Home Mangalorean News Kannada News ಕರಾವಳಿ ಕರ್ನಾಟಕದಲ್ಲಿ ಪ್ರಥಮ ಕಾರ್ಪೋರೇಟ್ ಕ್ರಿಕೆಟ್ ಲೀಗ್ ಪಂದ್ಯಾಟ

ಕರಾವಳಿ ಕರ್ನಾಟಕದಲ್ಲಿ ಪ್ರಥಮ ಕಾರ್ಪೋರೇಟ್ ಕ್ರಿಕೆಟ್ ಲೀಗ್ ಪಂದ್ಯಾಟ

Spread the love

ಕರಾವಳಿ ಕರ್ನಾಟಕದಲ್ಲಿ ಪ್ರಥಮ ಕಾರ್ಪೋರೇಟ್ ಕ್ರಿಕೆಟ್ ಲೀಗ್ ಪಂದ್ಯಾಟ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿವಿಧ ಕಂಪನಿ, ಬ್ಯಾಂಕ್, ವಿಶ್ವವಿದ್ಯಾಲಯಗಳನ್ನೊಳಗೊಂಡ ಕಾರ್ಪೋರೇಟ್ ಕ್ರಿಕೆಟ್ ಬ್ಯಾಶ್ ಲೀಗ್ ಕಮ್ ನಾಕೌಟ್ ಆಧಾರದ ಪಂದ್ಯಾಟವು ದಿನಾಂಕ 23 ರಿಂದ 26ನೆಯ ನವಂಬರ್‍ವರೆಗೆ ಮಂಗಳೂರು ಅಡ್ಯಾರಿನಲ್ಲಿರುವ ಸಹ್ಯಾದ್ರಿ ಸಮೂಹ ಸಮೂಹ ಸಂಸ್ಥೆಗಳ ಹುಲ್ಲುಹಾಸಿನ ಮೈದಾನದಲಿ ್ಲಜರಗಲಿದೆ. ಈ ಪಂದ್ಯಾಟವನ್ನು ಮಂಗಳೂರು ಪ್ರೀಮಿಯರ್ ಲೀಗ್ ಮತ್ತು ಕೋಸ್ಟಲ್‍ವುಡ್ ಕ್ರಿಕೆಟ್ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಬ್ರ್ಯಾಂಡ್ ವಿಷನ್ ಈವೆಂಟ್ ಸಂಸ್ಥೆಯು ನಡೆಸಲಿದೆ.

ಮಂಗಳೂರಿನ ಫೋರಂ ಫಿಝಾ ಮಾಲಿನಲ್ಲಿ ಜರಗಿದ ಪಂದ್ಯ ಕೂಟದಲ್ಲಿ ಭಾಗವಹಿಸುತ್ತಿರುವ 24 ತಂಡಗಳ ಪ್ರತಿನಿಧಿಗಳ ಸಭೆಯಲ್ಲಿ ಪಂದ್ಯಕೂಟದ ಪ್ರೊಮೋ ವಿಡಿಯೋವನ್ನು ಗ್ಲಿಟ್ಸ್ ಮನೋರಂಜನಾ ಸಂಸ್ಥೆಯ ಮಾಲಕಿ ದೀಪ್ತಿಯವರು ಬಿಡುಗಡೆ ಮಾಡಿದರು. ನಿರ್ಮಾಣ ಹೋಮ್ಸ್ ಸಂಸ್ಥೆಯ ಕೃಷ್ಣಪ್ರಸಾದ್, ಫೋರಂ ಫಿಝ್ಝಾ ಮಾಲಿನ ಶೋಯಬ್‍ರವರು ಅತಿಥಿಯಾಗಿದ್ದರು.

ಪಂದ್ಯಕೂಟದಲ್ಲಿ ಕಾರ್ಪೋರೇಶನ್, ಎಕ್ಸಿಸ್ ಬ್ಯಾಂಕ್, ಎನ್ ಎಂ ಪಿ ಟಿ, ಎಂಸಿಎಫ್, ಇನ್ಫೋಸಿಸ್, ಮಣಿಪಾಲ ಸಮೂಹ ಸಂಸ್ಥೆಗಳು, ರೋಬೋಸಾಫ್ಟ್, ಎಂಐಟಿಇ, ಕ್ಲಬ್ ಮಂತ್ರ ಮುಂತಾದ 24 ತಂಡಗಳಿಗೆ ಪ್ರವೇಶವನ್ನು ನೀಡಲಾಗಿದೆ. 24 ತಂಡಗಳನ್ನು 8 ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು ಲೀಗ್ ಹಂತದ ಪಂದ್ಯಗಳ ಬಳಿಕ ಪ್ರತಿಯೊಂದು ಗುಂಪಿನಿಂದ ಒಂದೊಂದು ತಂಡವು ನಾಕೌಟ್ ಹಂತವನ್ನು ಪ್ರವೇಶಿಸಲಿವೆ. ಮೊದಲೆರಡು ದಿನದ ಪಂದ್ಯಗಳು ಹಗಲಿನಲ್ಲಿ ಕೊನೆಯ ಎರಡು ದಿನಗಳ ಪಂದ್ಯಗಳು ಹೊನಲು ಬೆಳಕಿನಲ್ಲಿ ನೆರವೇರಲಿದೆ ಎಂದು ಪಂದ್ಯಕೂಟದ ಸಂಚಾಲಕ ಸಿರಾಜುದ್ದೀನ್‍ರವರು ತಿಳಿಸಿದರು.


Spread the love

Exit mobile version