ಕಮಲಶಿಲೆ ಗೋ ಕಳ್ಳತನಕ್ಕೆ ಯತ್ನ: ಈರ್ವರು ಆರೋಪಿಗಳು ಬಂಧನ

Spread the love

ಕಮಲಶಿಲೆ ಗೋ ಕಳ್ಳತನಕ್ಕೆ ಯತ್ನ: ಈರ್ವರು ಆರೋಪಿಗಳು ಬಂಧನ

 
ಕುಂದಾಪುರ: ಕಳೆದ ಐದು ದಿನಗಳ ಹಿಂದೆ ಕಮಲಶಿಲೆ ದೇಗುಲದ ಗೋಶಾಲೆಯಲ್ಲಿ ಗೋ ಕಳ್ಳತನಕ್ಕೆ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಶಂಕರನಾರಾಯಣ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬಜ್ಪೆ ಮೂಲದ ನಿವಾಸಿಗಳಾದ ವಾಜೀದ್ (26) ಹಾಗೂ ಫೈಜಲ್ (40) ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ‌ ಬಳಸಲಾದ ಕಾರನ್ನು ವಶಕ್ಕೆ ಪಡೆದಿದ್ದಾರೆ‌.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಕಳೆದ ಶನಿವಾರ ತಡರಾತ್ರಿ ಕಮಲಶಿಲೆಯ‌ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗೋ ಶಾಲೆಗೆ ನುಗ್ಗಿದ್ದ ಅಪರಿಚಿತ ಕಳ್ಳರ ದನ‌ ಕದಿಯುವ ಪ್ರಯತ್ನವನ್ನು ಸೈನ್ ಇನ್ ಸೆಕ್ಯೂರಿಟಿ ತಂಡದ ಸಕಾಲಿಕ ಎಚ್ಚರಿಕೆಯಿಂದ ವಿಫಲವಾಗಿರುವ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಎಸ್.ಪಿ ಡಾ.ಅರುಣ್ ಕೆ, ಹೆಚ್ಚುವರಿ ಎಸ್.ಪಿ ಎಸ್.ಟಿ.ಸಿದ್ದಲಿಂಗಪ್ಪ , ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ಜಯರಾಂ ಗೌಡ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಹಾಗೂ ಶಂಭುಲಿಂಗಯ್ಯ.ಎಂ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments