ಕನ್ನಡವು ಎಂದೂ ಬರೇ ಭಾಷೆಗೆ ಸೀಮಿತವಲ್ಲ: ಸಚಿವ ಯು.ಟಿ ಖಾದರ್
ಮುಂಬಯಿ: ಕನ್ನಡವನ್ನು ಉಳಿಸಿ ಬೆಳೆಸುವುದೇ ಕರ್ನಾಟಕ ಸರಕಾರದ ಆಶೆಯಾಗಿದೆ. ಕನ್ನಡ ಒಂದು ಬರೀ ಭಾಷೆಯಲ್ಲ ಆದು ಇತಿಹಾಸ ಆಗಿದೆ. ಕನ್ನಡವು ಎಂದೂ ಬರೇ ಭಾಷೆಗೆ ಸೀಮಿತವಲ್ಲ. ಕಾರಣ ಕನ್ನಡ ಭಾಷೆ ಅಂದರೆ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಹೊಂದಿದೆ. ಆದುದರಿಂದಲೇ ಕನ್ನಡ ಜಾಗತಿಕವಾಗಿ ಚಿರಪರಿಚಿತ ಆಗಿ ಬಹುಕಾಲಕ್ಕೆ ಬಾಳಿಕೆಯಲ್ಲಿದೆ. ಇಂತಹ ಕನ್ನಡವು ಸಾಹಿತ್ಯ ಲೋಕದ ಪರಿಚಯಕ್ಕೆ ಇಂತಹ ಸಂಸ್ಥೆಗಳ ಸೇವೆ ಅಗತ್ಯವಾಗಿದೆ. ಕನ್ನಡಿಗರ ದೂರದೃಷ್ಟಿತ್ವ ಈ ಸಂಘದ ಸ್ಥಾಪನೆಗೆ ಕಾರಣವಾಗಿದ್ದು, ಕನ್ನಡದ ಸ್ವಾಭಿಮಾನದ ಭವನಗಳಲ್ಲಿ ಕನ್ನಡದ ಆಚಾರ ವಿಚಾರಗಳ ಸ್ಪಂದನೆ ಕನ್ನಡ ಸರಕಾರದ ಕರ್ತವ್ಯವಾಗಿದೆ. ಅರ್ಥ ಮಾಡಿ ಕೊಳ್ಳುವವರು ಮಾತ್ರ ಇತಿಹಾಸ ಉಳಿಸುವಂತಿದ್ದರೆ ಪರಭಾಷೆಗಳನ್ನು ಪ್ರೀತಿಸಿದಾಗಲೇ ನಮ್ಮ ಭಾಷೆಯೂ ವಿಸ್ತಾರವಾಗಿ ಬೆಳೆಯುವುದು. ಆ ಮೂಲಕ ಬಹು ಭಾಷೆಗಳಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಭಾಷೆಗಳು ಒಗ್ಗೂಡುವುದರಿಂದ ಸಾಮರಸ್ಯದ ಕೊಂಡಿಯಾಗಿ ಎಲ್ಲರ ಸಂಸ್ಕೃತಿಗಳು ಬೆಳೆಯಲು ಸಾಧ್ಯ. ಆದುದರಿಂದ ಭಾಷೆ ಬೆಳವಣಿಗೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಸರಕಾರದ ನಗರಾಭಿವೃದ್ಧಿ, ವಸತಿ ಸಚಿವ ಯು.ಟಿ ಖಾದರ್ ತಿಳಿಸಿದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕ ಸಂಘವು ಮಾಟುಂಗಾ ಪಶ್ಚಿಮದಲ್ಲಿನ ಸಂಘದ ಆವರಣದಲ್ಲಿ ನಿರ್ಮಿಸುವ ನೂತನ ಸಾಂಸ್ಕೃತಿಕ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ಖಾದರ್, ನಾನು ಮುಂಬಯಿಗೆ ಬರಲು ಎರಡು ಕಾರಣಗಳಿದ್ದು ಮೊದಲಾಗಿ ಕರ್ನಾಟಕ ಸಂಘ ಮುಂಬಯಿ ತುಂಬಾ ಹಳೆಯದಾದ ಸಂಘ. ಇದು ಎಲ್ಲಾ ಸಂಘ ಸಂಸ್ಥೆಗಳಿಗೆ ಒಂದು ಕೊಡೆ ಇಂದ್ದತೆ. ವಿದ್ಯಾಭ್ಯಾಸ ಯುವ ಪೀಳಿಗೆಗೆ ಕನ್ನಡ ಕಲಿಕೆ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಆದುದರಿಂದಲೇ ಹೊರನಾಡ ಕನ್ನಡಿಗರ ಸಂಸ್ಥೆಗಳಲ್ಲಿ ಕರ್ನಾಟಕ ಸಂಘ ಮುಂಬಯಿ ಪ್ರಥಮ ಸ್ಥಾನದಲ್ಲಿದೆ. ಓರ್ವ ಕನ್ನಡಿಗನಾಗಿ ಕರ್ನಾಟಕ ಸರಕಾರದ ಪ್ರತಿನಿಧಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಭಗ್ಯವೇ ಸರಿ. ಸಂಘದ ಸ್ಥಾಪಕರನ್ನು, ಅಂದಿನಿಂದ ಇಂದಿನ ವರೆಗೆ ದುಡಿದವರನ್ನು ಸ್ಮರಿಸುತ್ತಾ ಮೊದಲಾಗಿ ಈ ಮಹತ್ತರವಾದ ಯೋಜನೆಯನ್ನು ಕೈಗೊಂಡ ಪ್ರಸಕ್ತ ಅಧ್ಯಕ್ಷರÀು ಮತ್ತು ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ಆದುದರಿಂದ ನಮ್ಮ ಸರಕಾರದಿಂದ ಸಹಾಯ ನೀಡುವುದು ನನ್ನ ಸಚಿವ ಸ್ಥಾನದ ಆದ್ಯ ಕರ್ತವ್ಯ. ಅನುದಾನಕ್ಕೆ ಮಂತ್ರಿಕ್ಕಿಂತ ಸೋದರನಾಗಿ ಶ್ರಮಿಸುವೆ. ಆ ಮೂಲಕ ಕನಸಿನ ಭವನದ ಯೋಜನೆ ಬಹಳ ಉತ್ತಮವಾಗಿ ಮತ್ತು ಪೂರ್ಣವಾಗಿ ಪೂರೈಸಲಿ ಎಂದು ಹಾರೈಸಿದರು.
ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಕೆ.ಆರ್ ಪೇಟೆ ಶಾಸಕ ಡಾ| ನಾರಾಯಣ ಆರ್.ಗೌಡ, ಸೂರತ್‍ನ ಆದಾಯ ಕರ ಆಯುಕ್ತ ಶ್ರೀನಿವಾಸ ಟಿ.ಬಿದರಿ, ನಿವೃತ್ತ ಐಎಎಸ್ ಅಧಿಕಾರಿ ಐ.ಎಂ ವಿಠ್ಠಲಮೂರ್ತಿ, ಬಂಟರ ಸಂಘ ಮುಂಬಯಿ ಗೌರವ ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಶ್ರೀಮದ್ಭಾರತ ಮಂಡಳಿ ಮುಂಬಯಿ ಅಧ್ಯಕ್ಷ ಜಗನ್ನಾಥ ಪುತ್ರನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೆ.ಎಲ್ ಬಂಗೇರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್.ದೇವಾಡಿಗ, ಮೈಸೂರು ಅಸೋಸಿಯೇಶನ್ ಮುಂಬಯಿ ಅಧ್ಯಕ್ಷೆ ಕಮಲಾ ಕಾಂತರಾಜ್, ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಮೇಶ್ ಬಂಗೇರ, ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ ನಾಗರಾಜ, ಸಾಹಿತಿ-ಅಂಕಣಕಾರ ಜಯತೀರ್ಥ ರಾವ್, ಉದ್ಯಮಿ ಮನೋಹರ ನಾಯಕ್, ಮಹಾನಗರದ ಹೆಸರಾಂತ ಕಲಾವಿದ, ಸಂಘಟಕ ಕೆ.ಮಂಜುನಾಥಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿüಗಳು ಸಾಂದರ್ಭಿಕವಾಗಿ ಮಾತನಾಡಿ ಸಂಘದ ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿ ಎಂದು ಹಾರೈಸಿದರು.
ಮುಂಬಯಿನಲ್ಲಿ ಅಬ್ಬಕ್ಕ ಉತ್ಸವ:
ಅದೇ ಬರುವ ಅಕ್ಟೋಬರ್‍ನಲ್ಲಿ ಕರ್ನಾಟಕ ರಾಜ್ಯ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆಯೊಂದಿಗೆ ಮುಂಬಯಿನಲ್ಲಿ ಅಬ್ಬಕ್ಕ ಉತ್ಸವ ನಡೆಸಲು ಉದ್ದೇಶಿಸಿದ್ದು ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಮಹಾನಗರದಲ್ಲಿನ ಸಮಗ್ರ ಕನ್ನಡಿಗರು ಜೊತೆಗೂಡಿ ಮತ್ತೆ ಕರ್ಮಭೂಮಿಯಲ್ಲಿ ಕನ್ನಡಿಗರ ಶಕ್ತಿಯನ್ನು ಪ್ರದರ್ಶಿಸುವಂತಾಗ ಬೇಕು ಎಂದೂ ಸಚಿವ ಖಾದರ್ ವಿನಂತಿಸಿದರು.
