ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕನ್ನಡ ಕರ್ನಾಟಕಕ್ಕೆ ಘನತೆ ತಂದವರಿಗೆ ಅಭಿನಂದನಾ ಕಾರ್ಯಕ್ರಮ’ ನಡೆಯಿತು. ಈ ಅಭಿನಂದನಾ ಕಾರ್ಯಕ್ರಮವನ್ನು‘ಸಾಹಿತಿ ಮತ್ತು ಕಲಾವಿದರ ವೇದಿಕೆ’ ಹಾಗೂ ‘ಕನ್ನಡ ಭಾರತಿ’, ನವದೆಹಲಿ ಏರ್ಪಡಿಸಿತ್ತು.
ದೆಹಲಿಯ ಪ್ರತಿಷ್ಠಿತಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಆರಂಭಿಸಿದ್ದಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್.ಸಿದ್ದರಾಮಯ್ಯನವರನ್ನೂ, ದೆಹಲಿಯ ಮೋತಿಬಾಗ್ ಮೆಟ್ರೋರೈಲುನಿಲ್ದಾಣಕ್ಕೆ ‘ಸರ್.ಎಂ.ವಿಶ್ವೇಶ್ವರಯ್ಯ’ನವರ ಹೆಸರಿಡಲು ಕಾರಣರಾದ ಶ್ರೀ ಎಂ.ವೆಂಕಯ್ಯ ನಾಯ್ಡು ಅವರನ್ನೂ, ಇದನ್ನು ಸಾಕಾರಗೊಳಿಸಲು ವಿಶೇಷ ಪ್ರಯತ್ನ ಮಾಡಿರುವ ರಾಷ್ಟ್ರದ ರಾಜಧಾನಿಯಲ್ಲಿ ಕನ್ನಡದ ರಾಯಭಾರಿಗಳಾಗಿ ಕೆಲಸ ಮಾಡುತ್ತಿರುವ ದೆಹಲಿ ಕರ್ನಾಟಕ ಸಂಘಕ್ಕೆ ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ಎ.ಜೆ.ಸದಾಶಿವ ಅವರು ಅಭಿನಂದಿಸಿದರು. ಹಿರಿಯ ಮುಖಂಡ ವಿ.ಆರ್. ಸುದರ್ಶನ್ ಅವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ಉಮಾಶ್ರೀ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀ ದಯಾನಂದ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ದೆಹಲಿಯ ಗುರ್ಗಾಂವ್ನಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹದ ನಿರ್ಮಾಣದ ಯೋಜನೆಯೊಂದನ್ನು ದೆಹಲಿ ಕರ್ನಾಟಕ ಸಂಘವು ಕೈಗೆತ್ತಿಕೊಂಡಿದೆ ಎಂದರು. ಇದನ್ನು ಸಾಕಾರಗೊಳಿಸಲು ಕರ್ನಾಟಕ ಸರ್ಕಾರದ ನೆರವನ್ನು ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರಲ್ಲಿ ವಿನಂತಿಸಿಕೊಂಡರು. ಈ ವಸತಿ ಗೃಹವು ನಿರ್ಮಾಣವಾದರೆ ದೆಹಲಿಗೆ ಬರುವ ಕನ್ನಡದ ಐ.ಎ.ಎಸ್. ಆಕಾಂಕ್ಷಿಗಳು ಮತ್ತು ಕಲಾವಿದರಿಗೆ ಸಹಾಯವಾಗಬಲ್ಲದು ಎಂದರು. ಮಾತ್ರವಲ್ಲದೆ ಕನ್ನಡದ ಹೆಣ್ಣುಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಗಟ್ಟಿ ಭರವಸೆ ದೆಹಲಿ ಕರ್ನಾಟಕ ಸಂಘದ್ದಾಗಿದೆ ಎಂದರು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀಮತಿ ಉಮಾಶ್ರೀ, ಕಾರ್ಯದರ್ಶಿ ಶ್ರೀಮತಿ ಶಾಲಿನಿ ಗೋಯಲ್, ಇಲಾಖೆಯ ನಿರ್ದೇಶಕರಾದ ಶ್ರೀ ದಯಾನಂದ ಮತ್ತು ಕರ್ನಾಟಕ ಸರ್ಕಾರದ ದೆಹಲಿಯ ಪ್ರತಿನಿಧಿ ಶ್ರೀ ಅಪ್ಪಾಜಿ ನಾಡಗೌಡ, ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಶ್ರೀಮತಿ ವಂದನಾಗುರ್ನಾನಿ ಅವರುಗಳ ಮುತುವರ್ಜಿ ಮತ್ತು ಮಾರ್ಗದರ್ಶನದಿಂದಾಗಿ ಜೆ.ಎನ್.ಯು.ದಲ್ಲಿ ಕನ್ನಡ ಅಧ್ಯಯನ ಪೀಠ ಆರಂಭವಾಗಿದೆ ಎಂದರು.
