ಕರ್ನಾಟಕ ಕಾರ್ಮಿಕರ ವೇದಿಕೆಗೆ ನೂತನ ಸದಸ್ಯರ ಸೇರ್ಪಡೆ
ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ (ರಿ) ನ ಮಹಾಸಭೆ ಇತ್ತೀಚೆಗೆ ವೇದಿಕೆಯ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಕೂಲಿ-ಕಾರ್ಮಿಕರ ಅಭಿವೃದ್ಧಿ ಮತ್ತು ಸಂಕಷ್ಟಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಇದೇ ತಿಂಗಳು ಜನವರಿಯಲ್ಲಿ ವೇದಿಕೆಯ ವತಿಯಿಂದ ಬೈಂದೂರಿನಲ್ಲಿ ನಡೆಯುವ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ ಹಾಗೂ ಎಂಡೋಸಲ್ಥಾನ್ ಮತ್ತು ಪೋಲಿಯೋ ಪೀಡಿತರಿಗೆ ಸಹಾಯಧನ ವಿತರಿಸುವ ಬಗ್ಗೆ ರೂಪು-ರೇಷೆಗಳನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಆರೋಗ್ಯ ಚಿಂತಕ ದಯಾನಂದ ಶೆಟ್ಟಿ ದೆಂದೂರ್ ಹಾಗೂ ಪ್ರಶಾಂತ್.ಜಿ. ದೇವಾಡಿಗ, ಲೆಕ್ಕ ಪರಿಶೋಧಕರು ಕರ್ನಾಟಕ ಕಾರ್ಮಿಕರ ವೇದಿಕೆಗೆ ಸೇರ್ಪಡೆಗೊಂಡರು. ಇವರೊಟ್ಟಿಗೆ ಹೊಸ ವರುಷದ ಪ್ರಯುಕ್ತ ನೂರಾರು ಸಾರ್ವಜನಿಕರು ವೇದಿಕೆಗೆ ಸದಸ್ಯರಾದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ರವಿಶಾಸ್ತ್ರಿ ಬನ್ನಂಜೆ, ಸಂದೀಪ್. ಕೆ. ಕೊಡಂಕೂರು, ಮಲ್ಲಿಕಾರ್ಜುನ್, ರೈತಕವಿ ವಿ.ನಾ. ಗೌಡರು, ರಾಘವೇಂದ್ರ ಕುಂದರ್, ಚಂದ್ರು ಪೂಜಾರಿ, ಕೆವಿನ್ ನೆಲ್ಸನ್ ಮಂಜುನಾಥ್ ಕೊಡಂಕೂರು, ಸಂದೀಪ್ ಕುಮಾರ್, ಗೌತಮ್ ಉಪಸ್ಥಿತರಿದ್ದರು ಕುಮಾರಿ ದೀಕ್ಷಿತ ವಂದಿಸಿದರು