ನಾರಾಯಣ ಗೌಡ ಮಾತನಾಡಿ ಸಚಿವ ಖಾದರ್ ಸಂಪರ್ಕ, ಸಂಬಂಧ ಇದ್ದರೆ ಎಲ್ಲಾ ಯೋಜನೆಗಳು ಪರಿಪೂರ್ಣಗೊಂಡಂತೆ. ನಾನೂ ಬಾಲ್ಯದಲ್ಲೇ ಉದರ ಪೆÇೀಷಣೆಗಾಗಿ ಮುಂಬಯಿ ಸೇರಿದ ಕನ್ನಡಿಗ. ಇಲ್ಲಿನ ಸಹೃದಯಿ ವಾತಾವರಣವೇ ನನ್ನನ್ನು ಉನ್ನತ ಸ್ಥಾನಕ್ಕೆ ಕೊಂಡಿರುವುದೇ ಇದಕ್ಕೆ ಸಾಕ್ಷಿ. ಹೊರನಾಡ ಕನ್ನಡಿಗರಲ್ಲಿನ ಪ್ರೀತಿ ಒಳನಾಡಿನಲ್ಲಿ ಸಿಗುತ್ತಿಲ್ಲ. ಎಲ್ಲಾ ಸಮುದಾಯಕ್ಕೆ ಸೇರಿದ ಈ ಕರ್ನಾಟಕ ಸಂಘದ ಸೇವೆ ಶ್ರೇಷ್ಠವಾದುದು. ಕರ್ಮಭೂಮಿಯಲ್ಲಿ ಜನ್ಮಭೂಮಿಯ ಋಣ ಪೂರೈಸಲು ಈ ಭವನ ಪೂರಕವಾಗಲಿ. ಆ ಮೂಲಕ ಕನ್ನಡಿಗರೆಲ್ಲರ ಹೃದಯದಲ್ಲಿ ಕನ್ನಡ ರಾರಾಜಿಸಲಿ ಎಂದರು.
ಮಾನವನ ದೃಷ್ಟಿ ಬದಲಾದಾಗಲೇ ದೃಶ್ಯಬದಲಾಗುವುದು. ಮನುಕುಲ ಅಂದರೆ ಬದುಕುವುದು ಬೇರೆ ಬಾಳುವುದು ಬೇರೆ, ಮನುಜರಾದ ನಾವು ಬದುಕಿ ಬಾಳಬೇಕು. ಎಂಬತ್ತೈದು ವರ್ಷಗಳ ಹಿಂದೆ ದೂರದೃಷ್ಠಿವವುಳ್ಳ ಕನ್ನಡಿಗ ಪುಣ್ಯಾತ್ಮರು ಸಂಸ್ಥೆ ಎಂಬ ಮರವನ್ನು ನೆಟ್ಟಿದ್ದರು. ನಂತರ ಹಲವಾರು ಜನರು ಅದರ ಪೆÇೀಷಣೆಯನ್ನು ಮಾಡುತ್ತಾ ಈ ಸಂಘವನ್ನು ಈ ಮಟ್ಟಕ್ಕೆ ಬೆಳೆಸಿದ್ದು, ಎಲ್ಲಾ ಕನ್ನಡಾಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಚರಿತ್ರೆಗಳನ್ನು ಶ್ರೀಮಂತ ಗೊಳಿಸಲು ಇಂತಹ ಭವನ ಅಗತ್ಯವಿದೆ. ಎಲ್ಲೆಡೆ ಸಂಬಂಧಗಳ ಶಿಥಿsಲತೆ, ಸಾಮಾಜಿಕ ಸಮಾನತೆ. ನಮ್ಮ ಸಂಸ್ಕೃತಿ ಕರ್ನಾಟಕ ಸಂಘದಲ್ಲಿ ಪಸರಿಸಬೇಕು ಎಂದು ಸುರೇಶ್ ಗುರ್ಮೆ ಕರೆಯಿತ್ತರು.
