ದೆಹಲಿ: ದೆಹಲಿಯಲ್ಲಿರುವ ಹೆಚ್ಚಿನ ಎಲ್ಲ ರಾಜ್ಯಗಳ ಭವನಗಳಲ್ಲಿ ಆಯಾ ಆಯಾ ರಾಜ್ಯಗಳ ತಿಂಡಿ ತಿನಿಸುಗಳು/ಊಟ ಉಪಹಾರಗಳು ಲಭ್ಯವಿದೆ. ಆದರೆ ಕರ್ನಾಟಕದ ಮೂರು ಭವನಗಳಿದ್ದರೂ ಇಲ್ಲಿ ಸೌಲಭ್ಯವಿಲ್ಲ. ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ದೆಹಲಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ದೆಹಲಿಯ ಕರ್ನಾಟಕ ಭವನದಲ್ಲಿ ಈ ಸೌಲಭ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲು ಮನವಿಯನ್ನು ಸಲ್ಲಿಸಿದರು. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕರ್ನಾಟಕ ರಾಜ್ಯದ ಹೋಟೆಲು ಉದ್ಯಮ ಮತ್ತು ಅಲ್ಲಿಯ ಆಹಾರ ಪದಾರ್ಥಗಳು ಲೋಕಪ್ರಿಯ ಜಗತ್ತಿನ ಮೂಲೆ ಮೂಲೆಗಳಲ್ಲಿ ಉಡುಪಿ, ಕಾಮತ್, ವುಡ್‍ಲ್ಯಾಂಡ್ಸ್, ದಾಸಪ್ರಕಾಶ್ ಹೋಟೆಲುಗಳು, ಮಂಗಳೂರಿನ ಮಾಂಸಾಹಾರಿ ಹೋಟೆಲುಗಳು, ಅಯ್ಯಂಗಾರ್ ಬೇಕರಿಗಳು, ಉತ್ತರಕರ್ನಾಟಕದ ಖಾನಾವಳಿಗಳು ಅತ್ಯಂತ ಹೆಸರುವಾಸಿ, ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಸಾಗರ್‍ರತ್ನ, ಸ್ವಾಗತ್, ಶ್ರೀರತ್ನ, ನೈವೇದ್ಯಂ, ಸೌಥಿ ಹೀಗೆ ಹಲವು ಕರ್ನಾಟಕದ ಹೋಟೆಲುಗಳು ಪ್ರಖ್ಯಾತಿ ಪಡೆದಿವೆ.
ದೇಶದ ರಾಜಧಾನಿಯಲ್ಲಿ ಎಲ್ಲಾ ರಾಜ್ಯಗಳ ಭವನಗಳಿವೆ. ಮುಖ್ಯವಾಗಿ ಆಂಧ್ರಭವನ, ಕೇರಳ ಭವನ, ಗುಜರಾತ್ ಭವನ, ತಮಿಳುನಾಡು ಭವನ, ಪಂಜಾಬ್ ಭವನ, ಮಹಾರಾಷ್ಟ್ರ ಹೀಗೆ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳ ಭವನಗಳಲ್ಲಿ ಆಯಾ ರಾಜ್ಯದ ಸಾಂಸ್ಕøತಿಕ ಅಂಗವಾದ ಊಟ, ತಿಂಡಿ-ತಿನಿಸುಗಳು ಸಾರ್ವಜನಿಕರಿಗೆ ಲಭ್ಯವಿದೆ. ಕರ್ನಾಟಕದ ಆಹಾರಗಳು ವಿಶ್ವವಿಖ್ಯಾತಿ ಪಡೆದಿದ್ದರೂ, ರಾಜಧಾನಿಯ ಮೂರು ಕರ್ನಾಟಕ ಭವನಗಳಲ್ಲಿ ಸಾರ್ವಜನಿಕರು ಇದರಿಂದ ವಂಚಿತರಾಗಿದ್ದಾರೆ. ದೆಹಲಿಯ ಈ ಮೂರು ಭವನಗಳಲ್ಲಿ ಕರ್ನಾಟಕದ ತಿಂಡಿ-ತಿನಿಸುಗಳು ಸಿಗುವ ವ್ಯವಸ್ಥೆ ಮಾಡುವ ಮೂಲಕ ಕರ್ನಾಟಕವನ್ನು ದೇಶದ ವಿವಿಧ ಭಾಗಗಳಿಗೆ ಸಾಂಸ್ಕøತಿಕವಾಗಿ, ಅತೀ ಸುಲಭವಾಗಿ ಪ್ರಚಾರ ಮಾಡಬಹುದಾಗಿದೆ.
ಈ ಭವನಗಳ ಅಕ್ಕಪಕ್ಕದಲ್ಲಿ ದೆಹಲಿಯ ಪ್ರಸಿದ್ಧ ಉದ್ಯಾನವನಗಳಿದ್ದು, ಜನಸಾಮಾನ್ಯರಿಂದ ಹಿಡಿದು ರಾಜಧಾನಿಯ ಮತ್ತು ರಾಜಧಾನಿಗೆ ಬರುವ ಪ್ರಭಾವಶಾಲಿ ವ್ಯಕ್ತಿಗಳು ಬೆಳಗ್ಗೆ ಮತ್ತು ಸಂಜೆ ಇಲ್ಲಿ ಸಹಸ್ರಾರು ಜನರು ವಾಯು ವಿಹಾರಕ್ಕೆ ಬರುತ್ತಾರೆ. ಕರ್ನಾಟಕದ ತಿಂಡಿಗಳು ಈ ಭವನಗಳಲ್ಲಿ ಘಮಘಮಿಸಿದರೆ ಇನ್ನೂ ನಾಲ್ಕಾರು ಭವನಗಳನ್ನು ನಿರ್ಮಿಸಲೇಬೇಕಾದಿತು.
ಈ ಹಿನ್ನೆಲೆಯಲಿ ದೆಹಲಿಯಲ್ಲಿನ ಎಲ್ಲ ಕರ್ನಾಟಕ ಭವನದಲ್ಲಿನ ಉಪಹಾಗೃಹದ ಸೌಲಭ್ಯ ಎಲ್ಲರಿಗೂ ಸಿಗುವಂತೆ ಅನುಕೂಲ ಮಾಡಿಕೊಡಲು ತಮ್ಮ ಘನ ಸರಕಾರ ಸೂಕ್ತ ಕ್ರಮ ಕೈಗೊಂಡು, ಆದಷ್ಟು ಶ್ರೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಈ ಮೂಲಕ ವಿನಂತಿಸಿ
ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ, ಉಪಾದ್ಯಕ್ಷೆ ಆಶಾಲತ, ಕಾರ್ಯದರ್ಶಿ ಸಿ.ಎಂ.ನಾಗರಾಜ, ಜಂಟೀ ಕಾರ್ಯದರ್ಶಿ ಟಿ.ಪಿ ಬೆಳ್ಳಿಯಪ್ಪ, ಸದಸ್ಯರುಗಳಾದ ಡಾ.ಶಶಿಕುಮಾರ್, ಬಾಬುರಾಜ್ ಪೂಜಾರಿ, ರಾಧಾಕೃಷ್ಣ, ತ್ಯಾಗೇಶ್ ಮೂರ್ತಿ ಪಾಲ್ಗೊಂಡಿದ್ದರು.