Home Mangalorean News Kannada News ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್

ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್

Spread the love

ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್

ಮಂಗಳೂರು: ನಗರ ಪೋಲಿಸ್ ಆಯುಕ್ತರ ಕಚೇರಿಯ ಎದುರುಗಡೆ ಧರಣಿ ನಡೆಸಲು ಪ್ರಯತ್ನಿಸಿದ ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಇದರ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಚ್ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಈ ಕುರಿತು ಮ್ಯಾಂಗಲೊರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶಾಂತರಾಜು ಅವರು ಪ್ರತಿಭಟನಾಕಾರರು ಪೋಲಿಸ್ ಇಲಾಖೆಯಿಂದ ಯಾವುದೇ ರೀತಿಯ ಪರವಾನಿಗೆಯನ್ನು ಪಡೆದಿಲ್ಲ. ಇವರ ಪ್ರತಿಭಟನೆಯಿಂದ ಪೋಲಿಸ್ ಕಮಿಷನರೇಟ್ ಕಚೇರಿಯ ಮುಂಭಾಗದಲ್ಲಿ ತುಂಬಾ ಹೊತ್ತಿನ ರಸ್ತೆ ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಗಿದ್ದು, ನಾವು ಅವರಲ್ಲಿ ಸ್ಥಳದಿಂದ ಕದಲುವಂತೆ ವಿನಂತಿಸಿದರೂ ಅದಕ್ಕೆ ಅವರುಗಳು ಬಗ್ಗದ ಕಾರಣ ನಾವೂ ಪೋಲಿಸ್ ಬಲ ಉಪಯೋಗಿಸಿ ಬಲವಂತವಾಗಿ ಸ್ಥಳದಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕಾಯಿತು ಎಂದರು.

ಇದೇ ವೇಳೆ ಮಾತನಾಡಿದ ಪಿಎಫ್ ಐ ಇದರ ಪ್ರತಿನಿಧಿ ಪ್ರಕರಣವೊಂದಕ್ಕೆ ಸಂಬಂಧಿಸಿ ಕೈಕಂಬ ನಿವಾಸಿ ಅಹ್ಮದ್ ಖುರೇಶಿ ಎಂಬವರನ್ನು ಸಿಸಿಬಿ ಪೋಲಿಸರು ಅಕ್ರಮವಾಗಿ ಬಂಧಿಸಿ ಆತನ ಮೇಲೆ ದೌರ್ಜನ್ಯ ಮಾಡಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಖುರೇಶಿ ಈಗ ನಗರದ  ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಆತನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಪೋಲಿಸರು ಆತನನ್ನ ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ಖರೇಶಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮ ಆಗ್ರಹ ಎಂದರು.


Spread the love
1 Comment
Inline Feedbacks
View all comments
Prajwal
7 years ago

Good Job by Mangalore police..

wpDiscuz
Exit mobile version