Home Mangalorean News Kannada News ಕರ್ನಾಟಕದ ಹಳ್ಳಿ ಹಳ್ಳಿಗೂ ತಲುಪಲಿದೆ ‘ಗ್ರಾಮೀಣ ಸಿನಿಮಾ ನಿರ್ಮಾಣ ಮತ್ತು ಉದ್ಯಮಶೀಲತೆ’ ಯ ಶಿಕ್ಷಣ ಮತ್ತು...

ಕರ್ನಾಟಕದ ಹಳ್ಳಿ ಹಳ್ಳಿಗೂ ತಲುಪಲಿದೆ ‘ಗ್ರಾಮೀಣ ಸಿನಿಮಾ ನಿರ್ಮಾಣ ಮತ್ತು ಉದ್ಯಮಶೀಲತೆ’ ಯ ಶಿಕ್ಷಣ ಮತ್ತು ತರಬೇತಿ

Spread the love

“ಕರ್ನಾಟಕದ ಹಳ್ಳಿಹಳ್ಳಿಗೂ ತಲುಪಲಿದೆ “ಗ್ರಾಮೀಣ ಸಿನಿಮಾ ನಿರ್ಮಾಣ ಮತ್ತು ಉದ್ಯಮಶೀಲತೆ”ಯ ಶಿಕ್ಷಣ ಮತ್ತು ತರಭೇತಿ. ಮುಂಬೈ ಮೂಲದ ಪ್ರತಿಷ್ಠಿತ ರಾಂಕೆಲ್ ಸಂಸ್ಥೆ ನನಸಾಗಿಸಲಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯ ಆತ್ಮನಿರ್ಭರ ಭಾರತ ಅಭಿಯಾನದ ಕನಸು.”

ಭಾರತೀಯ ಚಿತ್ರರಂಗ ವಿಶ್ವಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಕನ್ನಡ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರ ಕೊಡುಗೆ ಶ್ರೇಷ್ಟ ಮತ್ತು ಅತ್ಯಮೂಲ್ಯ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್, ಗುಬ್ಬಿ ವೀರಣ್ಣ ರಂತಹ ಅನೇಕ ದಿಗ್ಗಜರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಸ್ತಿತ್ವ ಮತ್ತು ವಿಶೇಷತೆ ಯನ್ನು ಹುಟ್ಟುಹಾಕಿದ್ದಾರೆ.

ಗ್ರಾಮೀಣ ಕರ್ನಾಟಕದ ಸೊಬಗನ್ನು ಅತ್ಯಂತ ಸೃಜನಶೀಲತೆಯಿಂದ ಪರದೆಯ ಮೇಲೆ ವೈಭವೀಕರಿಸಿರುವ ಕನ್ನಡದ ಕಲಾವಿದರು ಹಿಂದಿ ಸಿನಿಮಾ ಸೇರಿದಂತೆ ಅನ್ಯ ಭಾಷೀಯ ಚಿತ್ರರಂಗಕ್ಕೂ ಮಾದರಿಯಾಗುವಂತೆ ಕನ್ನಡ ಚಿತ್ರರಂಗವನ್ನು ನಿರ್ಮಿಸಿದ್ದಾರೆ.

ಆಧುನೀಕತೆ ಮತ್ತು ಪಾಶ್ಚ್ಯಾ ತೀಕರಣ ಉಂಟುಮಾಡುತ್ತಿರುವ ಪರಿಣಾಮಗಳ ನಡುವೆ, ಪ್ರಸ್ತುತ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವದ ಅಳಿವು ಉಳಿವಿಗೆ ಹೋರಾಟ ಮಾಡುತ್ತಿರುವುದು ವಿಷಾಧನೀಯ ಸಂಗತಿ.

ಪ್ರತಿಭಾನ್ವಿತ ಕಲಾವಿದರು, ಸೃಜನಶೀಲ ನಿರ್ದೇಶಕರು ಹಾಗೂ ಕ್ರಿಯಾಶೀಲ ತಂತ್ರಜ್ಞರು ಬೆಳಕಿಗೆ ಬರಬೇಕೆಂದರೆ ಗುಣಮಟ್ಟದ ತರಭೇತಿ ಮತ್ತು ಶಿಕ್ಷಣ ಅವಶ್ಯಕ ಹಾಗೂ ಅನಿವಾರ್ಯ.

ಪ್ರತಿಷ್ಠಿತ ರಾಂಕೆಲ್ ಶಿಕ್ಷಣ ಸಂಸ್ಥೆ ಪರಿಚಯಿಸುತ್ತಿರುವ ಗ್ರಾಮೀಣ ಸಿನಿಮಾ ನಿರ್ಮಾಣ ಮತ್ತು ಉದ್ಯಮಶೀಲತೆಯ ಶೈಕ್ಷಣಿಕ ಕಾರ್ಯಕ್ರಮಗಳು ಪ್ರತಿಯೊಬ್ಬ ಕನ್ನಡಿಗನ ಸಿನಿಮಾ ನಿರ್ಮಾಣ ಮಾಡುವ ಮತ್ತು ಸಿನಿಮಾ ರಂಗದಲ್ಲಿ ಉದ್ಯಮಶೀಲತೆಯನ್ನು ಪ್ರಾರಂಭಿಸುವ ಮಹತ್ವಾಕಾಂಕ್ಷೆಗೆ ಪುಷ್ಟಿಕೊಡುವಂತಾಗಿದೆ.

