Home Mangalorean News Kannada News ಕರ್ನಾಟಕದಲ್ಲಿ ಹಿಂದುತ್ವನಿಷ್ಠರ ಹತ್ಯೆಯ ಪ್ರಕರಣದಲ್ಲಿ ಪೊಲೀಸರ ಅಕ್ಷಮ್ಯ ನಿರಾಸಕ್ತಿ!

ಕರ್ನಾಟಕದಲ್ಲಿ ಹಿಂದುತ್ವನಿಷ್ಠರ ಹತ್ಯೆಯ ಪ್ರಕರಣದಲ್ಲಿ ಪೊಲೀಸರ ಅಕ್ಷಮ್ಯ ನಿರಾಸಕ್ತಿ!

Spread the love

ಕರ್ನಾಟಕದಲ್ಲಿ ಹಿಂದುತ್ವನಿಷ್ಠರ ಹತ್ಯೆಯ ಪ್ರಕರಣದಲ್ಲಿ ಪೊಲೀಸರ ಅಕ್ಷಮ್ಯ ನಿರಾಸಕ್ತಿ!

‘ಗೌರಿ ಲಂಕೇಶ ಹತ್ಯೆ ವಿಷಯದಲ್ಲಿ ‘ಕೇಸರಿ ಭಯೋತ್ಪಾದನೆ’, ‘ವಿಚಾರಸರಣಿಯ ಹತ್ಯೆ’ ಇತ್ಯಾದಿ ಚರ್ಚೆ ನಡೆಯುತ್ತಿದೆ. ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ‘ಕೋಕಾ’ (Karnataka Control of Organised Crimes Act) ಎಂಬ ಕಠಿಣ ಕಾನೂನನ್ನು ವಿಧಿಸಿದೆ. ಇತರ ಅಪರಾಧಗಳಲ್ಲಿ ಬಂಧಿಸಿದ ಆರೋಪಿಗಳಿಗೆ ಗರಿಷ್ಠ ೧೪ ದಿನಗಳ ಪೊಲೀಸ್ ಕಸ್ಟಡಿ ಇರುತ್ತದೆ. ಆದರೆ ಕೋಕಾ ಅಂತರ್ಗತ ಬಂಧಿಸಲ್ಪಟ್ಟವರಿಗೆ ೩೦ ದಿನಗಳು ಪೊಲೀಸ್ ಕಸ್ಟಡಿಯ ಅವಕಾಶವಿರುತ್ತದೆ. ‘ಕೋಕಾ ಅಂತರ್ಗತ ಜಾಮೀನು ಸಿಗುವ ಸಾಧ್ಯತೆ ತುಂಬಾ ಕಡಿಮೆ ಅಂದರೆ ಹೆಚ್ಚುಕಡಿಮೆ ಇರುವುದಿಲ್ಲ’, ಎಂದು ಹೇಳಿದರೆ ತಪ್ಪಾಗಲಾರದು. ಕರ್ನಾಟಕದಲ್ಲಿ ಕೋಕಾವನ್ನು ಅಪರೂಪವಾಗಿ ವಿಧಿಸಲಾಗುತ್ತದೆ. ಇದೇ ರೀತಿಯಲ್ಲಿ ಕಾನೂನುಬಾಹಿರ ಕೃತ್ಯ ಪ್ರತಿಬಂಧಕ ಕಾಯ್ದೆ (ಯುಎಪಿಎ) ಅಂತರ್ಗತದಡಿಯಲ್ಲಿ ೩೦ ದಿನದ ಪೊಲೀಸ ಕಸ್ಟಡಿಯ ಕಾಲಾವಕಾಶವು ಇದರಲ್ಲಿ ಸಮಾವೇಶವಿದೆ. ಡಾ. ದಾಭೋಳಕರ್, ಕಾ. ಪಾನಸರೆ ಹಾಗೂ ಗೌರಿ ಲಂಕೇಶ ಮತ್ತು ಕಲ್ಬುರ್ಗಿ(ಕಲ್ಬುರ್ಗಿಯವರ ಸಂದರ್ಭದಲ್ಲಿ ಯಾವುದೇ ಸಂಸ್ಥೆಯ ನಂಟು ಎದುರು ಬರದಿದ್ದರೂ) ಈ ನಾಲ್ಕೂ ಕೊಲೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯನ್ನು ಗುರಿ ಮಾಡಲಾಗುತ್ತಿದೆ. ಕೊಲೆಯಂತಹ ಅಪರಾಧವಾಗಿದ್ದು ಅದನ್ನು ಯಾವುದೇ ರೀತಿ ಬೆಂಬಲಿಸುವುದು ತಪ್ಪು; ಆದರೆ ರಾಜ್ಯ ಪೋಲೀಸರಿಂದ ಹತ್ಯೆಗಳ ತನಿಖೆಯಲ್ಲಾಗುತ್ತಿರುವ ಪಕ್ಷಪಾತವನ್ನು ನೋಡಿದಾಗ, ನನಗೆ ೮ ವರ್ಷಗಳ ಅವಧಿಯಲ್ಲಿ ನಡೆದ ಸರಣಿ ಕೊಲೆಯ ನೆನಪಾಗುತ್ತದೆ.

