ಕದ್ರಿ ಪಾರ್ಕ್‍ನಲ್ಲಿ 28 ಮತ್ತು 29 ರಂದು ಯುವ ಉತ್ಸವ

Spread the love

ಕದ್ರಿ ಪಾರ್ಕ್‍ನಲ್ಲಿ 28 ಮತ್ತು 29 ರಂದು ಯುವ ಉತ್ಸವ

ಮಂಗಳೂರು : ದ.ಕ. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಡೆಯುವ ಕರಾವಳಿ ಉತ್ಸವ-2017ರ ಅಂಗವಾಗಿ 2 ದಿನಗಳ ದ.ಕ. ಜಿಲ್ಲಾ ಯುವ ಉತ್ಸವವು ಡಿಸೆಂಬರ್ 28 ಮತ್ತು 29 ರಂದು ಕದ್ರಿ ಪಾರ್ಕ್‍ನ ತೆರೆದ ರಂಗಮಂದಿರದಲ್ಲಿ ನಡೆಯಲಿದೆ.

ಡಿಸೆಂಬರ್ 28 ರ ಕರಾವಳಿ ಯುವ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ. ಆರ್. ಲೋಬೋ ವಹಿಸಲಿದದು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿಗಳು, ಕುಮಾರ್, ಪಟ್ಲ ಸತೀಶ್ ಶೆಟ್ಟಿ, ಖ್ಯಾತ ಭಾಗವತರು ಯಕ್ಷ ಧ್ರುವ ಫೌಂಡೇಶನ್, ಮಂಗಳೂರು ಹಾಗೂ ಪೃಥ್ವಿ ಅಂಬರ್ ಖ್ಯಾತ ತುಳು ಚಲನಚಿತ್ರ ನಟರು ಭಾಗವಹಿಸಲಿದ್ದಾರೆ.

ಯುವ ಉತ್ಸವ 2017ರ ಅಂಗವಾಗಿ ದ.ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯ ಆಡಿಶನ್‍ನಲ್ಲಿ ಆಯ್ಕೆಗೊಂಡ ವೈಯಕ್ತಿಕ ಮತ್ತು ಸಮೂಹ ಸ್ಪರ್ಧೆಗಳು ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿದೆ. ಡಿಸೆಂಬರ್ 28 ರಂದು ನೃತ್ಯ, ಏಕಪಾತ್ರಾಭಿನಯ, ವಾದ್ಯ ಸಂಗೀತ, ಯಕ್ಷ ಯುಗಳ ನೃತ್ಯ ಸ್ಪರ್ಧೆಗಳು ನಡೆಯುತ್ತದೆ ಹಾಗೂ ಡಿಸೆಂಬರ್ 29 ರಂದು ಲಘು ಸಂಗೀತ, ಶಾಸ್ತ್ರೀಯ ಸಂಗೀತ, ಮೂಕಾಭಿನಯ, ಕಿರುನಾಟಕ, ಜಾನಪದ, ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಗಳು ನಡೆಯುತ್ತದೆ.

ಕರಾವಳಿ ಯುವ ಉತ್ಸವ ಕಾರ್ಯಕ್ರಮದ ಸಮಾರೋಪ ಮತ್ತು ಬಹುಮಾನ ಕಾರ್ಯಕ್ರಮವು ಡಿಸೆಂಬರ್ 29 ರಂದು ರಾತ್ರಿ 9 ಘಂಟೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಕರಾವಳಿ ಕಾಲೇಜು, ಪ್ರಥಮ, ದ್ವಿತೀಯ, ತೃತೀಯ, ಹಾಗೂ ಅತ್ಯುತ್ತಮ ಕರಾವಳಿ ಯುವಕ ಮತ್ತು ಯುವತಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ವಿಜೇತರಿಗೆ ಮತ್ತು ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಯುವ ಉತ್ಸವನ್ನು ನಿರ್ವಹಿಸಲು ಕಾರ್‍ಸ್ಟ್ರೀಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೋಡಲ್ ಕಾಲೇಜಾಗಿದ್ದು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಶೇಷಪ್ಪ ಹಾಗೂ ಡಾ.ನಾಗವೇಣಿ ಮಂಚಿ ಇವರು ಸಂಚಾಲಕರಾಗಿರುತ್ತಾರೆ. ಪ್ರಮಾಣ ಪತ್ರಗಳನ್ನು ಕರಾವಳಿ ಉತ್ಸವ ಸಮಿತಿಯ ಅಧ್ಯಕ್ಷೆ ಪ್ರಮಿಳಾ ಎಂ.ಕೆ. ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಹಾಗೂ ಕಾರ್ಯಧ್ಯಕ್ಷರಾದ ರಥಬೀದಿ ಕಾಲೇಜಿನ ಪ್ರಾಂಶುಪಾಲರದ ಪ್ರೊ. ರಾಜಶೇಖರ ಹೆಬ್ಬಾರ್ ಇವರು ನೀಡುತ್ತಾರೆ ಎಂದು ಕರಾವಳಿ ಯುವ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.


Spread the love