Home Mangalorean News Kannada News ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ನಾಪತ್ತೆ !

ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ನಾಪತ್ತೆ !

Spread the love

ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ಕಾಣೆ!

ಮಂಗಳೂರು: ನಗರದ ಪೋಲಿಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2017 ರ ಮೇ 31 ರವರೆಗೆ 60 ಪ್ರಕರಣಗಳು ದಾಖಲಾಗಿದ್ದು 79 ಮಂದಿ ಕಾಣೆಯಾಗಿರುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಗೆ ಡಿಸಿಪಿ ಹನುಮಂತರಾಯ ಮಾಹಿತಿ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಮಾಹಿತಿ ನೀಡಿದ ಅವರು 40 ತನಿಖಾ ಹಂತದಲ್ಲಿದ್ದು,, 29 ಪ್ರಕರಣ ಭೇಧಿಸಲಾಗಿದೆ. 22 ಪ್ರಕರಣದಲ್ಲಿ 17 ಗಂಡು ಮಕ್ಕಳು, 5 ಹೆಣ್ಣು ಮಕ್ಕಳ ಪತ್ತೆ ಕಾರ್ಯ ಬಾಕಿ ಇದೆ ಎಂದರು.

ಸಭೆಯಲ್ಲಿ ಹಮೀದ್ ಎನ್ನುವ ವ್ಯಕ್ತಿ ತನ್ನ ಮಗಳು ಕಾಣೆಯಾಗಿ 2 ವರ್ಷವಾದರೂ ಇನ್ನೂ ಪತ್ತೆಯಾಗಿಲ್ಲದರ ಕುರಿತು ಉಗ್ರಪ್ಪ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಇದಕ್ಕೆ ಉತ್ತರಿಸಿದ ಡಿಸಿಪಿ, 2014 ರಲ್ಲಿ ಮಹಿಳೆ ಕಾಣೆಯಾಗಿದ್ದು ತನಿಖೆ ನಡೆದಿತ್ತ. ಮಗಳ ನಾಪತ್ತೆ ವಿಷಯದಲ್ಲಿ ಪೋಷಕರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಕೋರ್ಟ್ ಸೂಚನೆ ಮೇರೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು. ಪ್ರಕರಣಕ್ಕೆ 2 ವರ್ಷಗಳು ಆಗಿದ್ದು, ಕೂಡಲೇ ಅಧಿಕಾರಿಗಳು ಪತ್ತೆ ಮಾಡುವ ಕೆಲಸ ಮಾಡಿ ವರದಿ ನೀಡುವಂತೆ ಸೂಚಿಸಿದರು.

ಬೆಳ್ತಂಗಡಿಯಲ್ಲಿ ಅಸಹಜ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಒಂದು ತಂಡವನ್ನು ರಚಿಸಿ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿರು. ಜಿಲ್ಲೆಯಲ್ಲಿ ನೈತಿಕ ಪೋಲಿಸ್ ಗಿರಿಯ ಬಗ್ಗೆ ಕಠಿಣ ಕ್ರಮ ಕೈಗೊಂಡು ಅಂತಹ ಘಟನೆಗೆ ಕಾರಣರಾದವರ ವಿರುದ್ದ ಗೂಂಡಾ ಕಾಯಿದೆ ದಾಖಲಿಸಬೇಕು ಎಂದರು.

ಜಿಲ್ಲೆಯಲ್ಲಿ 2001ರಲ್ಲಿ 1000 ಗಂಡು ಮಕ್ಕಳಿಗೆ 1019 ಹೆಣ್ಣುಮಕ್ಕಳಿದ್ದರೆ 2017ರಲ್ಲಿ 1000 ಗಂಡು ಮಕ್ಕಳಿಗೆ 947 ಹೆಣ್ಣು ಮಕ್ಕಳಿಗೆ ಇಳಿದೆ. ಇದರ ಕಾರಣ, ಜಿಲ್ಲಾಡಳಿತ ಕೈಗೊಂಡ ಕ್ರಮದ ಕುರಿತು ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಿದರು.


Spread the love

Exit mobile version