Home Mangalorean News Kannada News ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ

ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ

Spread the love

ಕನ್ನಡ ನಾಡುನುಡಿಗೆ ಯಕ್ಷಗಾನ ತಾಳಮದ್ದಲೆ ಕೊಡುಗೆ ಅನನ್ಯ: ಮುಲ್ಕಿ ಕರುಣಾಕರ ಶೆಟ್ಟಿ

ಮಂಗಳೂರು: ಗ್ರಾಮಾಂತರ ಪ್ರದೇಶದ ಯಕ್ಷ ಬಾಲ ಪ್ರತಿಭೆಗಳನ್ನು ಗುರುತಿಸಿ ಯಕ್ಷಗಾನ, ತಾಳಮದ್ದಲೆ ತರಬೇತಿಗೊಳಿಸಿ ತನ್ಮೂಲಕ ಪ್ರದರ್ಶ ನಗೊಳಿಸುವುದು ಕನ್ನಡ ನಾಡುನುಡಿಗೆ ಸೇವೆಸಲ್ಲಿಸುವುದು ಅನನ್ಯ. ನಮ್ಮ ಸಂಸ್ಕø ತಿಯ ಜೀವಸತ್ವದ ಚಿಣ್ಣರ ಯಕ್ಷರಂಗ ಕಲಾ ಜಗತ್ತಿನಲ್ಲಿ ಸಂಭ್ರಮಿಸಲಿ ಬೆಳಗಲಿ ಎಂದು ಅಖಿಲ ಭಾರತ ತುಳು ಒಕ್ಕೂ ಟದ ಕೋಶಾಧಿಕಾರಿ ಮುಲ್ಕಿ ಕರುಣಾ ಕರ ಶೆಟ್ಟಿ ಇವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹ ಯೋಗದಲ್ಲಿ ರಂಗಸ್ಪಂದನ (ರಿ) ಮಂಗಳೂರುರವರು ಕಾವೂರು ಪದವು ಮಂಗಳೂರು ಶ್ರೀ ಗುರು ವೈದ್ಯನಾಥ ಬಬ್ಬುಸ್ವಾಮೀ ದೈವಸ್ಥಾನದ ಸಭಾ ಭವನದಲ್ಲಿ ಹಮ್ಮಿಕೊಂಡ ಮುಂಗಾರು ರಂಗ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಜ್ಯೋತಿ ಪ್ರಜ್ವಲಿಸಿ ಶುಭ ಹಾರೈಸಿದರು.

ಡಾ. ದಿನಕರ ಎಸ್ ಪಚ್ಚನಾಡಿ ಮಾತನಾಡಿ ಈ ಪರಿಸರದ ಯುವ ಯಕ್ಷ ಪ್ರತಿಭೆಗಳು ರಂಗದಲ್ಲಿ ಬೆಳಗಿ ನಮ್ಮ ಸಂಸ್ಕøತಿ, ಸಂಸ್ಕಾರಗಳನ್ನು ಬದು ಕಿನಲ್ಲಿ ಅಳವಡಿಸಲು ಅವಕಾಶಗಳನ್ನು ಕಲ್ಪಿಸಿ ಕೊಟ್ಟ ರಂಗ ಸ್ಪಂದನದ ಪರಿಕಲ್ಪ ನೆಗಳಿಗೆ ತಮ್ಮ ಅನುಭವದ ಅನಿಸಿಕೆಗ ಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದೈವಸ್ಥಾನದ ಗುರಿಕಾ ರರಾದ ಕುಸುಮಾಕರ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ಕರ್ಕೆರಾ ಹಾಗೂ ಶ್ರೀ ಕಚ್ಚೂರ ಮಾಲ್ದಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಎಂ.ಸಿ ಕುಮಾರ್‍ರವರು ಶುಭಾಶಂಸ ನೆಗೈದರು ರಂಗಸ್ಪಂದನದ ಸಂಚಾಲಕ ವಿ.ಜಿ ಪಾಲ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಚಿನ್‍ಪಾಲ್ ಉಪ ಸ್ಥಿತರಿದ್ದರು. ನಿವೇದಿತಾ ಹರೀಶ್ ಕುಮಾರ್ ಕಾರ್ಯಕ್ರಮವನ್ನು ನಿರೂ ಪಿಸಿ ಹರೀಶ್ ಕುಮಾರ್ ಕಾವೂರು ವಂದಿಸಿದರು.
ಚೆಂಡೆ ಮದ್ದಲೆ ಝೇಂಕಾರದೊಂ ದಿಗೆ ಶ್ರೀ ಕಚ್ಚೂರ ಮಾಲ್ದಿ ಯಕ್ಷಗಾನ ಮಂಡಳಿಯ ಯಕ್ಷ ಪ್ರತಿಭೆಗಳಿಂದ ಏಕದಶಿ ಶ್ರೀದೇವಿ ಮಹಾತ್ಮೆ ತಾಳಮ ದ್ದಲೆ ಹಾಗೂ ಯಕ್ಷದಿಗ್ಗಜರಾದ ಡಾ. ದಿನಕರ ಎಸ್ ಪಚ್ಚನಾಡಿ ಮತ್ತು ದಯಾನಂದ ಕತ್ತಲ್ ಸಾರ್‍ರವರಿಂದ ಕೃಷ್ಣ-ಜಾಂಬವಂತ ಯಕ್ಷಗಾನ ಪಾತ್ರ ಸಂವಾದ ರಂಗದಲ್ಲಿ ಸಂಭ್ರಮಿಸಿತು.


Spread the love

Exit mobile version