೧. ಶ್ರೀ. ಗಿರಿಧರ ಹಾಗೂ ಅವರ ಸ್ನೇಹಿತನ ಮೇಲಾದ ಮಾರಣಾಂತಿಕ ಹಲ್ಲೆ ಪ್ರಕರಣದ ತನಿಖೆಯನ್ನು ಮಾಡದೇ ಪ್ರಕರಣವನ್ನು ಉದ್ದ ಎಳೆಯುತ್ತಿರುವ ಕರ್ನಾಟಕ ಪೊಲೀಸರು

ಕರ್ನಾಟಕದ ಒಂದು ದೇವಸ್ಥಾನ ಜಾಗದಲ್ಲಿ ಮಸೀದಿ ಕಟ್ಟುವ ಪ್ರಯತ್ನ ನಡೆಯುತ್ತಿತ್ತು. ಆ ಅನಧಿಕೃತ ಕಟ್ಟಡ ಧ್ವಂಸಗೊಂಡು ಮೈಸೂರು ಜಿಲ್ಲೆಯ ವಾತಾವರಣ ಜುಲೈ ೨೦೦೯ ರಲ್ಲಿ ತುಂಬಾ ಉದ್ವಿಗ್ನವಾಗಿತ್ತು. ಇದರಿಂದ ಗಲಭೆಯಾಗಿ ಆಗಲೇ ೩ ಜನರು ಮೃತಪಟ್ಟಿದ್ದರು. ಮರುದಿನವೇ ೩.೭.೨೦೦೯ ರಲ್ಲಿ ಶ್ರೀ. ವಿ.ಗಿರಿಧರ್ ಎಂಬ ಹಿಂದೂ ಕಾರ್ಯಕರ್ತ ಹಾಗೂ ಅವರ ಸ್ನೇಹಿತರ ಮೇಲೆ ಹಲ್ಲೆಯಾಯಿತು. ಅವರಿಬ್ಬರೂ ಆ ಹಲ್ಲೆಯಲ್ಲಿ ಬದುಕುಳಿದರು. ಈ ಪ್ರಕರಣದಲ್ಲಿ ಹಿಂದುತ್ವನಿಷ್ಠರು ಧ್ವನಿಯನ್ನು ಎತ್ತಿದರು; ಆದರೆ ಪೊಲೀಸ ಆಯುಕ್ತರಾದ ಸುನಿಲ ಅಗರವಾಲ್ ಇವರು ಈ ಪ್ರಕರಣದಲ್ಲಿ ವೈಯಕ್ತಿಕ ವಾದದಿಂದ ಆಗಿರುವ ಗಲಭೆ ಎಂದು ಹೇಳಿ ಕೈ ತೊಳೆದರು. ಪೋಲೀಸರು ‘ಸಿಸಮರಿ ವರದಿ’ಯನ್ನು (ಅ summಚಿಡಿಥಿ ಡಿeಠಿoಡಿಣ) ಮಾಡಿ ಈ ಪ್ರಕರಣದಿಂದ ಕೈತೊಳೆದುಕೊಂಡು ಬಿಟ್ಟರು. (ಪೊಲೀಸರು ಪ್ರತಿಯೊಂದು ತನಿಖೆಯ ಕೊನೆಯಲ್ಲಿ ವರದಿ ನೀಡಲಿಕ್ಕಿರುತ್ತದೆ. ಅಪರಾಧಿ ಸಿಗದೇ ಇದ್ದಲ್ಲಿ ಪೊಲೀಸರು ಹಾಕುವ ವರದಿಗೆ ‘ಸಿ ಸಮರಿ ರಿಪೋರ್ಟ್ ಎನ್ನುತ್ತಾರೆ.) ಹೀಗಿದ್ದರೂ ಕೂಡ ಮತ್ತೊಂದು ಪ್ರಕರಣದಲ್ಲಿ (ಕೆ. ರಾಜುರವರ ಕೊಲೆ ಪ್ರಕರಣದಲ್ಲಿ) ಆರೋಪಿ ಮುಜಾಮಿಲ್ಲನನ್ನು ಈ ಹತ್ಯೆಯ ಪ್ರಕರಣದಲ್ಲಿ, ಅದೇ ರೀತಿ ಗಿರಿಧರ ಇವರ ಮೇಲಿನ ಹಲ್ಲೆಯ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದರಿಂದ ಪೊಲೀಸರು ಮರುವಿಚಾರಣೆಗಾಗಿ ಇದನ್ನು ಪುನಃ ತೆರೆಯಲಾಯಿತು; ಆದರೆ ಇದರ ತನಿಖೆಯನ್ನು ಅತ್ಯಂತ ಗಂಭೀರವಾದ ತಪ್ಪುಗಳಿಂದ ಮಾಡಲಾಯಿತು.

