬೇಕಾದ ಡಾ.ರೋಹಿತ್‍ ಅವರ ಸಂಶೋಧನೆಯು ಕೆರಟೊಕೊನಸ್‍ ಎಂದು ಕರೆಯಲ್ಪಡುವ ಕಣ್ಣಿಗೆ ಸಂಬಂಧಿಸಿದ ರೋಗವನ್ನು ಪತ್ತೆಹಚ್ಚಲು ಮತ್ತು ಕ್ರಮೇಣ ಅಭಿವೃದ್ಧಿ  ಹೊಂದುವ ಗುಣವನ್ನು ಹೊಂದಿರುವ ಈ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ.

dr_rohit_shetty_3

ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಹಾಗೂ ಖ್ಯಾತ ನೇತ್ರ ಶಾಸ್ತ್ರಜ್ಞರಾಗಿರುವ ಡಾ. ರೋಹಿತ್ ಶೆಟ್ಟಿ ಅವರು ತಮ್ಮ ಸಂಶೋಧನೆಯ ಭಾಗವಾಗಿ ಕಣ್ಣೀರಿನ ಸ್ಯಾಂಪಲ್ಲುಗಳ ಮೇಲೆ ವ್ಯಾಪಕವಾದ ಅಧ್ಯಯನವನ್ನು ಕೈಗೊಂಡು ಕೆಲವೇ ಹನಿ ಕಣ್ಣೀರುಗಳಿಂದ ಅನೇಕ ಹೊಸ ಸಂಗತಿಗಳನ್ನು ಪತ್ತೆ ಹಚ್ಚಬಹುದು ಎಂಬುದನ್ನು ಕಂಡುಹಿಡಿದು ಸಾಬೀತುಪಡಿಸಿದ್ದಾರೆ. ಕಣ್ಣಿನ ತೀವ್ರ ತೊಂದರೆಯಿಂದ ತಮ್ಮ ಬಳಿ ಬರುತ್ತಿದ್ದ ಯುವ ರೋಗಿಗಳು ಮತ್ತು ನಿರಂತರವಾಗಿ ತಲೆನೋವಿನಿಂದ ಬಳಲುತ್ತಿದ್ದ ರೋಗಿಗಳನ್ನು ತಮ್ಮ ವೈದ್ಯ ವೃತ್ತಿಯ ಆರಂಭದಲ್ಲಿ ಪರಿಶೀಲಿಸತೊಡಗಿದಾಗ ಅವರಿಗೆ ಈ ವಿಷಯದ ಕುರಿತ ಸಂಶೋಧನೆಯನ್ನು ಮಾಡುವ ಪ್ರೇರಣೆ ಉಂಟಾಗಿತ್ತು.  ಕೆರಟೊಕೊನಸ್ ಪದವು ಗ್ರೀಕ್ ಮೂಲದ್ದಾಗಿದ್ದು ಕೆರಟೊ ಅಂದರೆ ಕೊಂಬು ಅಥವಾ ಕಾರ್ನಿಯಾ ಮತ್ತು ಕೊನಸ್‍ ಅಂದರೆ ಶಂಕು ಎಂಬ ಅರ್ಥವನ್ನು ನೀಡುತ್ತದೆ. ಸುತ್ತ ಮುತ್ತಲಿನ ವಸ್ತುಗಳನ್ನು ಕಾಣುವಲ್ಲಿ, ಡ್ರೈವಿಂಗ್ ಮಾಡುವುದು, ಟಿವಿ ನೋಡುವುದು ಅಥವಾ ಪುಸ್ತಕ ಓದುವುದು ಮುಂತಾದ ಸರಳ ಕೆಲಸಗಳನ್ನು ಮಾಡುವಲ್ಲಿಯೂ ಕೆರಟೊಕೊನಸ್‍ ತೊಂದರೆಯು ತೀವ್ರವಾದ ಪ್ರಭಾವವನ್ನು ಉಂಟು ಮಾಡುತ್ತಿದ್ದುದನ್ನು ಅವರು ತಮ್ಮ ರೋಗಿಗಳಲ್ಲಿ ಗಮನಿಸಿದ್ದರು.

