ಕರಾವಳಿಗೆ ಕೊರೋನಾ ಸುನಾಮಿ!; ದುಬೈನಿಂದ ಬಂದ 15 ಮಂದಿ ಸೇರಿ 16 ಪಾಸಿಟಿವ್ ಪ್ರಕರಣಗಳು ದೃಢ
ಮಂಗಳೂರು: ಮಹಾಮಾರಿ ಕೊರೋನಾಕ್ಕೆ ಶುಕ್ರವಾರ ಮಂಗಳೂರು ತತ್ತರಿಸಿದ್ದು, ಒಂದೇ ದಿನ ಬರೋಬ್ಬರಿ ಹದಿನಾರು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ.
ಮೇ 16ರಂದು ಸ್ವೀಕೃತವಾಗುವ ಗಂಟಲು ದ್ರವ ಪರೀಕ್ಷೆ ವರದಿಯಲ್ಲಿ ಜಿಲ್ಲೆಯ 16 ಮಂದಿಗೆ ಕೋವಿಡ್-19 ಸೋಂಕು ಇರುವುದು ತಿಳಿದು ಬಂದಿದೆ. ಈ 16 ಜನರಲ್ಲಿ 15 ಮಂದಿ ದಿನಾಂಕ:12-05-2020 ರಂದು ದುಬೈಯಿಂದ ಮಂಗಳೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿದ್ದು, ಇವರಲ್ಲಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯ ಯವರಾಗಿರುತ್ತಾರೆ. ಈ 15 ಜನರನ್ನು ಇವರನ್ನು ಜಿಲ್ಲಾಡಳಿತ ವತಿಯಿಂದ ಗುರುತಿಸಲಾಗಿದ್ದ ಕ್ಯಾರೆಂಟೈನ್ ಸೆಂಟರ್ ನಲ್ಲಿ ರಿಸಲಾಗಿರುತ್ತದೆ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮಂಗಳೂರು ತಾಲೂಕಿನ ಸುರತ್ಕಲ್ ನ ಗ್ರಾಮದ ನಿವಾಸಿಯಾದ 68 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆ ಇರುವುದರಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಪಾಸಿಟಿವ್ ಬಂದಿರುತ್ತದೆ.
ದುಬೈನಿಂದ ಹಿಂದಿರುಗಿದ ಕೆಲವರು ಜಿಲ್ಲಾಧಿಕಾರಿಯು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಕ್ವಾರಂಟೈನ್ ನಲ್ಲಿ ಅವರು ಒದಗಿಸಿದ ಸೌಲಭ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಕೆಲವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ವೈದ್ಯಕೀಯ ತಪಾಸಣೆಗಾಗಿ ಭೇಟಿ ನೀಡಿದಾಗ ಅವರೊಂದಿಗೆ ಸಹಕರಿಸಲಿಲ್ಲ ಎಂದು ತಿಳಿದುಬಂದಿತ್ತು.
ಮೇ 12 ರಂದು, ದುಬೈನಿಂದ ಹಿಂದಿರುಗಿದ ಹದಿನಾಲ್ಕು ಜನರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಮಂಗಳೂರಿನಲ್ಲಿ ಭಾರತ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ಅವರು ಸಹಿ ಹಾಕಿದ್ದರಿಂದ ಜಿಲ್ಲಾಡಳಿತ ದುಬೈ ಮರಳಿದವರ ಕ್ವಾರಂಟೈನ್ ಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು. ಆದರೆ ಅವರು ಮಂಗಳೂರು ತಲುಪಿದ ಕೂಡಲೇ, ಕೆಲವೊಂದು ವ್ಯಕ್ತಿಗಳು ವ್ಯವಸ್ಥೆಗಳ ಬಗ್ಗೆ ದೂರು ನೀಡಲು ಆರಂಭಿಸಿದ್ದರು.