Home Mangalorean News Kannada News ಕನ್ನಡ ಬಾವುಟ, ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದೆ –ವಿನಯ್ ಕುಮಾರ್ ಸೊರಕೆ

ಕನ್ನಡ ಬಾವುಟ, ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದೆ –ವಿನಯ್ ಕುಮಾರ್ ಸೊರಕೆ

Spread the love

ಕನ್ನಡ ಬಾವುಟ, ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದೆ –ವಿನಯ್ ಕುಮಾರ್ ಸೊರಕೆ

ಉಡುಪಿ: ಟಿಪ್ಪುಸುಲ್ತಾನ್ ಸಾಧನೆ ಬಗ್ಗೆ ಉಲ್ಲೇಖ ಮಾಡಿದ ರಾಷ್ಟ್ರಪತಿಗೆ ಕರ್ನಾಟಕದ ಬಿಜೆಪಿ ಸರಕಾರ ಅವಮಾನ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಅವರು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಯಡಿಯೂರಪ್ಪನವರು ವಿರೋಧ ಪಕ್ಷದಲ್ಲಿದ್ದಾಗ ಟಿಪ್ಪುವಿನ ವೇಷ ಹಾಕಿ ಸಂಭ್ರಮಿಸಿದ್ದರು. ಅಲ್ಲದೆ ಸಚಿವ ಜಗದೀಶ್ ಶೆಟ್ಟರ್ ಅವರು ಕೂಡ ಟಿಪ್ಪುವಿನ ವೇಷ ಹಾಕಿದ್ದರು ಆದರೆ ಈಗ ಅವರು ಅಧಿಕಾರದಲ್ಲದ್ದಾರೆ ಟಿಪ್ಪುವಿನ ಪಠ್ಯವನ್ನು ತೆಗೆದು ಹಾಕುವುದಾಗಿ ಹೇಳುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಆರಂಭಿಸಿದ್ದು ಬಿಜೆಪಿ ಸರಕಾರ ಅದನ್ನು ಈಗ ರದ್ದು ಮಾಡಿದೆ. ಬಿಜೆಪಿಯವರದ್ದು ಅಧಿಕಾರದಲ್ಲಿದ್ದಾಗ ಒಂದು ನೀತಿ, ವಿಪಕ್ಷದ್ಲಲಿದ್ದಾಗ ಒಂದು ನೀತಿ ಯಾಕೆ. ಬಿಜೆಪಿಗರ ದ್ವಂದ್ವ ನೀತಿ ಖಂಡನೀಯ ಎಂದರು.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಬಾವುಟ ಹಾರಿಸದೆ ಇರುವ ಬಿಜೆಪಿ ಸರ್ಕಾರದ ವಿರುದ್ದ ಮಾತನಾಡಿದ ಸೊರಕೆ ಬೇರೆ ಬೇರೆ ರಾಜ್ಯದಲ್ಲಿ ಅಲ್ಲಿನ ಭಾಷೆಗೆ ಸಂಬಂಧಪಟ್ಟ ಬಾವುಟ ಇದೆ ಅದರಂತೆ ಕರ್ನಾಟಕದಲ್ಲೂ ಕನ್ನಡ ಭಾಷೆಗೆ ಹೊಂದಿಕೊಂಡಿರುವ ಪ್ರತ್ಯೇಕ ಬಾವುಟವಿದೆ. ಹಿಂದಿನ ಸರ್ಕಾರದಲ್ಲಿ ರಾಷ್ಟ್ರಧ್ವಜದೊಂದಿಗೆ ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ಬೇಕೆನ್ನುವ ತೀರ್ಮಾನ ಆಗಿತ್ತು. ಸಿದ್ದರಾಮಯ್ಯನವರು ಪ್ರತ್ಯೇಕ ಬಾವುಟ ತೀರ್ಮಾನ ಕೈಗೊಂಡಿದ್ರು. ರಾಜ್ಯದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕಾ ಕರ್ನಾಟಕ ಧ್ವಜ ಬೇಕೆನ್ನುವ ದ್ವಂಧ್ವತೆ ಈ ಸರ್ಕಾರದಲ್ಲಿ ಕಾಣುತ್ತಿದೆ. ಕೆಲವು ಜಿಲ್ಲೆಯಲ್ಲಿ ರಾಷ್ಟ್ರಧ್ವಜ ಹಾಗೂ ಕರ್ನಾಟಕ ಧ್ವಜ ಎರಡೂ ಹಾರಿಸಲಾಗಿದೆ. ಆದರೆ ಉಡುಪಿ ಜಿಲ್ಲೆ ಸೇರಿದಂತೆ ಕರ್ನಾಟಕ ಧ್ವಜ ಹಾರಿಸಲೇ ಇಲ್ಲ ಧ್ವಜದ ವಿಚಾರದಲ್ಲಿ ದ್ವಂಧ್ವ ನಿಲುವು ಯಾಕೆ ಎಂದು ಪ್ರಶ್ನಿಸಿದರು.


Spread the love

Exit mobile version