ಡಾ.ರೋಹಿತ್ ಶೆಟ್ಟಿ ಅವರ ಪಿ.ಎಚ್.ಡಿ ಅಧ್ಯಯನದ ಉದ್ದೇಶ ಮತ್ತು ಫಲಿತಗಳು:
1) ಆನುವಂಶಿಕ ಕಾರಣವನ್ನು ಪತ್ತೆಹಚ್ಚುವುದು (ಈ ನಿಟ್ಟಿನಲ್ಲಿಎರಡು ನವೀನ ವಂಶವಾಹಿಗಳನ್ನು ಪತ್ತೆಮಾಡಲಾಗಿದೆ)
2) ಈ ರೋಗದ ಕುರಿತಾದ ಮಾಹಿತಿಯನ್ನು ಕಲೆ ಹಾಕಲು ಒಂದು ಸಂಪನ್ಮೂಲವಾಗಿ ಕಣ್ಣೀರಿನ ಬಳಕೆ.
3) ರೋಗ ತಡೆ ಮತ್ತು ಚಿಕಿತ್ಸೆಗಳಲ್ಲಿ ಬಳಸಲಾಗುವ ಹೊಸ ಔಷಧಗಳು.
4) ಸೂಕ್ತ ಚಿಕಿತ್ಸೆಯನ್ನು ಪತ್ತೆ ಹಚ್ಚಲು ವ್ಯಾಪಕವಾದ ಅಧ್ಯಯನ
5) ಈ ರೋಗವು ಅಭಿವೃದ್ಧಿ ಹೊಂದುವಲ್ಲಿ ಒಂದು ಅಂಶವಾಗಿ ಚಿಕ್ಕಮಕ್ಕಳಲ್ಲಿ ಕಂಡುಬರುವ ಅಲರ್ಜಿಗಳ ಕುರಿತ ಅಧ್ಯಯನ.

ಕೆರಟೊಕೊನಸ್ ಸಮಸ್ಯೆಯ ಲಕ್ಷಣಗಳು
1) ಕನ್ನಡಕದ ಗ್ಲಾಸುಗಳನ್ನು ಪದೇಪದೇ ಬದಲಾಯಿಸಬೇಕಾಗಿ ಬರುವುದು (ವರ್ಷವೊಂದರಲ್ಲಿ 3-5 ಬಾರಿ)
2) ಕನ್ನಡಕದ ಗ್ಲಾಸುಗಳ ಮೂಲಕ ಅಷ್ಟು ಸರಿಯಾಗಿ ಕಾಣಿಸದೇ ಇರುವುದು.
3) ದೃಶ್ಯಗಳು ಚದುರಿದಂತೆ ಕಾಣುವುದು.
4) ದೃಷ್ಟಿಯ ಕ್ಷೇತ್ರ ನಿಧಾನವಾಗಿ ಕಡಿಮೆಯಾಗತೊಡಗುವುದು.
5) ಹೆಚ್ಚಿನ ಪ್ರಮಾಣದಲ್ಲಿ ಕಣ್ಣುಗಳು ಒಣಗತೊಡಗಿ ತುರಿಕೆಯುಂಟಾಗತೊಡಗುವುದು.
6) 10 ರಿಂದ 35ರ ವಯೋಮಾನದವರಲ್ಲಿ ಕಂಡುಬರುತ್ತದೆ.
7) ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
8) ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಈ ರೋಗದ ಮಹತ್ವ
1. 10 ರಿಂದ 35 ವರ್ಷ ವಯೋಮಾನದವರಲ್ಲಿ ಅತಿ ಹೆಚ್ಚಿನ ದೃಷ್ಟಿದೋಶವುಂಟಾಗುವ ಸಾಧ್ಯತೆ.
2. ಮಹಿಳೆಯರಲ್ಲಿ ಹೆಚ್ಚು.
3. ಅತಿಕಡಿಮೆ ವಯಸ್ಸಿನಲ್ಲಿ ಫಲವಂತಿಕೆಯ ನಾಶ
4. ನಗರ ಪ್ರದೇಶದ ಜನಸಂಖ್ಯೆಯಲ್ಲಿ ರೋಗದ ಪ್ರಮಾಣ ಹೆಚ್ಚು
5. 45% ರಿಂದ 60% ಕಣ್ಣಿನ ಟ್ರಾನ್ಸ್‍ಪ್ಲಾಂಟೇಶನ್‍ಗಳು ಕೊರೊಟೊನಸ್‍ ಕಾರಣದಿಂದಾಗುತ್ತವೆ.
ಕೊರೊಟನಸ್‍ಕುರಿತಾದ ಸಂಶೋಧನೆಯ ಮಹತ್ವ
1) ಜೆನೆಟಿಕ್ಸ್ ಟೆಸ್ಟಿಂಗ್
2) ರೋಗ ಬಾರದಂತೆ ತಡೆಯುವ ಔಷಧಿ, ಚಿಕಿತ್ಸೆಗಳ ವಿಷಯಕ್ಕೆ ಸಂಬಂಧಿಸಿ.
3) ಕೆಲಸದ ಶೈಲಿಯ ಬದಲಾವಣೆಯಲ್ಲಿ

