ಕರೋಪಾಡಿ ಪ್ರಕರಣ ದಾರಿ ತಪ್ಪಿಸುತ್ತಿರುವ ಸಚಿವ ರಮಾನಾಥ ರೈ: ಜಿಲ್ಲಾ ಬಿಜೆಪಿ
ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಹತ್ಯೆ ಪ್ರಕರಣದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂಬ ಹೇಳಿಕೆಯನ್ನು ನೀಡಿದ ಉಸ್ತುವಾರಿ ಸಚಿವ ರಮಾನಾಥ ರೈ ಯವರು ತನ್ನ ಹಳೇ ಚಾಳಿಯನ್ನೇ ಮುಂದುವರಿಸಿ ಸಂಘಪರಿವಾರದ ಮೇಲೆ ಈ ಪ್ರಕರಣದಲ್ಲೂ ಗೂಬೆ ಕೂರಿಸುವಂತಹ ಹೇಳಿಕೆಯನ್ನು ನೀಡಿರುವುದು ಖಂಡನೀಯವಾಗಿದೆ.
ಈಗಾಗಲೇ ಈ ಪ್ರಕರಣದ ಆರೋಪಿಗಳನ್ನು ಕಾನೂನು ರೀತಿಯಲ್ಲಿ ಬಂದಿಸಿರುವ ಪೆÇೀಲಿಸ್ ಇಲಾಖೆ ಕೂಲಂಕುಷ ತನಿಖೆಯ ಮುಖಾಂತರ ಇದರ ನೈಜ ಹಿನ್ನೆಲೆಯನ್ನು ಪತ್ತೆ ಮಾಡುವ ಕಾರ್ಯವನ್ನು ನಡೆಸುತ್ತಿರುವಾಗ ಈ ರೀತಿಯ ಹೇಳಿಕೆಗಳು ಉಸ್ತುವಾರಿ ಸಚಿವರಿಗೆ ಶೋಭೆ ತರುವಂತಹುದಲ್ಲ.
ಈ ಪ್ರಕರಣದಲ್ಲಿ ಅನೇಕ ವೈಯುಕ್ತಿಕ ಕಾರಣಗಳು, ಮತ್ತು ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಜೋಸ್ಕರ ನಡೆದ ಕಾಂಗ್ರೇಸಿನ ಬಿನ್ನಮತವೂ ಕೂಡ ಒಂದು ಮುಖ್ಯ ಕಾರಣ ಎಂಬುದು ಸ್ಥಳೇಯವಾಗಿ ಕೇಳಿ ಬರುವ ಮಾತುಗಳು ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಹಾಗೂ ಕೊಲೆಗೀಡಾದ ಜಲೀಲ್ ರವರು ರಾಜಕೀಯ ಅಧಿಕಾರಕೋಸ್ಕರ ಅನೇಕರೊಂದಿಗೆ ವೈಯುಕ್ತಿಕ ದ್ವೇಷ ಕಟ್ಟಿಕೊಂಡಿರುವ ಕಾರಣವೂ ಇದಕ್ಕೆ ಪೂರಕವಾಗಿರುತ್ತzಯೇ ಹೊರತು ಈ ಕೊಲೆಗೂ, ಸಂಘಪರಿವಾರಕ್ಕೂ ಯಾವುದೇ ರೀತಿಯ ಸಂಬಂದಗಳಿರುವುದಿಲ್ಲ ಎಂಬದನ್ನು ಉಸ್ತುವಾರಿ ಸಚಿವರು ತಿಳಿದಿರಲಿ ಎಂದು ಬಿಜೆಪಿ ಹೇಳಿದೆ.
ಭೂಗತ ಜಗತ್ತಿನ ನಂಟೂ ಇದೆ ಎಂದು ಕೇಳಿ ಬರುವ ಈ ಪ್ರಕರಣದಲ್ಲಿ , ಸ್ಥಳೀಯ ಕಾಂಗ್ರೇಸಿನ ನಾಯಕರಿಗೆ ಅಧಿಕಾರ ತಪ್ಪಿಸುವ ಆರೋಪಕೋಸ್ಕರ ಭೂಗತ ಜಗತ್ತಿನ ಮೂಲಕ ಬೆದರಿಕೆ ಕರೆಗಳು ಬರುತ್ತಿದ್ದವು ಎಂಬ ಸುದ್ದಿಯು ಸ್ಥಳೀಯವಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಈ ಪ್ರಕರಣಕ್ಕೆ ತಿರುವು ನೀಡುವ ಸಾದ್ಯತೆಗಳಿರುವಾಗ ನೇರವಾಗಿ ಸಂಘಪರಿವಾರದ ಮೇಲೆ ದೋಷಾರೋಪಣೆ ಮಾಡಿರುವ ಉಸ್ತುವಾರಿ ಸಚಿವರು ಪೋಲಿಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡದೆ ನ್ಯಾಯಯುತ ತನಿಖೆಗೆ ಸಹಕರಿಸಲಿ.
ಆದ್ದರಿಂದ ಜಿಲ್ಲೆಯಲ್ಲಿ ಈಗಾಗಲೇ ಆನೇಕ ಮುಸ್ಲಿಂ ಬಾಂದವರು ಮತ್ತು ಮುಸ್ಲಿಂ ಸಂಘಟನೆಗಳು ಉಸ್ತುವಾರಿ ¸ಸಚಿವರೊಂದಿಗೆ ಬೇರೆ ಬೇರೆ ಕಾರಣಗಳಿಗೋಸ್ಕರ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಆ ಸಮುದಾಯವನ್ನು ಓಲೈಸುವ ಮತ್ತು ಮುಸ್ಲಿಂ ಸಂಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವ ಕಾರಣಕ್ಕಾಗಿ ಈ ಜಲೀಲ್ ಕೊಲೆ ಪ್ರಕರಣವನ್ನು ಸಂಘಪರಿವಾರದ ಮೇಲೆ ಹೊರಿಸಿ ಅವರಿಂದ ಶಹಬಾಷ್ ಗಿರಿಯನ್ನು ಪಡೆಯುವುದು ಉಸ್ತುವಾರಿ ಸಚಿವ ರಮಾನಾಥ ರೈ ಯವರ ರಾಜಕೀಯ ಷಡ್ಯಂತ್ರವಾಗಿದೆ. ಎಂದು ಬಿಜೆಪಿ ಜಿಲ್ಲಾ ವಕ್ತಾರ ಜೆತೇಂದ್ರ ಎಸ್ ಕೊಟ್ಟಾರಿಯವರು ಆರೋಪಿಸಿದ್ದಾರೆ.