ಮುಜಾಮಿಲ್ ಈತ ‘ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯಲ್ಲಿ ಸಹಭಾಗಿಯಾಗಿದ್ದನು. ಈ ಪ್ರಕರಣದಲ್ಲಿ ಕಾನೂನು ಬಾಹಿರ ಪ್ರತಿಬಂಧ ಕಾಯ್ದೆಯನ್ನು ಹಾಕಿದ್ದರೂ ಸಹ ಆರೋಪಪತ್ರದಲ್ಲಿ ಅದರ ಉಲ್ಲೇಖವನ್ನು ಮಾಡದೇ ಇದ್ದರಿಂದ ಆರೋಪಿ ಮುಜಾಮಿಲ್ ಈತನನ್ನು ಡಿಸೆಂಬರ ೨೦೧೬ ರಂದು ಜಾಮೀನು ಸಿಕ್ಕಿತು. ಅನಂತರ ಖಟ್ಲೆ ನಡೆಯುತ್ತಿರುವಾಗ ಆರೋಪಪಟ್ಟಿ ಸಲ್ಲಿಸಿ ಯುಎಪಿಎದಲ್ಲಿನ ನಿಬಂಧನೆಗಳನ್ನು ರದ್ದು ಪಡಿಸಲಾಯಿತು. ಆದ್ದರಿಂದ ‘ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿಯ ಅಬೀದ್ ಪಾಶಾನಿಗೂ ಜಾಮೀನು ಸಿಕ್ಕಿತು. ಈ ರೀತಿ ಇದು ಭಯೋತ್ಪಾದನಾ ಕೃತ್ಯವೆಂಬುದನ್ನು ಚೆನ್ನಾಗಿ ತಿಳಿದಿದ್ದರೂ ಪೊಲೀಸರು ಹಿಂದೂ ಮುಖಂಡರ ವಿರುದ್ಧದ ತನಿಖೆಯನ್ನು ದುರ್ಬಲಗೊಳಿಸಿದರು ಹಾಗೂ ಅದಕ್ಕಿಂತಲೂ ಹೆಚ್ಚು ದುರ್ಬಲ ಆರೋಪಪಟ್ಟಿಯನ್ನು ಸಿದ್ಧಪಡಿಸಿದರು. ಈ ರೀತಿ ೨೦೦೯ ರಲ್ಲಿ ನಡೆದ ಅಪರಾಧದ ತನಿಖೆಯು ೨೦೧೬ ರಲ್ಲಿ ನಡೆಯಿತು ಮತ್ತು ಸಪ್ಟೆಂಬರ್ ೨೦೧೮ ರ ವರೆಗೆ ಕೇವಲ ಆರೋಪಪಟ್ಟಿಯನ್ನಷ್ಟೇ ದಾಖಲಿಸಲಾಯಿತು; ಅಂದರೆ ಇದರ ಅರ್ಥ ಈ ಖಟ್ಲೆ ನಿಂತಿಲ್ಲ. ಖಟ್ಲೆ ನಿಲ್ಲುವುದು ಅಥವಾ ೩-೪ ವರ್ಷಗಳ ವರೆಗೆ ನಡೆದು ಬಳಿಕ ಆರೋಪಿಗಳು ಖುಲಾಸೆಯಾಗುವರು ಎಂದು ಕಾಣಿಸುತ್ತಿದೆ. ಇವೆಲ್ಲ ಕಾಂಗ್ರೆಸ್ಸಿನ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪೊಲೀಸರ ಪ್ರತಾಪವಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ನಿರಾಸಕ್ತಿಯ ಬಗ್ಗೆ ಹಿಂದೂ ವಿಧಿಜ್ಞ ಪರಿಷತ್ತು ನೀಡಿದಂತಹ ದೂರಿನಿಂದಾಗಿ ಈಗ ಈ ಪ್ರಕರಣದ ತನಿಖೆಯು ಆರಂಭವಾಗಿದೆ.