ಕೆರಟೊಕೊನಸ್‍ ಎಂದರೇನು?

ಕಣ್ಣಿನ ಮುಂಭಾಗದ ಮೇಲ್ಮೈಕಾರ್ನಿಯಾವು ಅಸ್ವಾಭಾವಿಕವಾಗಿ ಊದಿಕೊಳ್ಳುತ್ತ ಸಾಗುವ ಸ್ಥಿತಿ ಕೆರಟೊಕೊನಸ್. ಈ ಸ್ಥಿತಿಯಲ್ಲಿ ಬೆಳಕು ರೆಟಿನಾದ ಮೇಲೆ ಸರಿಯಾಗಿ ಬೀಳದೇ ದೃಷ್ಟಿ ಮಂಜಾಗತೊಡಗುತ್ತದೆ. ಈ ತೊಂದರೆಯನ್ನು ಕನ್ನಡಕದ ಮೂಲಕವಾಗಲೀ ಅಥವಾ ಅಂತಿಮ ಹಂತದಲ್ಲಿ ಕೂಡ ಕಾಂಟ್ಯಾಕ್ಟ್ ಲೆನ್ಸುಗಳಿಂದಲಾಗಲೀ ಸರಿಪಡಿಸುವುದು ಸಾಧ್ಯವಿಲ್ಲ.

ಕೆಲವು ಕೇಸುಗಳಲ್ಲಿ ಇದೊಂದು ಆನುವಂಶಿಕ ರೋಗವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಪಾಲಕರಲ್ಲಿ ಕೂಡ ಕಂಡುಬರುತ್ತದೆ ಅಥವಾ ಅಲರ್ಜಿ ಹೊಂದಿರುವ ಚಿಕ್ಕಮಕ್ಕಳಲ್ಲಿ ಕಂಡುಬಂದು ಕಣ್ಣುಗಳನ್ನು ಉಜ್ಜಿಕೊಳ್ಳುವಂತೆ ಪ್ರೇರೇಪಿಸಿ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. “ಈ ಸಮಸ್ಯೆಯನ್ನು ಹೊಂದಿರುವ ಸುಮಾರು 50ಕ್ಕಿಂತಲೂ ಹೆಚ್ಚು ರೋಗಿಗಳನ್ನು ನಮ್ಮ ಕ್ಲಿನಿಕ್ಕಿನಲ್ಲಿ 2007ನೇ ವರ್ಷವೊಂದರಲ್ಲಿಯೇ ಪತ್ತೆ ಹಚ್ಚಿದ್ದೇವೆ. ಈಗ ಈ ಸಂಖ್ಯೆ ದಿನವೊಂದಕ್ಕೆ 8 ರಿಂದ 10 ರೋಗಿಗಳು ನಮ್ಮಲ್ಲಿ ಬರುವಷ್ಟು ಪ್ರಮಾಣದಲ್ಲಿ ಹೆಚ್ಚಿದೆ. 35ಕ್ಕಿಂತಲೂ ಕಡಿಮೆ ವಯೋಮಾನದವರಲ್ಲಿ ಇದು ಅತಿ ಸಾಮಾನ್ಯ ಎಂಬಂತಾಗಿದ್ದು ಅವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳವರಾಗಿರುತ್ತಾರೆ. ಅವರಲ್ಲಿ ಕೇವಲ 1%ದಷ್ಟು ರೋಗಿಗಳು ಮಾತ್ರ ಆನುವಂಶಿಕ ರೋಗದಿಂದ ಬಳಲುತ್ತಾರೆ. ಉಳಿದ 99%ರಷ್ಟು ರೋಗಿಗಳು ಕಂಪ್ಯೂಟರ್, ಎಲೆಕ್ಟ್ರಾನಿಕ್‍ಗ್ಯಾಜೆಟ್ ಗಳು ಮತ್ತು ಸ್ಮಾಟ್ ್ ಫೋನ್‍ಅಡಿಕ್ಷನ್ ನಿಂದಾಗಿ ಉಂಟಾಗುವ ಅಲರ್ಜಿಗಳಿಂದ ಬಳಲುತ್ತಾರೆ, ಆಕಾರಣಕ್ಕಾಗಿ ಕಣ್ಣುಗಳ ಆದ್ರ್ರತೆ ಕಡಿಮೆಯಾಗಿ ತುರಿಕೆಯುಂಟಾಗುತ್ತದೆ” ಎಂದು ಡಾ.ಶೆಟ್ಟಿ ಅವರು ಹೇಳುತ್ತಾರೆ.

