Home Mangalorean News Kannada News ಕರ್ನಾಟಕ ಗೋವಾ ಹೆದ್ದಾರಿ ಬಂದ್‌ ಹಿನ್ನೆಲೆ ಮಂಗಳೂರು – ಮಡಗಾಂವ್‌ ನಡುವೆ ವಿಶೇಷ ರೈಲು

ಕರ್ನಾಟಕ ಗೋವಾ ಹೆದ್ದಾರಿ ಬಂದ್‌ ಹಿನ್ನೆಲೆ ಮಂಗಳೂರು – ಮಡಗಾಂವ್‌ ನಡುವೆ ವಿಶೇಷ ರೈಲು

Spread the love

ಕರ್ನಾಟಕ ಗೋವಾ ಹೆದ್ದಾರಿ ಬಂದ್‌ ಹಿನ್ನೆಲೆ ಮಂಗಳೂರು – ಮಡಗಾಂವ್‌ ನಡುವೆ ವಿಶೇಷ ರೈಲು

ಭಾರೀ ಮಳೆಗೆ ಗೋವಾ ಕುಮುಟ ಮಾರ್ಗದ ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಗಿರುವ ಹಿನ್ನೆಲೆ ಮಂಗಳೂರು ಮಡವಾಂವ್‌ ನಡುವೆ ವಿಶೇಷ ರೈಲು ಓಡಾಟ ನಡೆಸಲು ನಿರ್ಧರಿಸಲಾಗಿದೆ. ಈ ರೈಲಿನ ವೇಳಾಪಟ್ಟಿ , ಎಲ್ಲೆಲ್ಲಿ ನಿಲುಗಡೆಯಾಗಲಿದೆ , ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಡಗಾಂವ್‌ ಜಂಕ್ಷನ್‌ ಹಾಗೂ ಮಂಗಳೂರು ಜಂಕ್ಷನ್‌ ನಡುವೆ ಮೀಸಲು ರಹಿತ ವಿಶೇಷ ಮೆಮು ರೈಲು.
ಬೆಳಗ್ಗೆ 6 ಗಂಟೆಗೆ ಮಡಗಾಂವ್‌ ಜಂಕ್ಷನ್‌ನಿಂದ ಹೊರಟು ಮೆಮು ರೈಲು ಅಪರಾಹ್ನ 12.15ಕ್ಕೆ ಮಂಗಳೂರು ತಲುಪಲಿದೆ.

ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಸಂಜೆ 7 ಗಂಟೆಗೆ ಮಡಗಾಂವ್‌ ತಲುಪಲಿದೆ.

ಈ ರೈಲಿಗೆ ಕಾಣಕೋಣ, ಕಾರವಾರ, ಹರ್ವಾಡ, ಅಂಕೋಲ, ಗೋಕರ್ಣ ರೋಡ್‌, ಮಿರ್ಜಾನ, ಕುಮಟ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಶಿರೂರು, ಮೂಕಾಂಬಿಕಾ ರೋಡ್‌ ಬೈಂದೂರು, ಬಿಜೂರು, ಸೇನಾಪುರ, ಕುಂದಾಪುರ, ಬಾರಕೂರು, ಉಡುಪಿ, ಮೂಲ್ಕಿ, ಸುರತ್ಕಲ್‌, ತೋಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ ವಿಸ್ತರಣೆ

ಮಯಿಲಾಡುತುರೈ-ಮೈಸೂರು ನಿಲ್ದಾಣಗಳ ನಡುವೆ ಪ್ರತಿದಿನ ಚಲಿಸುವ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಕಡಲೂರು ಪೋರ್ಟ್ವರೆಗೆ ವಿಸ್ತರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ವಿಸ್ತೃತ ರೈಲು ಸೇವೆಯು ಎರಡೂ ಕಡೆಯಿಂದ ಪ್ರಾರಂಭವಾಗಿದೆ.

ರೈಲು ಸಂಖ್ಯೆ 16232 ಮೈಸೂರು-ಕಡಲೂರು ಪೋರ್ಟ್ ಡೈಲಿ ಎಕ್ಸ್ ಪ್ರೆಸ್ ಮಯಿಲಾಡುತುರೈಗೆ 06:45 ಗಂಟೆಗೆ ಆಗಮಿಸಿ, 07:00 ಗಂಟೆಗೆ ನಿರ್ಗಮಿಸಲಿದೆ. ಸಿರ್ಕಾಝಿಗೆ 07:23 ಗಂಟೆಗೆ ಆಗಮಿಸಿ, 07:24 ಗಂಟೆಗೆ ನಿರ್ಗಮಿಸಲಿದೆ. ಚಿದಂಬರಂಗೆ 07:41 ಗಂಟೆಗೆ ಆಗಮಿಸಿ, 07:42 ಗಂಟೆಗೆ ನಿರ್ಗಮಿಸಲಿದೆ. ಕಡಲೂರು ಪೋರ್ಟ್ ಗೆ 08:35 ಗಂಟೆಗೆ ಆಗಮಿಸಲಿದೆ.