೨. ಭಾಜಪದ ಆನಂದ ಪೈ ಇವರ ಮೇಲಾದ ಹಲ್ಲೆಯಲ್ಲಿ ಅವರ ಜೊತೆಗಾರ ರಮೇಶ್‌ರವರ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಸರಕಾರದ ಪ್ರಯತ್ನ !

ಅಬಿದ ಪಾಶಾ ಹಾಗೂ ಅವನ ತಂಡವು ಭಾಜಪದ ಆನಂದ ಪೈ ಇವರ ಮೇಲೆಯೂ ಹಲ್ಲೆ ಮಾಡಿದ್ದರು. ೯.೬.೨೦೦೯ ರ ರಾತ್ರಿ ಆನಂದ ಪೈರವರು ತಮ್ಮ ಮಿತ್ರ ರಮೇಶ ಅವರೊಂದಿಗೆ ದ್ವಿಚಕ್ರ ವಾಹನದಿಂದ ಹೋಗುತ್ತಿರುವಾಗ, ಈ ತಂಡ ಅವರ ಮೇಲೆ ದಾಳಿ ನಡೆಸಿತು. ರಮೇಶ ಅವರು ಮೃತಪಟ್ಟರು. ಆಗ ಪೋಲೀಸರು ಎಂದಿನಂತೆ ವಿಶೇಷ ತನಿಖೆ ನಡೆಸದೆ ದಿನಾಂಕ ೨.೫.೨೦೧೧ ರಂದು  ‘ಸಿ ಸಮರಿ ರಿಪೋರ್ಟ್’ನ್ನು ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರು ಮತ್ತು ತನಿಖೆಯನ್ನು ನಿಲ್ಲಿಸಿದರು.  ಈ ಪ್ರಕರಣದಲ್ಲಿಯೂ ೨೦೧೬ ನೇ ವರ್ಷದಲ್ಲಿ ಕೆ. ರಾಜು ಪ್ರಕರಣದ ತಪ್ಪೊಪ್ಪಿಗೆ ಹೇಳಿಕೆಯಿಂದಾಗಿ ಪೊಲೀಸರು ಅದರ ತನಿಖೆಯನ್ನು ಮತ್ತೊಮ್ಮೆ ಮಾಡಬೇಕಾಯಿತು. ಪ್ರಕರಣದಲ್ಲಿಯೂ ಪೊಲೀಸರಲ್ಲಿ ಇದೊಂದು ಸಂಘಟಿತ ತಂಡವೆಂಬ ಮಾಹಿತಿ ಇದ್ದರೂ ಕೋಕಾವನ್ನು ಅಳವಡಿಸಲಿಲ್ಲ. ಬದಲಾಗಿ ಅವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾನೂನನ್ನು(ಯುಪಿಎ) ಕೇವಲ ಹೆಸರಿಗೆ ಮಾತ್ರ ಅನ್ವಯಿಸಲಾಯಿತು. ಭಯೋತ್ಪಾದನಾ ಕೃತ್ಯವಾಗಿದ್ದರೂ ಜಾಮೀನು ಅರ್ಜಿಗೆ ವಿರೋಧಿಸಲಿಲ್ಲ. ಯಾವ ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಡನೆ ಸಂಬಂಧವಿದ್ದರೂ ಅವರು ಅಲ್ಪಾವಧಿಗೆ ಪೋಲೀಸ್ ಕಸ್ಟಡಿಯಲ್ಲಿದ್ದರು. ಈ ಪ್ರಕರಣದಲ್ಲಿ ನಾರ್ಕೊ ಟೆಸ್ಟ ಮಾಡಿಸಲಿಲ್ಲ ಇವೆಲ್ಲವೂ ಕಾಂಗ್ರೇಸ ಸರಕಾರದ ಒತ್ತಡದಲ್ಲಿ ಮಾಡಲಾಗಿತ್ತೇ ?, ಎಂಬ ಪ್ರಶ್ನೆಯನ್ನು ಕೇಳಬೇಕು ಮತ್ತು ಅದರ ಉತ್ತರವೂ ಸಿಗಬೇಕು.