ದೃಷ್ಟಿಹೀನತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿಯೇ ರೋಗಪತ್ತೆಮಾಡುವ ಲಕ್ಷ್ಯವನ್ನಿರಿಸಿಕೊಂಡ ಡಾ.ಶೆಟ್ಟಿ ಅವರು 2004ರಲ್ಲಿ ತಮ್ಮ ಸಂಶೋಧನೆಯನ್ನು ಆರಂಭಿಸಿದರು. “ಕೆರಟೊಕೊನಸ್‍ನಜೆನೆಟಿಕ್‍ ಮಾಲಿಕ್ಯುಲರ್ ಮೆಕ್ಯಾನಿಸಮ್ ಹಾಗೂ ವೈದ್ಯಕೀಯ ಪ್ರತಿರಕ್ಷಾ ಶಾಸ್ತ್ರದ ಅರಿತು ಕೊಳ್ಳುವಿಕೆ” ಎಂಬ ಶೀರ್ಷಿಕೆಯಡಿಯಲ್ಲಿ ಅವರು 2013ರಲ್ಲಿ ನೇದರ್‍ಲ್ಯಾಂಡ್ಸ್‍ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದ ಸಹಯೋಗ ಪಡೆದು ಅಲ್ಲಿನ ಪ್ರೊ. ರುಡಿ ನ್ಯೂಯಿಟ್ಸ್‍ ಅವರೊಂದಿಗೆ ಕೆಲಸ ಮಾಡಿದರು. ಈ ಸಂಶೋಧನೆಯು ಅವರಿಗೆ ಪ್ರತಿಷ್ಠಿತ ಕರ್ನಲ್‍ ರಂಗಾಚಾರಿ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಫೆಬ್ರುವರಿ 2015ರಲ್ಲಿ ನಡೆದ ಅಖಿಲ ಭಾರತ ಮಟ್ಟದ ನೇತ್ರಶಾಸ್ತ್ರಜ್ಞರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು ನೇತ್ರ ವಿಜ್ಞಾನಕ್ಷೇತ್ರದಲ್ಲಿ ಕೊಡಮಾಡುವ ಅತ್ಯುನ್ನತ ಮಟ್ಟದ ಗೌರವ ಪುರಸ್ಕಾರ ಇದಾಗಿದೆ.