ಖಾದರ್ ಓರ್ವ ಹಸನ್ಮುಖಿ ಉತ್ಸಾಹ ರಾಜಕಾರಣಿ. ಅವರ ಹಸ್ತ ಸೇರಿದ ಕಾರ್ಯಗಳು ಪರಿಪೂರ್ಣವೇ ಸರಿ. ಮುಂಬಯಿ ಕನ್ನಡಿಗರು ತುಂಬಾ ಶ್ರಮಿಕರು ಮಾತ್ತು ಅಷ್ಟೇ ಸಹಿಷ್ಣುಗಳು ಅಂತೆಯೇ ನೈತಿಕಶಕ್ತಿ ಸಂಘಟನಾ ಶಕ್ತಿವುಳ್ಳವರು. ಕನ್ನಡ ಉಳಿಸಿದರೆ ಕೀರ್ತಿ ನಿಮಗೆ ಸಲ್ಲುತ್ತದೆ. ಆದುದರಿಂದ ಈ ಅದ್ಭುತವಾದ ಯೋಜನೆ ಶೀಘ್ರವಾಗಿ ಪೂರ್ಣಗೊಳ್ಳಲಿ ಮಾತೆ ಭವನೇಶ್ವರಿ ನಿಮಗೆ ಆಶೀರ್ವಾದಿಸಲಿ ಎಂದÀು ವಿಠ್ಠಲಮೂರ್ತಿ ಹಾರೈಸಿದರು.
ಇದೊಂದು ಬಹುದೊಡ್ಡ ಕನಸಿನ ಯೋಜನೆ. ಕನ್ನಡಿಗರೆಲ್ಲರೂ ಕೈಜೋಡಿಸಬೇಕು. ಒಂದು ಸಾಂಸ್ಕೃತಿಕ ಮನಸ್ಸನ್ನು ನಿರ್ಮಿಸಿದರೆ ಒಳ್ಳೆಯ ಸಮಾಜವನ್ನು ನಿರ್ಮಿಸಿದಾಗೆ. ಸಾಂಸ್ಕೃತಿಕ ಸಮಾಜವನ್ನು ಕಟ್ಟುವುದು ಒಳ್ಳೆಯ ಸಮಾಜ ಕಟ್ಟಿದಂತೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಮನೋಹರ ಕೋರಿ ತಿಳಿಸಿದರು.
ಶ್ರೀ ಉಮಾ ಮಹೇಶ್ವರಿ ದೇವಾಲಯ ಜೆರಿಮೆರಿ ಇದರ ಪ್ರಧಾನ ಅರ್ಚಕ ವಿದ್ವಾನ್ ಶ್ರೀ ಎಸ್.ಎನ್‍ಉಡುಪ ತನ್ನ ಪೌರೋಹಿತ್ಯದಲ್ಲಿ ಭೂಮಿಪೂಜೆಗಳೊಂದಿಗೆ ಶಿಲಾನ್ಯಾಸ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ಹರಸಿದರು. ಮನೋಹರ ಎಂ.ಕೋರಿ ಮತ್ತು ಅರಣಾದತಿ ಮನೋಹರ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಕರ್ನಾಟಕ ಸಂಘದ ಮತ್ತು ಮಹಾನಗರದ ಹಲವಾರು ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರನೇಕರು ನೂರಾರು ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅತಿಥಿüಗಳನ್ನು ಸಾಂಪ್ರದಾಯಿಕವಾಗಿ ವೇದಿಕೆಗೆ ಬರಮಾಡಿ ಕೊಂಡರು. ಎನ್.ಕೆ.ಇ.ಎಸ್ ಶಾಲಾ ಮಕ್ಕಳು ಕನ್ನಡ ನಾಡಗೀತೆ ಮತ್ತು ಮಹಾರಾಷ್ಟ್ರ ನಾಡಗೀತೆಯನ್ನಾಡಿದರು.
ಡಾ| ಶ್ಯಾಮಲಾ ಪ್ರಕಾಶ್ ಪ್ರಾರ್ಥನೆಯನ್ನಾಡಿದರು. ಕರ್ನಾಟಕ ಸಂಘ ಮುಂಬಯಿ ಗೌರವ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು ಸ್ವಾಗತಿಸಿದರು. ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕ ಓಂದಾಸ್ ಕಣ್ಣಂಗಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಡಾ| ಈಶ್ವರ ಅಲೆವೂರು, ಗೌರವ ಕೋಶಾಧಿಕಾರಿ ಎಂ.ಡಿ ರಾವ್, ಡಾ| ಎಸ್.ಕೆ ಭವಾನಿ, ಮೋಹನ್ ಮಾರ್ನಾಡ್ ಅತಿಥಿüಗಳಿಗೆ ಶಾಲು ಹೊದೆಸಿ ಪುಷ್ಫಗುಪ್ಚ, ಸ್ಮರಣಿಗಳನ್ನೀಡಿ ಗೌರವಿಸಿದರು. ರಾಜೀವ್ ನಾಯ್ಕ್, ಅವಿನಾಶ್ ಕಾಮತ್, ಸುರೇಂದ್ರಕುಮಾರ್ ಶೆಟ್ಟಿ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಮಾಲತಿ ಚಂದ್ರಕಾಂತ್ ಅತಿಥಿüಗಳನ್ನು ಪರಿಚಯಿಸಿ ವಂದನಾರ್ಪಣೆಗೈದರು.