ರೈಲು ಸಂಖ್ಯೆ 16231 ಕಡಲೂರು ಪೋರ್ಟ್-ಮೈಸೂರು ಡೈಲಿ ಎಕ್ಸ್ ಪ್ರೆಸ್. ಕಡಲೂರು ಪೋರ್ಟ್ ನಿಲ್ದಾಣದಿಂದ 15:40 ಗಂಟೆಗೆ ನಿರ್ಗಮಿಸಲಿದೆ. ಚಿದಂಬರಂಗೆ 16:07 ಗಂಟೆಗೆ ಆಗಮಿಸಿ, 16:08 ಗಂಟೆಗೆ ನಿರ್ಗಮಿಸಲಿದೆ. ಸಿರ್ಕಾಝಿಗೆ 16:23 ಗಂಟೆಗೆ ಆಗಮಿಸಿ,16:24 ಗಂಟೆಗೆ ನಿರ್ಗಮಿಸಲಿದೆ. ಮಯಿಲಾಡುತುರೈಗೆ 17:30 ಗಂಟೆಗೆ ಆಗಮಿಸಿ,17:55 ಗಂಟೆಗೆ ನಿರ್ಗಮಿಸಲಿದೆ. ಮೈಸೂರು-ಮೈಲಾಡುತುರೈ ನಿಲ್ದಾಣಗಳ ನಡುವಿನ ನಿಲುಗಡೆ ಮತ್ತು ವೇಳಾಪಟ್ಟಿಯಲ್ಲಿ ಬದಲಾಣೆ ಇರುವುದಿಲ್ಲ.

ಗಂಗಾವತಿ, ಸಿಂಧನೂರು ತಾಲೂಕುಗಳಿಗೆ ನೂತನ ರೈಲುಗಳ ಸಂಪರ್ಕ ಕಲ್ಪಿಸಲು ಒತ್ತಾಯಿಸಿ, ರೋಟರಿ ಕ್ಲಬ್‌ ಪದಾಧಿಕಾರಿಗಳು ಸಂಸದ ಕೆ. ರಾಜಶೇಖರ ಹಿಟ್ನಾಳ ಅವರಿಗೆ, ಹಿಟ್ನಾಳ ಗ್ರಾಮದ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು. ಗಂಗಾವತಿ, ಸಿಂಧನೂರು ತಾಲೂಕುಗಳಿಗೆ ರೈಲು ಮಾರ್ಗ ಆರಂಭಿಸಲಾಗಿದ್ದು, ಸದ್ಯ ಹುಬ್ಬಳ್ಳಿ, ಬೆಂಗಳೂರು ರೈಲುಗಳು ಮಾತ್ರ ಸಂಚರಿಸುತ್ತಿವೆ. ಗಂಗಾವತಿ, ಸಿಂಧನೂರು ತಾಲೂಕುಗಳು ಮಾರುಕಟ್ಟೆ ವಿಸ್ತರಣೆಯಲ್ಲಿ ಜಿಲ್ಲೆಯಲ್ಲೇ ಹೆಸರು ವಾಸಿಯಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿಪ್ರಯಾಣಿಸುತ್ತಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ, ಹಬ್ಬಳ್ಳಿಯಿಂದ ಹೊರಡುವ ದಾದರ್‌, ಅಯೋಧ್ಯೆವರೆಗೆ ಗಂಗಾವತಿಯಿಂದ ರೈಲು ಓಡಿಸಬೇಕು. ಅದೇ ರೀತಿ ರಾಮಾಯಣ ಕಾಲದ ಐತಿಹಾಸಿಕ ಇತಿಹಾಸ ಇರುವ ಕಿಷ್ಕಿಂದ ಕ್ಷೇತ್ರವಾಗಿರುವ ಕಾರಣ ಕಿಷ್ಕಿಂದ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಗಂಗಾವತಿ- ದರೋಜಿ ರೈಲು ಮಾರ್ಗ ಆರಂಭಿಸಬೇಕು. ಗಂಗಾವತಿ, ಸಿಂಧನೂರು ರೈಲ್ವೆ ನಿಲ್ದಾಣಗಳಿಗೆ ಇನ್ನಷ್ಟು ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.


Spread the love

Exit mobile version