ಚಿಕಿತ್ಸೆ ಮತ್ತು ರೋಗ ತಡೆ
ಆರಂಭಿಕ ಹಂತಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್‍ಗಳನ್ನು ನೀಡುವ ಮೂಲಕ ಈ ಸಮಸ್ಯೆಯನ್ನು ಉತ್ತಮವಾಗಿ ಚಿಕಿತ್ಸೆಗೊಳಪಡಿಸಲಾಗುತ್ತದೆ. ಇದಲ್ಲದೇ ಇನ್ನಿತರ ಶಸ್ತ್ರಚಿಕಿತ್ಸಾ ವಿಧಾನಗಳೂ ಇವೆ. ವಿವಿಧ ರೀತಿಯ ಕಾಂಟ್ಯಾಕ್ಟ್ ಲೆನ್ಸ್‍ಗಳು ಲಭ್ಯವಿದ್ದಾಗ್ಯೂ, ಸಾಮಾನ್ಯವಾಗಿ ಗ್ಯಾಸ್ ಪರ್ಮಿಯೇಬಲ್ ಲೆನ್ಸ್‍ಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ತಯಾರಿಸಲಾದ ಸ್ಕ್ಲೆರಲ್ ಲೆನ್ಸುಗಳೆಂದು ಕರೆಯಲ್ಪಡುವ ಕೆರಟೊಕೊನಸ್ ಲೆನ್ಸುಗಳು ಲಭ್ಯವಿವೆ. ಕಾರ್ನಿಯಾ ಮೇಲೆ ಅನುರೂಪವಾಗಿ ಕುಳಿತುಕೊಳ್ಳಬಲ್ಲ ಅವು ಉತ್ತಮ ಗುಣಮಟ್ಟದ ದೃಷ್ಟಿಯನ್ನು ಒದಗಿಸುತ್ತವೆ.

“1888ರ ಸುಮಾರಿಗೆಕಾಂಟ್ಯಾಕ್ಟ್ ಲೆನ್ಸ್‍ಗಳು ಕಂಡುಹಿಡಿಯಲ್ಪಟ್ಟಾಗ, ಕೆರಟೊಕೊನಸ್‍ಚಿಕಿತ್ಸೆಯು ಪ್ರಥಮವಾಗಿ ಜಾರಿಯಲ್ಲಿ ಬಂದಿತು. ಸಾಮಾನ್ಯ ರೂಪದಲ್ಲಿ ಕಾರ್ನಿಯಾ ಮೇಲೆ ಕುಳಿತುಕೊಂಡು ಸುಧಾರಿತ ದೃಷ್ಟಿಯನ್ನು ನೀಡುವ ಗ್ಲಾಸುಗಳನ್ನು ಫ್ರೆಂಚ್ ವೈದ್ಯರು ತಯಾರಿಸಿದರು. ಆದರೆ, ಈ ಚಿಕಿತ್ಸಾ ಆಯ್ಕೆಗಳು ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದ್ದರಿಂದ, ಹಲವಾರು ಕೇಸುಗಳ ವಿಷಯದಲ್ಲಿ ಹೆಚ್ಚಿನ ಆಧುನಿಕ ವಿಧಾನಗಳ ಅವಶ್ಯಕತೆ ಕಂಡು ಬಂದಿತ್ತು. ಇದು ಕೆರಟೊಕೊನಸ್‍ ರೋಗಿಯ ಕಾರ್ನಿಯಲ್‍ಟ್ರಾನ್ಸ್‍ಪ್ಲಾಂಟೇಶನ್‍ಗೆ ಎಡೆಮಾಡಿಕೊಟ್ಟಿತ್ತು. ಅ3ಖ ಮತ್ತು ಇಂಟ್ಯಾಕ್ಸ್ ಮುಂತಾದ ಚಿಕಿತ್ಸಾವಿಧಾನಗಳ ಮೂಲಕ ನೇತ್ರಶಾಸ್ತ್ರಜ್ಞರು ಅದ್ಭುತವೆನಿಸುವ ಅನೇಕÀ ಸಾಧನೆಗಳನ್ನು ಮಾಡಿದ್ದಾರೆ. ಕೆರಟೊಕೊನಸ್‍ ರೋಗದ ಅಂತಿಮ ಹಂತವನ್ನು ತಲುಪಿರುವ ರೋಗಿಗಳಿಗೆ ಕೊನೆಯ ಪ್ರಯತ್ನ ವೆಂಬಂತೆ ಕಾರ್ನಿಯಾಟ್ರಾನ್ಸ್‍ಪ್ಲಾಂಟೇಶನ್ ಕೈಗೊಳ್ಳಲಾಗುತ್ತದೆ.ಜಾಗತಿಕವಾಗಿ ನಡೆಸಲಾಗುವ 45% ಟ್ರಾನ್ಸ್‍ಪ್ಲಾಂಟ್ ಚಿಕಿತ್ಸೆಗಳು ಕೆರಟೊಕೊನಸ್‍ ಕಾರಣಕ್ಕಾಗಿರುತ್ತವೆ. ಕೆರಟೊಕೊನಸ್‍ ರೋಗ ಹೆಚ್ಚಾಗದಂತೆ ತಡೆಯಲು ಅದನ್ನು ಆದಷ್ಟು ಬೇಗ ಪತ್ತೆಹಚ್ಚಿ ಚಿಕಿತ್ಸೆಗೊಳಪಡಿಸಿ ಸ್ಥಿರಗೊಳಿಸುವುದು ಯಾವಾಗಲೂ ಅತ್ಯಂತ ಮಹತ್ವ ಮತ್ತು ಅನಿವಾರ್ಯವಾದಕ್ರಮ. ಈ ರೋಗದ ಕುರಿತು ಜನಜಾಗೃತಿಯಿಲ್ಲದೇ ಇರುವುದು ಕೂಡ ಕೆರಟೊಕೊನಸ್ ಸಮಸ್ಯೆ ದಿನೇದಿನೆ ಹೆಚ್ಚುತ್ತಿರುವದಕ್ಕೆ ಪ್ರಮುಖ ಕಾರಣವಾಗಿದೆ”ಎಂದು ಡಾ. ಶೆಟ್ಟಿ ಅಭಿಪ್ರಾಯಪಡುತ್ತಾರೆ.