ತಮ್ಮ ನೆಚ್ಚಿನ ತರಭೇತಿ ಕಾರ್ಯಕ್ರಮಗಳನ್ನು ಇ-ಲರ್ನಿಂಗ್ ವ್ಯವಸ್ಥೆಯ ಮುಖಾಂತರ ಪಡೆದುಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗಿದೆ. ಗ್ರಾಮೀಣ ಸಿನಿಮಾ ನಿರ್ಮಾಣ ಮತ್ತು ಉದ್ಯಮಶೀಲತೆಯ ಕುರಿತಾದ ಅಲ್ಪಾವಧಿ ತರಭೇತಿ ಕಾರ್ಯಕ್ರಮಗಳು ಸಂಪೂರ್ಣ ಉಚಿತವಾಗಿದ್ದು ಪ್ರತಿಯೊಬ್ಬ ಕನ್ನಡಿಗನ ಸಿನಿಮಾ ನಿರ್ಮಾಣದ ಕನಸು ನನಸಾಗಿಸುವ ಮಹತ್ತರ ಕಾರ್ಯಕ್ರಮವಾಗಿದೆ.

ಯುನೈಟೆಡ್ ಕಿಂಗ್ಡಮ್ ನ ಹೆಸರಾಂತ ಬಿರ್ಮಿಂಗ್ ಹ್ಯಾಮ್ ಸಿಟಿ ವಿಶ್ವವಿದ್ಯಾನಿಲಯದ ಪಾಲುದಾರ ಸಂಸ್ಥೆಯಾಗಿರುವ ರಾಂಕೆಲ್ ಶಿಕ್ಷಣ ಸಂಸ್ಥೆ ಹಲವಾರು ವರ್ಷಗಳಿಂದ ಭಾರತೀಯ ಚಿತ್ರರಂಗಕ್ಕೆ ತನ್ನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮುಖಾಂತರ ಕ್ರಿಯಾಶೀಲ ಮತ್ತು ಪ್ರತಿಭಾನ್ವಿತ ಕಲಾವಿದರಿಗೆ ದಾರಿದೀಪವಾಗಿದೆ.

ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಿನಿಮಾ ನಿರ್ಮಾಣದ ಕನಸು ಕಾಣುತ್ತಿರುವ ಅದೆಷ್ಟೋ ಯುವಪ್ರತಿಭೆಗಳಿಗೆ “ಸೂಕ್ಷ್ಮ ತಂತ್ರಜ್ಞಾನ, ಗರಿಷ್ಠ ಮೌಲ್ಯಯುತ ವಸ್ತುವಿಷಯ, ವ್ಯಾಪಕ ಮತ್ತು ಭಾರಿ ಉದ್ಯಮ”ಗಳಂತಹ ಅಂಶಗಳನ್ನು ವೃತ್ತಿನಿರತ ತರಭೇತಿ ನೀಡುವ ಮುಖಾಂತರ ರಾಂಕೆಲ್ ಸಂಸ್ಥೆ ಅವಕಾಶಗಳನ್ನು ಕಲ್ಪಿಸಲಿದೆ ಎನ್ನುತ್ತಾರೆ ಸ್ವಾಧೀನ್ ಪಾಡಿ, ನಿರ್ದೇಶಕರು, ಶಿಕ್ಷಣ ಮತ್ತು ತರಭೇತಿ ವಿಭಾಗ, ರಾಂಕೆಲ್ ಸಂಸ್ಥೆ.

ಕರಾವಳಿ ಕರ್ನಾಟಕ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು. ಹೆಸರಾಂತ ಹಿಂದಿ ಸಿನಿಮಾದ ನಟ ನಟಿಯರನ್ನು ಸೇರಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲೂ ಕರಾವಳಿ ಕರ್ನಾಟಕದ ಪ್ರತಿಭೆಗಳು ಹೆಸರುಗಳಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಕನ್ನಡ ಜಿಲ್ಲೆಯವರಿಂದ ನನ್ನ ಕಲಾ ಚಟುವಟಿಕೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹವನ್ನು ಸಂತೋಷದಿಂದ ನೆನೆಸಿಕೊಳ್ಳುತ್ತಾರೆ ರಾಂಕೆಲ್ ಸಂಸ್ಥೆಯ ಆಡಳಿತ ವಿಭಾಗದ ನಿರ್ದೇಶಕರಾಗಿರುವ ನಿಖಿಲ್ ಕೆದಂಬಾಡಿ.