೩. ಮೈಸೂರು ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲಿಗ ಹರೀಶ ಮತ್ತು ಸತೀಶ ಇವರ ಹತ್ಯೆಯ ಪ್ರಯತ್ನದಲ್ಲಿ ಹರೀಶ ಈತನ ಮೃತ್ಯು ಆಗಿದ್ದರೂ ಕೂಡ ಪೊಲೀಸರಿಂದ ತನಿಖೆಯಲ್ಲಿ ಮಾಡಿದಂತಹ ಗಂಭೀರವಾದ ತಪ್ಪುಗಳು.

೪. ಇನ್ನೊಂದು ಪ್ರಕರಣದಲ್ಲಿ ತ್ಯಾಗರಾಜ ಪಿಳ್ಯೈ ಇವರ ಹತ್ಯೆ ಮಾಡಲಾಯಿತು. ತ್ಯಾಗರಾಜ ಪಿಳೈ ಇವರು ಘೌಸಖಾನ್‌ಗೆ ೧೫ ಸಾವಿರ ರೂಪಾಯಿಯ ಸಾಲವನ್ನು ಕೊಟ್ಟಿದ್ದರು. ಘೌಸಖಾನ್ ಇವರು ಆ ಹಣವನ್ನು ಹಿಂದಿರುಗಿಸುತ್ತಿರಲಿಲ್ಲ. ಘೌಸಖಾನನಿಗೆ ಆತನ ಸಹೋದರಿ ಮತ್ತು ತ್ಯಾಗರಾಜ ಇವರ ಪ್ರೇಮ ಪ್ರಕರಣ ಇದೆ ಎಂದು ಸಂದೇಹ ಇತ್ತು. ಅಬಿದ ಪಾಶಾ ಮತ್ತು ಘೌಸಖಾನ್ ಸೇರಿ ತ್ಯಾಗರಾಜರನ್ನು ೨೧.೫.೨೦೧೦ ರಂದು ಹತ್ಯೆ ಮಾಡಿದರು. ಪೊಲೀಸರು ಆರೋಪಿಗಳನ್ನು ಬಂಧಿಸಲಿಲ್ಲ.