ಜನಜಾಗೃತಿ

“ನಾವುಯಾರಿಗಾದರೂ ನಮಗೆ ಮಧುಮೇಹವಿದೆ ಎಂದು ಹೇಳಿದರೆ, ಅದರ ಎಲ್ಲ ಪರಿಣಾಮಗಳನ್ನು ಅವರು ಅರ್ಥೈಸಿಕೊಳ್ಳದೇ ಇರಬಹುದು. ಆದರೆ, ಅವರುರೋಗದ ಹೆಸರನ್ನು ಗುರುತಿಸಬಲ್ಲರು ಮತ್ತು ಅದರ ಬಗ್ಗೆ ಕೆಲಮಟ್ಟಿನ ತಿಳುವಳಿಕೆಯನ್ನು ಹೊಂದಿರುತ್ತಾರೆ. ಆದರೆ, ನಾವು ಯಾರಿಗಾದರೂ ಕೆರಟೊಕೊನಸ್‍ ಕುರಿತು ಹೇಳತೊಡಗಿದರೆ, ನಾವೇನು ಮಾತನಾಡುತ್ತಿದ್ದೇವೆ ಎಂಬುದರ ಕುರಿತು ಒಂದಿನಿತೂ ಅವರ ಅರಿವಿಗೆ ಬಂದಿರುವುದಿಲ್ಲ. ಕೆರಟೊಕೊನಸ್ ಪತ್ತೆ ಮಾಡುವ ಮತ್ತು ಆರ್ಥಿಕವಾಗಿ ಅವಶ್ಯಕತೆಯುಳ್ಳ ರೋಗಿಗಳಲ್ಲಿ ಅದಕ್ಕೆ ಚಿಕಿತ್ಸೆಯನ್ನು ನೀಡುವ ಹಲವಾರು ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೇನೆ. ಆದರೆ, ಭಾರತದಲ್ಲಿ ಈ ರೋಗದ ಕುರಿತು ಜನಜಾಗೃತಿಯನ್ನುಂಟುಮಾಡುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗಿಲ್ಲ”, ಎಂದುಡಾ. ಶೆಟ್ಟಿ ವಿಷಾದಿಸುತ್ತಾರೆ. ಈ ಸಂಶೋಧನೆಯಿಂದಾಗಿ, ಅವರು ಕೆರಟೊಕೊನಸ್‍ ಸಮಸ್ಯೆಯ ಕುರಿತು ಕೇವಲ ವೈದ್ಯಕೀಯ ಸಲಹೆ ಮತ್ತು ಮಾಹಿತಿಯನ್ನು ನೀಡುವುದಷ್ಟೇ ಅಲ್ಲ, ಅಂತಹ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುವ ಮೂಲಕ ಜನಜಾಗೃತಿಯನ್ನುಂಟುಮಾಡುವ ಸಂಕಲ್ಪವನ್ನು ಕೈಗೊಂಡಿದ್ದಾರೆ. ಸಮುದಾಯಕಲ್ಯಾಣ ಯೋಜನೆಗಳಿಗಾಗಿಯೇ ಸುಲಭ ಬೆಲೆಯ ಸ್ಕ್ರೀನಿಂಗ್ ಟೆಸ್ಟುಗಳು, ಕೈಗೆಟಕುವ ಬೆಲೆಯ ಚಿಕಿತ್ಸಾ ಆಯ್ಕೆಗಳು ಮುಂತಾದವುಗಳನ್ನು ರೂಪಿಸುವ ಗುರಿಯನ್ನು ಡಾ.ಶೆಟ್ಟಿ ಹೊಂದಿದ್ದಾರೆ.

