Home Mangalorean News Kannada News ‘ಕನ್ಹಯ್ಯ ಕುಮಾರ್ ಮಂಗಳೂರು ಭೇಟಿ’ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಸಿಪಿಐ

‘ಕನ್ಹಯ್ಯ ಕುಮಾರ್ ಮಂಗಳೂರು ಭೇಟಿ’ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಸಿಪಿಐ

Spread the love
RedditLinkedinYoutubeEmailFacebook MessengerTelegramWhatsapp

‘ಕನ್ಹಯ್ಯ ಕುಮಾರ್ ಮಂಗಳೂರು ಭೇಟಿ’ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಸಿಪಿಐ

ಮಂಗಳೂರು: ಖ್ಯಾತ ಹೋರಾಟಗಾರ ಡಾ.ಕನ್ಹಯ್ಯ ಕುಮಾರ್ ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂಬ ಗಾಳಿಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕನ್ಹಯ್ಯ ಕುಮಾರ್ ಅವರ ಮಂಗಳೂರು ಪ್ರವಾಸ ಸದ್ಯಕ್ಕೆ ಇರುವುದಿಲ್ಲ ಎಂದು ಸಿಪಿಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಿ.ಕುಕ್ಯಾನ್ ಸ್ಪಷ್ಟಪಡಿಸಿದ್ದಾರೆ.

ಡಾ.ಕನ್ಹಯ್ಯ ಕುಮಾರ್ ಸಿಪಿಐನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಪಕ್ಷಕ್ಕೆ ತಿಳಿಸದೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಅವರ ಮಂಗಳೂರು ಭೇಟಿ ಬಗ್ಗೆ ಜಿಲ್ಲಾ ಸಮಿತಿಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೂ ಪಕ್ಷದ ಮುಂದಾಳುಗಳೊಡನೆ ವಿಚಾರಿಸಿದಾಗ ಡಾ.ಕನ್ಹಯ್ಯ ಕುಮಾರ್ ಮಂಗಳೂರಿಗೆ ಬರುವ ಯಾವುದೇ ಕಾರ್ಯಕ್ರಮ ಸದ್ಯಕ್ಕೆ ಇರುವುದಿಲ್ಲ. ಕರಾವಳಿಯ ಜನತೆ ಸುಳ್ಳುಸುದ್ದಿಗಳಿಗೆ ಕಿವಿಗೊಡಬಾರದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version