Home Mangalorean News Kannada News ಕದ್ರಿ ದೇವಸ್ಥಾನದಲ್ಲಿ ಧ್ವನಿವರ್ಧಕ ನಿಲ್ಲಿಸಲು ಕ್ರೈಸ್ತ ವ್ಯಕ್ತಿಯಿಂದ ಮುಜರಾಯಿ ಇಲಾಖೆಗೆ ಮನವಿ – ಸಂಘಟನೆಗಳಿಂದ...

ಕದ್ರಿ ದೇವಸ್ಥಾನದಲ್ಲಿ ಧ್ವನಿವರ್ಧಕ ನಿಲ್ಲಿಸಲು ಕ್ರೈಸ್ತ ವ್ಯಕ್ತಿಯಿಂದ ಮುಜರಾಯಿ ಇಲಾಖೆಗೆ ಮನವಿ – ಸಂಘಟನೆಗಳಿಂದ ಆಕ್ರೋಶ

Spread the love

ಕದ್ರಿ ದೇವಸ್ಥಾನದಲ್ಲಿ ಧ್ವನಿವರ್ಧಕದಲ್ಲಿ ನಿಲ್ಲಿಸಲು ಕ್ರೈಸ್ತ ವ್ಯಕ್ತಿಯಿಂದ ಮುಜರಾಯಿ ಇಲಾಖೆಗೆ ಮನವಿ – ಸಂಘಟನೆಗಳಿಂದ ಆಕ್ರೋಶ

ಮಂಗಳೂರು: ಅನ್ಯಧರ್ಮೀಯರೊಬ್ಬರ ಮನವಿ ಮೇರೆಗೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧ್ವನಿವರ್ಧಕದಲ್ಲಿ ಹಾಕುವ ಶ್ಲೋಕವನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

ನಗರದ ಕದ್ರಿ ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಹಾಕುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಮಂಗಳೂರು ಮೇಯರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ದೇವಸ್ಥಾನದ ಧ್ವನಿವರ್ಧಕದಿಂದ ಸ್ಥಳೀಯ ಫ್ಲ್ಯಾಟ್ ಗಳಲ್ಲಿ ನೆಲೆಸುವವರಿಗೆ ತೊಂದರೆಯಾಗುತ್ತಿದ್ದು, ದೇವಸ್ಥಾನದ ಒಳಭಾಗಕ್ಕೆ ಕೇಳಿಸುವಂತೆ ಮಾತ್ರ ಹಾಕಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆರು ತಿಂಗಳ ಹಿಂದೆ ಬ್ಲೇನಿ ಡಿಸೋಜಾ ಸೇರಿದಂತೆ ಕೆಲವರು ಸಲ್ಲಿಸಿದ್ದ ಮನವಿಗೆ ಇದೀಗ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಜನರ ಶ್ರದ್ಧಾ ಭಕ್ತಿಯ ಕೇಂದ್ರವಾದ ಕದ್ರಿಯ ದೇವಸ್ಥಾನದಲ್ಲಿ ಹಾಕುವ ಶ್ಲೋಕ, ಭಕ್ತಿಗೀತೆಗಳಿಗೆ ಕಡಿವಾಣ ಹಾಕುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ. ಅನ್ಯಧರ್ಮೀಯರ ಮನವಿಗೆ ಸ್ಪಂದಿಸಿ ಧ್ವನಿವರ್ಧಕದಲ್ಲಿ ಹಾಕುವ ಭಕ್ತಿ ಗೀತೆಗಳನ್ನು ನಿಲ್ಲಿಸಿದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಚರ್ಚ್, ಮಸೀದಿಗಳಲ್ಲಿ ಹಾಕುವ ಧ್ವನಿವರ್ಧಕಗಳಿಗೂ ಕಡಿವಾಣ ಹಾಕಿ ಎಂಬ ಆಗ್ರಹ ಸಾಮಾಜಿಕ ಜಾಲತಣಗಳಲ್ಲಿ ಆರಂಭಗೊಂಡಿದೆ.

ಇದಕ್ಕೆ ಪ್ರತಿಯಾಗಿ ವರದಾರಾಜ ಬಾಳಿಗಾ ಎನ್ನುವವರು ತನ್ನ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಬ್ಲ್ಯಾನಿ ಡಿಸೋಜಾರ ವಿರುದ್ದ ಕದ್ರಿ ಠಾಣೆಗೆ ದೂರು ನೀಡಿದ್ದು, ಕದ್ರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love
1 Comment
Inline Feedbacks
View all comments
Gordost
6 years ago

ನಾವೆಲ್ಲರೂ ಭಯಂಕರ ಜಾತ್ಯತೀತ ರಾಷ್ಟ್ರದ ಪ್ರಜೆಗಳಾಗಿರುವುದರಿಂದ ಸಾವಿರಾರು ವರ್ಷ ಹಳೆಯದಾದ ದೇವಸ್ಥಾನದ ಕಾರ್ಯಕ್ರಮಗಳಿಗೂ ಕೂಡ ಮತೀಯ ಅಲ್ಪ ಸಂಖ್ಯಾತರ ಪರವಾನಗಿ ಪಡೆಯಬೇಕಾಗಿದೆ. ಇದೇ ಕಾನೂನನ್ನು ಅಲ್ಪ ಸಂಖ್ಯಾತರ ಮಸೀದಿ ಮತ್ತು ಪ್ರಾರ್ಥನಾ ಸ್ಟಳಗಳಿಗೂ ಅನ್ವಯಿಸಲು ಸರಕಾರ “ಸಿದ್ಧ” ವಾಗಿದೆಯೇ?
ಇತ್ತೀಚೆಗಷ್ಟೇ ಶಾಲಾ ಮಕ್ಕಳಿಗೆ ಧರ್ಮದ ಆಧಾರದಲ್ಲಿ ಬಿಸಿಯೂಟ ವಿತರಿಸದಿರುವ ಒಂದು ಅದ್ಭುತ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. ಇಂತಹ ನಿರ್ಧಾರಗಳಿಂದ ಕರ್ನಾಟಕ ಸರಕಾರ ಅಧಃಪತನದೆಡೆಗೆ ದಾಪುಗಾಲು ಹಾಕುತ್ತಿದೆ ಎಂದು ಮಂಗಳೂರಿಗರಿಗೆ ಅನ್ನಿಸಿದರೇ ಅದು ಸಹಜ ವಲ್ಲವೇ

wpDiscuz
Exit mobile version