ಡಾ.ರೋಹಿತ್ ಶೆಟ್ಟಿ:

ಡಾ.ರೋಹಿತ್ ಶೆಟ್ಟಿಅವರು ಬೆಂಗಳೂರಿನ ಕೆಂಪೇಗೌಡ ಇನ್ಸ್‍ಟಿಟ್ಯೂಟ್‍ ಆಫ್ ಮೆಡಿಕಲ್ ಸೈನ್ಸಸ್‍ನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು (ಆಓಃ) ಬೆಂಗಳೂರಿನ ಸೇಂಟ್‍ಜೋನ್ಸ್ ನ್ಯಾಶನಲ್‍ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಸಂಸ್ಥೆಯಲ್ಲಿ ಪಡೆದು ಕೊಂಡಿದ್ದಾರೆ. ಅಂತೆಯೆ, ನ್ಯೂರೊ-ಆಪ್ಥಲ್ಮಾಲಜಿ ಅಬ್ಸರ್ವರ್ ಶಿಪ್ ಅನ್ನು ಯುಸಿ ಇರ್ವಿನ್ (ಯುಎಸ್‍ಎ) ಹಾಗೂ ರಿಫ್ರ್ಯಾಕ್ಟಿವ್ ಸರ್ಜರಿ ಅಬ್ಸರ್ವರ್ ಶಿಪ್ ಅನ್ನು ಜರ್ಮನಿಯ ಯುನಿವರ್ಸಿಟಿ ಆಫ್ ಮೇಯಂಝ್ ನಲ್ಲಿ ಪೂರೈಸಿದ್ದಾರೆ. ಕೋರ್ಸನ್ನು 2006ರಲ್ಲಿ ಪೂರ್ಣಗೊಳಿಸಿದ್ದಾರೆ. ಅವರು ಏಔS, ಂSಅಖS, ಹಾಗೂ ಇಂಟರ್ ನ್ಯಾಶನಲ್ ಸೊಸೈಟಿ ಆಫ್‍ ಎಲೆಕ್ಟ್ರೊ ಫಿಜಿಯಾಲಜಿ ಆಂಡ್ ವಿಶನ್ ಸಂಸ್ಥೆಗಳ ಸದಸ್ಯರೂ ಆಗಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪೂರ್ವಾವಲೋಕಿತ ಜರ್ನಲ್ಲುಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ರಿಫ್ರೇಟಿವ್ ಸರ್ಜರಿ, ಕ್ಲಿನಿಕಲ್‍ ಎಲೆಕ್ಟ್ರೊಫಿಜಿಯಾಲಜಿ, ನ್ಯೂರೊ-ಆಪ್ಥಲ್ಮಾಲಜಿ ಮತ್ತು ಕ್ಲಿನಿಕಲ್‍ ರಿಸರ್ಚ್ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಪ್ರಸ್ತುತ ಅವರು ನಾರಾಯಣ ನೇತ್ರಾಲಯದ ಉಪಾಧ್ಯಕ್ಷರೂ ಹಾಗೂ ಅಲ್ಲಿನ ಹಿರಿಯ ಸಮಾಲೋಚಕ ನೇತ್ರ ತಜ್ಞರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Spread the love

Exit mobile version