ಸಂಘದಮನವಿ ಮೇರೆಗೆ ಮಾನ್ಯಕೇಂದ್ರ ಸಚಿವರಾದ ಶ್ರೀ ವೆಂಕಯ್ಯ ನಾಯ್ಡು ಅವರು ಅತ್ಯಂತ ಮುತುವರ್ಜಿ ವಹಿಸಿ ಸಂಘದ ಪಕ್ಕದ ಮೆಟ್ರೋ ಸ್ಟೇಶನ್ನಿಗೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಎಂದು ನಾಮಕರಣ ಮಾಡಿಸಿದರು. ಇವರ ಜೊತೆಗೆ ಐ.ಎ.ಎಸ್. ಅಧಿಕಾರಿ ಮನೋಜ್ಕುಮಾರ್ ತ್ರಿಪಾಠಿ ಅವರ ಸಹಕಾರವಿತ್ತು ಎಂದು ಸ್ಮರಿಸಿದರು.
ಎರಡು ದಶಕಗಳಿಂದ ದೆಹಲಿ ವಿಶ್ವವಿದ್ಯಾಲಯದಕನ್ನಡ ಪ್ರಾಧ್ಯಾಪಕರ ನೇಮಕವಾಗದೇ ಇದ್ದದ್ದು ಸಂಘದ ನಿರಂತರ ಪ್ರಯತ್ನದಿಂದಾಗಿ ಈಗ ಹುದ್ದೆಗಳ ಭರ್ತಿಕಾರ್ಯಕ್ಕೆಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ಸುಮಾರು 125ಕ್ಕೂ ಮಿಕ್ಕಿ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ದೆಹಲಿ ಕರ್ನಾಟಕ ಸಂಘದಲ್ಲಿ ನಡೆದಿವೆ. ಸಂಘಕ್ಕಾಗಿ ದುಡಿದ ಎಲ್ಲರನ್ನೂಅಧ್ಯಕ್ಷರು ನೆನೆದರು.
ಕನ್ನಡದ ಸಾಹಿತ್ಯ, ನಾಟಕ ಕೃತಿಗಳು ಹಿಂದಿಗೆ, ಇಂಗ್ಲೀಷ್ ಮತ್ತು ಭಾರತದ ಇತರ ಭಾಷೆಗಳಿಗೆ ಹೆಚ್ಚು ಅನುವಾದ ಗೊಳ್ಳಬೇಕು ಮತ್ತು ಅದರ ವಿಮರ್ಶೆಗಳು ರಾಷ್ಟ್ರದರಾಜಧಾನಿಯಲ್ಲಿ ನಡೆಯುತ್ತಿರಬೇಕು. ಕರ್ನಾಟಕದ ಜಾನಪದ ಕಲೆಗಳ ಪ್ರದರ್ಶನ ಕೂಡಾ ನಿರಂತರವಾಗಿ ನಡೆಸುವ ಪ್ರಯತ್ನಆಗಬೇಕು ಹಾಗೂ ಈ ಮೂಲಕ ಕರ್ನಾಟಕವನ್ನುರಾಷ್ಟ್ರಕ್ಕೆ ಪರಿಚಯಿಸುವ ಕೆಲಸವಾಗುತ್ತದೆ.
ಹೀಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಯನ್ನು ಭಾರತೀಯ ಭಾಷೆಗಳೊಡನೆ ಮತ್ತು ಅಂತಾರಾಷ್ಟ್ರೀಯ ಸಂಸ್ಕೃತಿ ಗಳೊಡನೆ ಮುಖಾಮುಖಿಯಾಗಿಸಿ, ಕನ್ನಡದ ಅನನ್ಯತೆಯನ್ನು ಜಗತ್ತಿಗೆ ತಿಳಿಸಿ ಹೇಳುವ ಕೆಲಸವನ್ನುಸಂಘವು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರು ದೆಹಲಿ ಕರ್ನಾಟಕ ಸಂಘದ ಸಾಧನೆಗಳನ್ನು ಶ್ಲಾಘಿಸಿ ದೆಹಲಿ ಅಥವಾ ಗುರ್ಗಾಂವ್ನಲ್ಲಿ ಅಗತ್ಯ ವಿರುವ ವಸತಿ ಸೌಕರ್ಯವನ್ನು ನಿರ್ಮಿಸಿ ಕೊಡುವುದರ ಬಗ್ಗೆ ಯೋಚಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಮಾತಾಡಿ ದೆಹಲಿ ಕರ್ನಾಟಕ ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು. ನ್ಯಾಯಮೂರ್ತಿಎ.ಜೆ.ಸದಾಶಿವ ಅವರು ರಾಜಧಾನಿಯಲ್ಲಿಕ ನ್ನಡವನ್ನು ಬಲಪಡಿಸುವುದರ ಬಗ್ಗೆ ಮಾತನಾಡಿದರು. ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ, ಶ್ರೀಮತಿ ಉಷಾ ಭರತಾದ್ರಿ ಕಾರ್ಯಕ್ರಮ ನಿರ್ವಹಿಸಿದರು.