ಕರಾವಳಿಯಲ್ಲಿ ತಾಪಮಾನ ಏರಿಕೆಯ ಪರಿಣಾಮ: ಶೇ. 80 ರಷ್ಟು ಬೋಟುಗಳು ದಡದಲ್ಲೇ ಲಂಗರು
ಮಂಗಳೂರು: ಮೀನುಗಾರಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಮೀನುಗಾರಿಕೆ ಸ್ತಬ್ಧವಾಗುವ ಪರಿಸ್ಥಿತಿ ತಲುಪಿದ್ದು, ಶೇ.80ರಷ್ಟು ಬೋಟ್‌ಗಳು ದಡದಲ್ಲೇ ಲಂಗರು ಹಾಕಿವೆ ಆದುದರಿಂದ ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಉದ್ಭವಿಸಿದೆ. ಆಗಸ್ಟ್ ಬಳಿಕ ಆರಂಭವಾಗುವ ಮೀಮಗಾರಿಕೆ ಡಿಸೆಂಬರ್ ಜನವರಿಯಲ್ಲಿ ಸ್ವಲ್ಪ ಕಡಿಮೆ ಆಗುತ್ತವೆ.
ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಎರಡನೇ ಹಂತ ಆರಂಭವಾಗುತ್ತದೆ. ಆಗ ಮತ್ತೋದ್ಯಮಿಗಳಿಗೆ ಸುಗ್ಗಿಯ ಕಾಲ. ಆದರೆ, ಈ ವರ್ಷ ನಾಟಿಮಾನದ ನಿರೀಕ್ಷೆ ಇಂದ ಎರಡನೆಯ ಅವಧಿಯ ಎರಡು ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಬಲೆಗೆ ಬೀಳುತ್ತಿಲ್ಲ ಎನ್ನುವುದು ಮೀನುಗಾರರ ಅಳಲು
ಕೇವಲ ಶೇ.20 ರಷ್ಟು ಬೋಟ್ ಮಾಲಕರು ಮೀಮಗಾರಿಕೆಗೆ ತೆರಳುತ್ತಿದ್ದಾರೆ. ಈ ಹಿಂದೆ ಒಂದೇ ಬಾರಿ ಅತ್ಯಧಿಕ ಮೀನು ಸಿಕ್ಕಿತ್ತು. ಬಂಗುಡೆಯ ಸೀಸನ್‌ನಲ್ಲಿ ಲೆಕ್ಕಕ್ಕಿಂತ ಅಧಿಕ ಮೀನು ಬಲೆಗೆ ಸಿಕ್ಕಿದ್ದು, ಈಗ ದರ ಕುಸಿದಿತ್ತು. ಆದರೆ, ಗಳಗ ಮೀನು ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವುದಕ್ಕೆ ಬೋಟ್ ಮಾಲಕರು ಕಂಗಾಲಾಗಿದ್ದಾರೆ.
ಸುಮಾರು 27 ಡಿಗ್ರಿ ಸೆ.ವಿಂದ 32 ಡಿಗ್ರಿ ಸೆ. ವಾತಾವರಣದ ಉಷ್ಣತೆ ಮೀಮಗಳಿಗೆ ಅನು ಕೂಲಕರ, ಆದರೆ, ಪ್ರಸಕ್ತ 35 ಡಿ, ಸಿಗಿಂತಲೂ ಅಧಿಕ ಇರುವ ಕಾರಣ ಮೀನುಗಳಿಗೆ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ ಮೀನುಗಳು ಸಮುದ್ರದ ಆಳಕ್ಕೆ ತೆರಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.