೫. ಮೈಸೂರಿನಲ್ಲಿಯ ಮತ್ತೊಂದು ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ಸ್ವಂತ ಸಹೋದರ ವಿಘ್ನೇಶ ಹಾಗೂ ಸುಧೀಂದ್ರ ವಿದ್ಯಾರ್ಥಿಗಳ ಕುಟುಂಬಸ್ತರು ಪೊಲೀಸರನ್ನು ಸಂಪರ್ಕಿಸಿದ ಕಾರಣ ಕೂಡಲೇ ಅವರ ಹತ್ಯೆಯನ್ನು ಮಾಡಿ ಅವರ ಶವವನ್ನು ಊರಿನ ಹೊರಭಾಗದ ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿತ್ತು ಈ ಇಬ್ಬರ ಹತ್ಯೆಯ ತನಿಖೆಯನ್ನು ಮಾಡಲು ಆರೋಪಿಗಳನ್ನು ಬಂಧಿಸಿದರು ಅವರ ತನಿಖೆಯಲ್ಲಿ ಅವರು ತ್ಯಾಗರಾಜ ಪಿಳ್ಯೈ ಹತ್ಯೆಯನ್ನು ತಾವೇ ಮಾಡಿದ್ದೇವೆ ಎಂದು ಒಪ್ಪಿಕೊಂಡರು. ಇಷ್ಟಾದರೂ ಈ ಮೇಲಿನ ಸ್ವೀಕೃತಿಯನ್ನು ನ್ಯಾಯಧೀಶರ ಮುಂದೆ (ನ್ಯಾಯಾಧೀಶರು ಉಪಸ್ಥಿತರಿರುವಾಗ) ನೋಂದಣಿಯನ್ನು ಮಾಡಲಿಲ್ಲ ಇದರಿಂದ ಈ ಸ್ವೀಕೃತಿಗೆ ಕಾನೂನಿನಲ್ಲಿ ಮಾನ್ಯತೆ ಸಿಗಲಿಲ್ಲ ಹಾಗೂ ಇದರೊಂದಿಗೆ ಇದರ ಬಗ್ಗೆ ಯಾವುದೇ ಸಾಕ್ಷಿಗಳನ್ನು ಒಟ್ಟು ಮಾಡಲಿಲ್ಲ. ಇದರಿಂದ ಪೊಲೀಸರಿಗೆ ಅಬಿದ್ ಪಾಶಾನನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಆತ ಭೂಗತವಾದನು. ಈ ಖಟ್ಲೆಯಲ್ಲಿ ಇತರ ಆರೋಪಿಗಳು ನಿರಪರಾಧಿಗಳೆಂದು ಬಿಡುಗಡೆಯಾದ ನಂತರ ಆತ ಪುನಃ ಕಾಣಿಸಿಕೊಂಡನು. ಅಬಿದನು ಉಚ್ಚ ನ್ಯಾಯಾಲಯದಲ್ಲಿ ಈ ಮೇಲಿನ ಖಟ್ಲೆಯಲ್ಲಿ ಇತರ ಆರೋಪಿಗಳು ನಿರಪರಾಧಿಗಳೆಂದು ಮುಕ್ತ ಮಾಡಿದಂತೆ ಆತನ ಮೇಲಿನ ಖಟ್ಲೆಯನ್ನೂ ರದ್ದು ಪಡಿಸಿ ಆತನ್ನೂ ನಿರಪರಾಧಿ ಎಂದು ಮುಕ್ತ ಮಾಡಬೇಕು ಎಂದು ವಿನಂತಿಸಿದಾಗ ನ್ಯಾಯಮೂರ್ತಿ ಫಣೀಂದ್ರ ಇವರು ವಿನಂತಿಯನ್ನು ಮನ್ನಿಸಿ ಆತನನ್ನೂ ನಿರಪರಾಧಿ ಎಂದು ೧೧ ಜನವರಿ ೨೦೧೮ ರಂದು ಮುಕ್ತ ಮಾಡಿದರು.

ಒಟ್ಟಾರೆ ಈ ಎಲ್ಲ ಪ್ರಕರಣಗಳಲ್ಲಿ ಎಲ್ಲಿಯೂ ಕೋಕಾ ಕಾನೂನು ಅನ್ವಯಿಸದಿರುವುದು, ಅಪರಾಧ ಕೃತ್ಯಗಳ ತಡೆ ಕಾನೂನು(ಯುಎಪಿಎ)ನೆಪಮಾತ್ರಕ್ಕೆ ನೋಂದಾಯಿಸುವುದು, ನೆಪಮಾತ್ರಕ್ಕೆ ಬಂಧಿಸುವುದು, ಸಡಿಲ ರೀತಿಯಲ್ಲಿ ತಪಾಸಣೆ, ಎಲ್ಲ

ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಯಾದರು. ದೋಷ ಸಿದ್ಧವಾಗುವ ಸಾಧ್ಯತೆ ಉಳಿಯಲಿಲ್ಲ. ಹಿಂದುತ್ವನಿಷ್ಠರ ಹತ್ಯೆಯ ಮಾಲಿಕೆಯು ನಡೆದರೂ ಅದು ಬಹಿರಂಗವಾದರೂ ಅದರ ತನಿಖೆಯನ್ನು ಮಾಡಲು ವಿಶೇಷ ಅನ್ವೇಷಣೆಯ ತಂಡವನ್ನು ಸ್ಥಾಪನೆ ಮಾಡಲಿಲ್ಲ, ಇದು ವಿಶೇಷವಾಗಿದೆ ! ದೇವಾಲಯ ಕಟ್ಟಲು ಮುಂದಾಳತ್ವ ವಹಿಸಿದ್ದ ಭಾಜಪ ಮತ್ತು ವಿಹಿಂಪ ಕಾರ್ಯಕರ್ತ ಕೆ.ರಾಜೂ ಹತ್ಯೆ ತನಿಖೆಯಲ್ಲಿಯೂ ಕೂಡ ಪೊಲೀಸರಿಂದ ಇದೇ ರೀತಿಯ ತಪ್ಪುಗಳಾದವು. ಮತಾಂಧರು ಕತ್ತಿಯಿಂದ ಮಾಡಿದ ಮಾರಣಾಂತಿಕ ಹಲ್ಲೆಯಿಂದ ಕೆ. ರಾಜು ಸ್ಥಳದಲ್ಲೇ ಮೃತ ಪಟ್ಟಿದ್ದರು.

೬. ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದಂತಹ ಸಂಘಟನೆಯೊಂದಿಗೆ ಈ ಹತ್ಯೆಗಳ ನಂಟಿರುವುದು ಬಹಿರಂಗ ವಾದರೂ ಕ್ರಮಕೈಗೊಂಡಿಲ್ಲ : ಈ ಪ್ರಕರಣಕ್ಕೆ ‘ಪಿಎಫ್‌ಐ (ಪಾಪ್ಯುಲರ ಫ್ರಂಟ ಆಫ್ ಇಂಡಿಯಾ)ನ ನಂಟಿತ್ತು. ಹಿಂದೆ ಇದೇ ತಂಡವು ‘ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ’ ಈ ಹೆಸರಿನಲ್ಲಿ ಕಾರ್ಯವನ್ನು ಮಾಡುತ್ತಿತ್ತು. ಮುಂದೆ ಅದು ಪಿಎಫ್‌ಐ ನಲ್ಲಿ ವಿಲೀನವಾಯಿತು ಆದರೆ ‘ಪಿಎಫ್.ಐವನ್ನು ನಿಷೇಧಿಸುವ ಅಥವಾ ಅದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬೇಡಿಕೆಯಿಲ್ಲ. ಅವರ ವಿರುದ್ಧ ಪ್ರಕಾಶ ರಾಜ, ಕವಿತಾ ಲಂಕೇಶ ಅಥವಾ ದೊರೆಸ್ವಾಮಿ ಯವರಂತಹ ಸ್ವಾತಂತ್ರ್ಯ ಹೋರಾಟಗಾರರು ನಿಂತಿರುವುದು ಕಂಡು ಬಂದಿಲ್ಲ. ಇದು ವೈಚಾರಿಕ ಭಯೋತ್ಪಾದನೆಯಾಗಿದೆ.

ಇದು ತಮಗನುಕೂಲಕರವಾಗುವ ರೀತಿಯಲ್ಲಿ ಸಕ್ರಿಯತೆ ಮತ್ತು ತನಿಖೆ ನಡೆಸಿ ಹಿಂದೂ ಕಾರ್ಯಕರ್ತರನ್ನು ಗುರಿ ಮಾಡುವ ಕಾಂಗ್ರೆಸ್ ಸರಕಾರದ ಬಹಿರಂಗ ಪ್ರಯತ್ನವಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ಸಿನಿಂದ ಯಾವುದೇ ವಿಶೇಷ ಅಪೇಕ್ಷೆಯಿಲ್ಲ; ಆದರೆ ಭಾಜಪ ಮತ್ತು ಸಂಘ ಪರಿವಾರದವರ ಮೂಕದರ್ಶಕ ವೃತ್ತಿ ಅತ್ಯಂತ ವ್ಯಥೆಗೊಳಿಸುವಂತಹದ್ದಾಗಿದೆ. ಇದೆಲ್ಲ ಪ್ರಕರಣದಲ್ಲಿ ಬಲಿಯಾಗಿರುವವರಿಗೆ ನ್ಯಾಯ ದೊರೆಯಲಾರದೇ ?

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷದ್. ಸಂಪರ್ಕ : 8451006055


Spread the love

Exit mobile version