Home Mangalorean News Kannada News ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Spread the love

ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಉಡುಪಿ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ನಿತ್ಯ ಈ ಬಗ್ಗೆ ಜಾಗೃತಿ ವಹಿಸುವುದು ಅತೀ ಅವಶ್ಯವಾಗಿದೆ. ಇಲ್ಲವಾದರೆ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

 

 
 
 
 

ಅವರು ಬುಧವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಶಿರ್ವ ವಲಯ, ಘಟಕ ಹಾಗೂ ಮಟ್ಟಾರು ಗ್ರಾಮಪಂಚಾಯತ್ ಸದಸ್ಯರ ಸಹಕಾರದೊಂದಿಗೆ ಎಸ್ ಎಲ್ ಆರ್ ಎಮ್ ಘಟಕದಲ್ಲಿ ವನಮಹೋತ್ಸವ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪರಿಸರ ಹಸಿರಾದರೆ ಪ್ರತಿಯೊಬ್ಬರ ಉಸಿರು ಸ್ವಚ್ಚವಾಗಿರುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಲಿನತೆ ಹೊಂದುತ್ತಿದ್ದು, ಪರಿಸರದ ಸಮತೋಲನ ಕಾಪಾಡಲು ಗಿಡಗಳನ್ನು ಹೆಚ್ಚು ಹೆಚ್ಚು ನೆಟ್ಟು ಬಳಸುವುದು ಅಗತ್ಯವಾಗಿದೆ ಎಂದರು.

ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ ಮಾತನಾಡಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಪರಿಸರ ಸಂರಕ್ಷಣೆ ಧ್ಯೇಯದಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ಬಾರಿ ಶಿರ್ವದ ಮಟ್ಟಾರ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದ್ದು ಜಿಲ್ಲೆಯಾದ್ಯಂತ ಸುಮಾರು 100 ಗಿಡಗಳನ್ನು ಶಿರ್ವ, ಕಲ್ಯಾಣಪುರ ವಲಯ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟು ಪೋಷಣೆ ಮಾಡುವ ಜವಾಬ್ದಾರಿಯನ್ನು ಸಂಘಟನೆಯ ವತಿಯಿಂದ ತೆಗೆದು ಕೊಳ್ಳಲಾಗಿದೆ. ಈಗಾಗಲೇ ಉಡುಪಿ ಧರ್ಮಪ್ರಾಂತ್ಯದ 51 ಘಟಕಗಳಲ್ಲಿಕಳೆದ ಭಾನುವಾರ ವನಮಹೋತ್ಸವ ಆಚರಣೆಯನ್ನು ಏಕಕಾಲದಲ್ಲಿ ನಡೆಸಲಾಗಿದ್ದು ಸಾವಿರಾರು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಈ ವನಮಹೋತ್ಸವ ಕೇವಲ ಕಾಟಾಚಾರದ ಕಾರ್ಯಕ್ರಮವಾಗಿ ನಡೆಸದೆ ನೆಟ್ಟ ಗಿಡವನ್ನು ಮರವಾಗಿ ಬೆಳೆಯುವ ತನಕ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯ ಜೊತೆಗೆ ಅದನ್ನು ಸರಿಯಾಗಿ ಪೋಷಣೆ ಮಾಡಿದವರಿಗೆ ವೈಯುಕ್ತಿಕ ಬಹುಮಾನ ನೀಡಲಾಗುತ್ತದೆ ಈ ಮೂಲಕ ಪರಿಸರ ಕಾಳಜಿಯನ್ನು ಕೇವಲ ನೆಪಮಾತ್ರಕ್ಕೆ ಮಾಡದೆ ಗಿಡಗಳು ಮರವಾಗಿ ಬೆಳೆಯುವ ತನಕವೂ ಜವಾಬ್ದಾರಿಯ ವಹಿಸುವ ಮೂಲಕ ಪರಿಸರ ಜಾಗೃತಿಯನ್ನು ಸಂಘಟನೆ ಕಳೆದ ಹಲವು ವರ್ಷಗಳಿಂದ ಮಾಡಕೊಂಡು ಬಂದಿದ್ದು ಮುಂದೆಯೂ ನಿರಂತರವಾಗಿ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ, ಸಹ ಕಾರ್ಯದರ್ಶಿ ಲೂವಿಸ್ ಡಿಸೋಜಾ, ಪದಾಧಿಕಾರಿ ಶಾಂತಿ ಪಿರೇರಾ, ಮಾಜಿ ಅಧ್ಯಕ್ಷರಾದ ಡಾ. ಜೆರಾಲ್ಡ್ ಪಿಂಟೊ, ವಲೇರಿಯನ್ ಫೆರ್ನಾಂಡಿಸ್ ಶಿರ್ವ ವಲಯ ಅಧ್ಯಕ್ಷರಾದ ಜುಲಿಯೆಟ್ ಡಿಸೋಜಾ, ಘಟಕಾಧ್ಯಕ್ಷೆ ಜಸಿಂತಾ ಡಿಸೋಜಾ, ಉಡುಪಿ ವಲಯಾಧ್ಯಕ್ಷ ಲೆಸ್ಲಿ ಕರ್ನೆಲಿಯೊ, ಕಲ್ಯಾಣಪುರ ವಲಯಾಧ್ಯಕ್ಷ ರೋಸಿ ಕ್ವಾಡ್ರಸ್, ಶಿರ್ವ ಗ್ರಾಪಂ ಉಪಾಧ್ಯಕ್ಷರಾದ ವಿಲ್ಸನ್ ರೊಡ್ರಿಗಸ್, ಮಟ್ಟಾರು ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಣ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯರು ದಿನೇಶ್ ಪಾಟ್ಕರ್, ಪೋಸ್ಟ್ ಮಾಸ್ಟರ್ ದಿನೇಶ್ ಪಾಟ್ಕರ್, ಮಟ್ಟಾರ್ ಬೊಬ್ಬರ್ಯ ದೇವಸ್ಥಾನದ ಅರ್ಚಕರಾದ ರಮೇಶ್ ಶೆಟ್ಟಿ, ಸ್ಥಳೀಯರಾದ ಸಂಜೀವ ಆಚಾರಿ ಹಾಗೂ ಇತರರು ಉಪಸ್ಥೀತರಿದ್ದರು


Spread the love

Exit mobile version