ಕಬ್ಬು ಬೆಳೆಗಾರರಿಗೆ ನೆರವಾಗಿ; ತೆನೆ ಹಬ್ಬಕ್ಕೆ ಕಡಿಮೆ ದರದಲ್ಲಿ ಬಳ್ಕುಂಜೆಯಲ್ಲಿ ಕಬ್ಬು ಲಭ್ಯ
ಮಂಗಳೂರು: ಕೋವಿಡ್ ಸಮಸ್ಯೆಯಿಂದಾಗಿ ಕಬ್ಬಿನ ಕೃಷಿಗೆ ಗ್ರಾಹಕರು ಇಲ್ಲದೆ ಇರುವಾಗ ಕೃಷಿಕರ ನೆರವಿಗೆ ಬರುವಂತೆ ಬಳ್ಕುಂಜೆ ಚರ್ಚಿನ ಧರ್ಮಗುರುಗಳು ಕರೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಕ್ರೈಸ್ತರ ತೆನೆ ಹಬ್ಬಕ್ಕೆ ಬಳ್ಕುಂಜೆ ಪರಿಸರದ ಬಡ ಕೃಷಿಕರು ಕಬ್ಬಿನ ಕೃಷಿಯನ್ನು ಮಾಡುತ್ತಿದ್ದರು. ಈ ಬಾರಿ ಸುಮಾರು 2.5 ಲಕ್ಷ ಕಬ್ಬಿನ ಕೃಷಿಯನ್ನು ಸಾಲ ಮಾಡಿ ಮಾಡಿದ್ದು ಕೋವಿಡ್ ಸಮಸ್ಯೆಯಿಂದ ಸೂಕ್ತ ಗ್ರಾಹಕರಿಲ್ಲದೆ ಹಾಳು ಮಾಡುವ ಪರಿಸ್ಥಿತಿ ಬಂದಿತ್ತು.
ಇದನ್ನು ಗಮನಿಸಿದ ಬಳ್ಕುಂಜೆ ಚರ್ಚಿನ ಧರ್ಮಗುರುಗಳು ಕಬ್ಬು ಬೆಳೆದ ರೈತರು ಗ್ರಾಹಕರಿಲ್ಲದೆ ಕಂಗಾಲಗಾಬಾರದು ಎಂಬ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಕಬ್ಬು ಖರೀದಿಸುವಂತೆ ಮನವಿ ಮಾಡಿದ್ದಾರೆ. ಕಳೆದ ಬಾರಿ ಒಂದು ಕಬ್ಬಿಗೆ 25 ರೂಪಾಯಿಗಳನ್ನು ನೀಡಲಾಗಿತ್ತು ಆದರೆ ಈ ಬಾರಿ ಯಾವುದೇ ಲಾಭದ ಆಸೆ ಇಟ್ಟುಕೊಳ್ಳದೆ ಒಂದು ಕಬ್ಬಿಗೆ 18 ರೂಪಾಯಿ ಲೆಕ್ಕದಲ್ಲಿ ಉದಾರ ದಾನಿಗಳ ನೆರವಿನಿಂದ ಅಗತ್ಯವಿರುವ ಚರ್ಚುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.
ಯಾವ ಚರ್ಚಿಗೆ ಎಷ್ಟು ಕಬ್ಬು ಬೇಕು ಎನ್ನುವುದನ್ನು ಮೊಬೈಲ್ ಸಂಖ್ಯೆ 9740279367 ಗೆ ತಿಳಿಸಿದ್ದಲ್ಲಿ ವಾಹನ ವ್ಯವಸ್ಥೆ ಮಾಡಿ ತಲುಪಿಸುವ ವ್ಯವಸ್ಥೆ ಮಾಡಲು ಧರ್ಮಗುರುಗಳು ನಿರ್ಧರಿಸಿದ್ದಾರೆ. ಅಗತ್ಯ ಇರುವವರು ಸಂಪರ್ಕಿಸುವಂತೆ ಕೋರಲಾಗಿದೆ.