Home Mangalorean News Kannada News ಕದ್ರಿ ಉದ್ಯಾನವನದಲ್ಲಿ ಜ. 26 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ

ಕದ್ರಿ ಉದ್ಯಾನವನದಲ್ಲಿ ಜ. 26 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ

Spread the love

ಕದ್ರಿ ಉದ್ಯಾನವನದಲ್ಲಿ ಜ. 26 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ
ಮ0ಗಳೂರು: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಜ. 26 ರಿಂದ 29 ರವರೆಗೆ ಏರ್ಪಡಿಸಲಾಗಿರುತ್ತದೆ.

ಫಲಪುಷ್ಪ ಪ್ರದರ್ಶನವನ್ನು ಇಲಾಖೆಯ ಅನುದಾನ, ಇತರೆ ಸರಕಾರಿ ಇಲಾಖೆಗಳು, ಬ್ಯಾಂಕ್‍ಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ, ಅವರ ಸಹಕಾರದಿಂದ ಏರ್ಪಡಿಸಿ ಜಿಲ್ಲೆಯಲ್ಲಿ ತೋಟಗಾರಿಕೆ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ಜಿಲ್ಲೆಯ ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ ನಗರಗಳನ್ನು ಸುಂದರಗೊಳಿಸುವುದು, ಮೌಲ್ಯ ವರ್ದನೆ, ಆಧುನಿಕ ತಂತ್ರಜ್ಞಾನ ಬಳಕೆ, ಸವಯವ ಕೃಷಿ ಪದ್ದತಿಗೆ ಪ್ರೋತ್ಸಾಹ ಇತ್ಯಾದಿ ಚಟುವಟಿಕೆಗಳ ಪಾಲನೆ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡ್ಯೊಯ್ಯುವ ಉದ್ದೇಶವನ್ನು ಹೊಂದಿದೆ.

ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ ಆಹಾರ ಮೇಳ ಮತ್ತು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಫಲಪುಷ್ಪ ಪ್ರದರ್ಶನ ಪ್ರತಿ ದಿನ ಆಯೋಜಿಸಲಾಗಿದೆ.

ಜಿಲ್ಲಾ ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಗರವಾಸಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.

ಮಳಿಗೆಗಳಲ್ಲಿ ಉತ್ತಮ ಪ್ರದರ್ಶಿಕೆಗಳ ಸ್ಪರ್ಧೆ : ಮನೆಯಲ್ಲಿ ಬೆಳೆದಿರುವ ವಿವಿಧ ಜಾತಿಯ ಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ಫಲಪುಷ್ಪ ಪ್ರದರ್ಶನ ನಡೆಯುವ ದಿನದಂದು (ಜ. 26 ರಿಂದ 29 ರವರೆಗೆ) ಮಳಿಗೆಗಳಲ್ಲಿ ಉತ್ತಮ ರೀತಿಯಲ್ಲಿ ಜೋಡಿಸುವ ಸ್ಪರ್ಧೆ.

ನೈಜ್ಯ ಪುಷ್ಪ ಜೋಡಣೆ: (Fresh Flower Decoration) ನೈಜ್ಯ ಪುಷ್ಪ ಜೋಡಣೆ ಸ್ಪರ್ಧೆಯನ್ನು 2 ವಿಭಾಗಗಳಲ್ಲಿ ಆಯೋಜಿಸಲಾಗಿದ್ದು ಇದರಲ್ಲಿ 15 ವರ್ಷ ವಯೋಮಿತಿಯವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಪುಷ್ಪ ರಂಗೋಲಿ ಸ್ಪರ್ಧೆ: ವಿವಿಧ ಜಾತಿಯ ಪುಷ್ಪಗಳನ್ನು ಉಪಯೋಗಿಸಿ ರಂಗೋಲಿಯನ್ನುಹಾಕುವರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 15 ವರ್ಷ ವಯೋಮಿತಿಯವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ತರಕಾರಿ ಕೆತ್ತನೆ ಸ್ಪರ್ಧೆ: ವಿವಿಧ ಜಾತಿಯ ತರಕಾರಿ ಹಾಗೂ ಹಣ್ಣುಗಳನ್ನು ಉಪಯೋಗಿಸಿ ತರಕಾರಿ ಕೆತ್ತನೆ ಮಾಡುವವರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 15 ವರ್ಷ ವಯೋಮಿತಿಯವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ತರಕಾರಿ ಕೆತ್ತನೆ, ತೋಟಗಾರಿಕೆ ಕರಕುಶಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆಂಥೋರಿಯಂ ಗಿಡಗಳು, ಇತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಮೇಲೆ ಸೂಚಿಸಿರುವ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ದಿ. 23 ರೊಳಗಾಗಿ ತೋಟಗಾರಿಕೆ ಇಲಾಖೆ/ಸಿರಿ ತೋಟಗಾರಿಕೆ ಸಂಘದಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಸಿರಿ ತೋಟಗಾರಿಕೆ ಸಂಘ (ರಿ), ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣ ಬೆಂದೂರು, ಮಂಗಳೂರು .ದೂರವಾಣಿ ಸಂ: 9845523944/0824-2412628/9480354968 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love

Exit mobile version