Home Mangalorean News Kannada News ಕರಾವಳಿ ಯುವಜನರ ಮಹೋತ್ಸವ

ಕರಾವಳಿ ಯುವಜನರ ಮಹೋತ್ಸವ

Spread the love

ಕರಾವಳಿ ಯುವಜನರ ಮಹೋತ್ಸವ

ಮಂಗಳೂರು: ದಕ್ಷಿಣ  ಕನ್ನಡ  ಜಿಲ್ಲಾಡಳಿತ ವತಿಯಿಂದ ನಡೆಯುವ 2018ರ ಸಾಲಿನ   ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಪ್ರತಿಷ್ಠಿತ ಕರಾವಳಿ ಯುವಉತ್ಸವದ ಆಡಿಶನ್ ಶೋ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆಗೊಂಡಿತು.

ಯುವಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಉಪ ಆಯುಕ್ತರಾದ  ಪ್ರಮೀಳಾ ಎಂ.ಕೆ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕರಾವಳಿ ಯುವ ಪ್ರತಿಭೆಗಳಿಗೆ ಈ ಉತ್ಸವವು ವೇದಿಕೆಯಾಗಿದ್ದು, ವೇದಿಕೆಯನ್ನು ಉತ್ತಮವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತ ಕಲಾಪಟುಗಳಾಗಿ ಮೂಡಿಬರುವಂತೆ ಶುಭಹಾರೈಸಿದರು ಹಾಗೂ ಕರಾವಳಿ ಯುವಉತ್ಸವವು ಒಂದು ಮಹೋತ್ಸವವಾಗಿ ಮೂಡಿಬರಲಿ ಎಂದು ಆಶಿಸಿದರು.

ಯುವಉತ್ಸವ ಸಮಿತಿಯ ಉಪಾಧ್ಯಕ್ಷರು ಹಾಗೂ ಕಾರ್‍ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್.ಸಿ ಇವರು ಮಾತನಾಡಿ ಸದ್ರಿ ಕಾಲೇಜು ಕಾರ್ಯಕ್ರಮದ ನೋಡಲ್ ಕಾಲೇಜಾಗಿದ್ದು ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಅತ್ಯುತ್ತಮವಾಗಿ ಅಯೋಜಿಸಲ್ಪಟ್ಟಿರುವುದಾಗಿ ತಿಳಿಸಿ, ಕೊಟ್ಟ ಅವಕಾಶಕ್ಕಾಗಿ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿಗಳಾದ ಡಾ. ಶ್ರೀಧರ ಮಣಿಯಾಣಿಯವರು ಉಪಸ್ಥಿತರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲು ಸಹಕರಿಸಿದರು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕ ನೋಡಲ್ ಅಧಿಕಾರಿಗಳಾದ ಪ್ರೊ.ಕೃಷ್ಣಪ್ರಭ, ಪ್ರೊ.ಶೇಷಪ್ಪ ಇವರು ಹಾಜರಿದ್ದು  ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಪ್ರತಿಮಾ ಶ್ರೀಧರ್ ಮತ್ತು ಈಶ್ವರ್ ಕೋಡಿಕಲ್ ಇವರುಗಳು ಉಪಸ್ಥಿತರಿದ್ದು  ಸುಮಾರು 28 ಕಾಲೇಜುಗಳಿಂದ  ದಾಖಲೆ ಪ್ರಮಾಣದ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಿಷನ್ ಶೋದಲ್ಲಿ ಭಾಗವಹಿಸಿದ್ದರು. ಒಟ್ಟು 9 ವಿಭಾಗಗಳಲ್ಲಿ ಆಡಿಶನ್ ನಡೆಯಲಿದ್ದು ಪ್ರತಿ ವಿಭಾಗದಲ್ಲಿ ಪ್ರಥಮ ಉತ್ತಮ  ವೈಯಕ್ತಿಕ ಹಾಗೂ  ತಂಡಗಳನ್ನು ಈ ತಿಂಗಳ 27 ಮತ್ತು 28 ರಂದು ಕದ್ರಿ ಪಾರ್ಕ್‍ನಲ್ಲಿ ನಡೆಯುವ ಅಂತಿಮ ಶೋಗೆ ಆಯ್ಕೆ ಮಾಡಲಾಗುವುದೆಂದು ಆಯೋಜಕರು ತಿಳಿಸಿದರು.


Spread the love

Exit mobile version