ಕನ್ನಡ ಚಿತ್ರರಂಗದ ಅಗ್ರಗಣ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರೊಳಗೂಡಿದ ತಂಡ ರಾಂಕೆಲ್ ಸಂಸ್ಥೆಯ ಶೈಕ್ಷಣಿಕ ಮಂಡಳಿಯ ಸದಸ್ಯರು ಮತ್ತು ತರಭೇತು ದಾರರಾಗಿರುವುದು ವಿದ್ಯಾರ್ಥಿಗಳಿಗೆ ಮತ್ತು ಸಿನಿಮಾ ಆಕಾಂಕ್ಷಿಗಳಿಗೆ ಒಂದು ಹೆಮ್ಮೆಯ ವಿಷಯವಾಗಿದೆ.

ಕೈಗೆಟುಕುವ ಸಣ್ಣ ಪುಟ್ಟ ತಂತ್ರಜ್ಞಾನ ಗಳನ್ನು ಬಳಿಸಿ, ಮೊಬೈಲ್ ಕ್ಯಾಮರಾಗಳಿಂದ ಚಲನಚಿತ್ರಗಳನ್ನು ನಿರ್ಮಿಸುತ್ತಿರುವ ಪ್ರವರ್ತಿ ಇತ್ತೀಚಿಗೆ ಸಿನಿಮಾ ಕ್ಷೇತ್ರದ ಮುಖ್ಯವಾಹಿನಿಗೆ ಬರಲಾರಂಭಿಸಿದೆ. ಮೊಬೈಲ್ ಫೋನ್ ಗಳನ್ನು ಪ್ರಧಾನ ಉಪಕರಣಗಳನ್ನಾಗಿ ಬಳಸಿ ನಿರ್ಮಿಸಿದ ಅನೇಕ ಅತ್ತ್ಯುತ್ತಮ ಗುಣಮಟ್ಟದ ಸಿನಿಮಾಗಳು ಬಹುತೇಕ ಯಶಸ್ವಿಗೊಂಡಿವೆ. ಪ್ರಸ್ತುತ ದಿನಮಾನಗಳಲ್ಲಿ ಮುಂಚೂಣಿಯಲ್ಲಿರುವ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ನಂತಹ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರದರ್ಶನಗೊಂಡು ಆರ್ಥಿಕವಾಗಿಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಾಭಗಳಿಸುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿರುವ “ಆತ್ಮನಿರ್ಭರ ಭಾರತ ಅಭಿಯಾನ” ಪ್ರತಿಯೊಬ್ಬ ಭಾರತೀಯನ್ನನ್ನು ಔದ್ಯೋಗಿಕವಾಗಿ ಸಶಕ್ತೀಕರಣಗೊಳಿಸುವ ಐತಿಹಾಸಿಕ ಯೋಜನೆ. 2017 ರಲ್ಲಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ಪೊಲೀಸ್ ಹುತಾತ್ಮರಿಗೆ ಗೌರವಪೂರ್ವಕವಾಗಿ ಶ್ರದ್ಧಾಂಜಲಿ ಎಂಬ ಲಘು ಸಿನಿಮಾವನ್ನು ರಾಂಕೆಲ್ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡುವ ಮುಖಾಂತರ ಜನಮನ್ನಣೆ ಗಳಿಸಿತ್ತು. ತನ್ನ ಐತಿಹಾಸಿಕ ಸಿನಿಮಾ ನಿರ್ಮಾಣಕ್ಕಾಗಿ ಸಂಸ್ಥೆಯು ಸತತ 3 ಬಾರಿ ಲಿಮ್ಕಾ ಬುಕ್ ಆಫ್ ನ್ಯಾಶನಲ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ ರಾಂಕೆಲ್ ಸಂಸ್ಥೆ.

“ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ತನ್ನ ಮಣ್ಣಿನ ನೈಜ ಪ್ರತಿಭೆಗಳನ್ನು ವಿಶ್ವಮಟ್ಟಕ್ಕೆ ಪರಿಚಯಿಸುವಲ್ಲಿ “ಗ್ರಾಮೀಣ ಚಲನಚಿತ್ರೋದ್ಯಮ ಮತ್ತು ಉದ್ಯಮಶೀಲತೆ” ಎಂಬ ಪರಿಕಲ್ಪನೆ ಶೈಕ್ಷಣಿಕ ರೂಪ ತಾಳಿ, ಕನ್ನಡ ಚಿತ್ರರಂಗದಲ್ಲಿ ಒಂದು ನವೀನ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ” ಎನ್ನುವ ವಿಶ್ವಾಸ ವ್ಯಕ್ತ ಪಡಿಸುತ್ತಾರೆ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿರುವ ಸಂಜೀವ್ ಶರ್ಮಾರವರು.


Spread the love

Exit mobile version