Home Mangalorean News Kannada News ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕಲಾವಿದರ ಕುಟುಂಬಕ್ಕೆ ಕಿಟ್ ವಿತರಣೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕಲಾವಿದರ ಕುಟುಂಬಕ್ಕೆ ಕಿಟ್ ವಿತರಣೆ

Spread the love

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕಲಾವಿದರ ಕುಟುಂಬಕ್ಕೆ ಕಿಟ್ ವಿತರಣೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ   ಸಿ. ಟಿ. ರವಿ ಅವರ ಮಾರ್ಗದರ್ಶನದಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯವತಿಯಿಂದ 500 ಅರ್ಹ ಕಲಾವಿದರ ಕುಟುಂಬಕ್ಕೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯು  ಅಕಾಡೆಮಿಯ ‘ಸಿರಿ ಚಾವಡಿ’ ಯಲ್ಲಿ ನಡೆಯಿತು.

 ಶಾಸಕರಾದ   ಡಿ. ವೇದವ್ಯಾಸ ಕಾಮತ್‍ರವರ ಉಪಸ್ಥಿತಿಯಲ್ಲಿ ಕಿಟ್ ವಿತರಣೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಾಕ್‍ಡೌನ್‍ನ ಈ ಸಂದರ್ಬ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಿಟ್‍ಗಳನ್ನು ನೀಡುತ್ತಿರುವ ಅಕಾಡೆಮಿಯ ಸೇವೆ ಶ್ಲಾಘನೀಯ ಎಂದರು ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಇವರು ಮಾತನಾಡಿ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಸ್ಮರಿಸಿದರು. ಹಾಗೂ ಕಲಾವಿದರ ಪಟ್ಟಿಯನ್ನು ತಯಾರಿಸುವರೆ ಸಿಬ್ಬಂದಿಗಳನ್ನು ಹಾಗೂ ತುಳು ಸಂಘಟನಾ ಪ್ರಮುಖರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಸ್ಥಳೀಯ ಕಾಪೆರ್Çೀರೇಟರ್ ಜಯಲಕ್ಷ್ಮೀ ಶೆಟ್ಟಿ, ಅಕಾಡೆಮಿ ರಿಜಿಸ್ಟ್ರಾರ್, ರಾಜೇಶ್. ಜಿ, ಸದಸ್ಯರುಗಳಾದ ಲೀಲಾಕ್ಷ ಕರ್ಕೇರ, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ, ಡಾ. ಆಕಾಶ್‍ರಾಜ್ ಜೈನ್, ರವೀಂದ್ರ ಶೆಟ್ಟಿ ಬಳಂಜ, ನಾಗೇಶ್ ಕುಲಾಲ್, ವಿಜಯಲಕ್ಷ್ಮಿ ಪಿ ರೈ, ಕಡಬ ದಿನೇಶ್ ರೈ, ತಾರಾ ಉಮೇಶ್ ಆಚಾರ್ಯ, ಚೇತಕ್ ಪೂಜಾರಿ, ಪಿ. ಎಂ ರವಿ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version