ಕರಾವಳಿ ಕುರಿತ ಮುಖ್ಯಮಂತ್ರಿಗಳ ತಿಳುವಳಿಕೆ ಹೇಳಿಕೆಯನ್ನು ತಿರುಚಲಾಗಿದೆ; ಯೋಗೀಶ್ ಶೆಟ್ಟಿ
ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರಾವಳಿ ಜನರ ಬಗ್ಗೆ ಹೇಳಿದ ಮಾತನ್ನು ತಿರುಚುವುದು ಸರಿಯಲ್ಲ. ಅವರ ಮಾತನ್ನು ಸರಿಯಾಗಿ ಅರ್ಥೈಸಬೇಕು. “ಪಾಪ ಯುವಕರಿಗೆ ನಮ್ಮ ಯೋಜನೆಗಳು ಹಾಗೂ ಕೆಲಸಗಳ ಬಗ್ಗೆ ತಿಳುವಳಿಕೆ ಇಲ್ಲ ಎಲ್ಲಕ್ಕೂ ಮೋದಿ ಎಂದರೆ ಆಗುದಿಲ್ಲ. ರಾಜ್ಯಕ್ಕೆ ಮೋದಿಯವರ ಕೊಡುಗೆ ಏನು ” ಎಂಬ ಅರ್ಥದಲ್ಲಿ ಹೇಳಿದ್ದಾರೆ. ವಿನಃ ಅನ್ಯಾತಾ ಭಾವಿಸುವುದು ಬೇಡ. ಮುಖ್ಯಮಂತ್ರಿಯ ಈ ಹೇಳಿಕೆ ಸಂಧರ್ಭದಲ್ಲಿ ನಾನು ಕೂಡ ಅವರ ಜೊತೆ ಉಪಸ್ಥಿತನಿದ್ದೆ ಹಾಗಾಗಿ ಹೇಳಿಕೆಯನ್ನು ತಿರುಚುವುದು ಸರಿಯಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗರು ಯುವಕರ ಭಾವನೆಗಳನ್ನು ಉಪಯೋಗಿಸಿ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕೇಂದ್ರದಿಂದ ಬಂದ ಅನುದಾನ ಏನು, ತಮ್ಮ ಸಾಧನೆ ಏನು ಎಂಬುದನ್ನು ಹೇಳಬೇಕೇ ಹೊರತು ಕೇವಲ ಮೋದಿ ಎಂದರೆ ಸಾಲದು. ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಮುಂದಿಟ್ಟುಕೊಂಡು ಅದನ್ನು ಯುವ ಜನತೆಗೆ ತಿಳಿ ಹೇಳುವುದರೊಂದಿಗೆ ನಾವು ಚುನಾವಣೆ ಎದುರಿಸುತ್ತೇವೆ. ನಮ್ಮ ಮೈತ್ರಿ ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗಾಗಿ ಎರಡೂ ಪಕ್ಷಗಳು ಕಟೀಬದ್ಧ ಎಂದು ತಿಳಿಸದ್ದಾರೆ.