ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ – 2017” ವಿಷಯದ ಕುರಿತು ದುಂಡು ಮೇಜಿನ ಸಭೆ

Spread the love

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ – 2017” ವಿಷಯದ ಕುರಿತು ದುಂಡು ಮೇಜಿನ ಸಭೆ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಆಶ್ರಯದಲ್ಲಿ ಇಂದು “ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ – 2017” ಎಂಬ ವಿಷಯದ ಮೇಲೆ ದುಂಡು ಮೇಜಿನ ಸಭೆಯನ್ನು ನಗರದ ಕೆನರಾ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಈ ದುಂಡು ಮೇಜಿನ ಸಭೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿಗಳಾದ ಹರ್ಷ ನಾರಾಯಣ ಅವರು ವಿಧೇಯಕದ ಕುರಿತು ಹಾಗೂ ರಾಜ್ಯದ ಉನ್ನತ ಶಿಕ್ಷಣದ ಕುರಿತು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಅಲ್ಲದೇ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿದೇಯಕ 2017 ರನ್ನು ಯಾವ ಒಂದು ಪರಿಕಲ್ಪನೆಯಲ್ಲಿ ಮಾಡಲಾಗಿದೆ ಎಂಬ ಮೂಲ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ನಮ್ಮ ಪ್ರಕಾರ ಈ ವಿಧೇಯಕದ ಮೂಲ ಉದ್ದೇಶ ವಿವಿಯ ಎಲ್ಲ ಅಧಿಕಾರವನ್ನು ಮೊಟಕುಗೊಳಿಸಿ ಸಂಪೂರ್ಣ ಸ್ವಾಯತ್ತತೆಯನ್ನು ರಾಜ್ಯ ಸರ್ಕಾರ ತನ್ನ ಅಧೀನದಲ್ಲಿ ಇಟ್ಟುಕೊಳ್ಳಲು ಬಯಸುತ್ತಿದೆ.

ಹಿರಿಯ ಶಿಕ್ಷಣ ತಜ್ಞರಾದ ಪ್ರೊ|| ಶ್ರೀಪತಿ ತಂತ್ರಿ ಅವರು ಮಾತನಾಡಿ 1956 ಭಾರತದ ಶಿಕ್ಷಣ ಕಾಯ್ದೆ ಪ್ರಕಾರ ಉನ್ನತ ಶಿಕ್ಷಣಕ್ಕೆ ಯಾವುದೇ ಸರ್ಕಾರಗಳು ನೇರವಾಗಿ ಅನುದಾನವನ್ನು ಬಿಡುಗಡೆ ಮಾಡಬಾರದು ಅದರ ಫಲವಾಗಿ ಯುಜಿಸಿಯನ್ನು ಸ್ಥಾಪಿಸಲಾಯಿತು ಅಂದರೆ ಉನ್ನತ ಶಿಕ್ಷಣವು ಯಾವುದೇ ಒಂದು ಸರ್ಕಾರದ ಅಥವಾ ವ್ಯಕ್ತಿಗಳ ಅಧೀನದಲ್ಲಿರದೆ ಸ್ವತಂತ್ರವಾಗಿ ಆಡಳಿತವನ್ನು ನಡೆಸಬೇಕೆಂಬ ಉದ್ದೇಶವು ಈ ಒಂದು ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ನಂತರ 1976 ಕಾಯ್ದೆಯಲ್ಲಿ ವಿವಿಗಳ ಸೆನ್ನೆಟ್, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‍ಗಳ ಮೂಲಕ ಆಡಳಿತವನ್ನು ನಡೆಸಲಾಗುತ್ತಿತ್ತು. ಈ ಒಂದು ಕೌನ್ಸಿಲ್‍ಗಳಲ್ಲಿ ಚುನಾಯಿತ ಸದಸ್ಯರು ಇರುತ್ತಿದ್ದರು. ಆದರೆ 2000 ಕಾಯ್ದೆಯ ಪ್ರಕಾರ ಚುನಾಯಿತ ಸದಸ್ಯರ ನೇಮಕಾತಿಯನ್ನು ವಜಾಗೊಳಿಸಿ ಯಾವುದೇ ಚುನಾವಣೆ ಪ್ರಕ್ರಿಯೆ ನಡೆಸದೆ ಕೇವಲ ಸದಸ್ಯರುಗಳನ್ನು ನೇಮಿಸಲಾಗುತ್ತಿದೆ. ಪ್ರಸ್ತುತ 2017 ರ ಕಾಯಿದೆ ರಾಜ್ಯಪಾಲರ, ಕುಲಪತಿಗಳ, ಕುಲಸಚಿವರ ಹಾಗೂ ವಿವಿಯ ಇತರ ಆಡಳಿತ ವರ್ಗಗಳ ಸಂಪೂರ್ಣ ಸ್ವಾಯತ್ತತೆಯನ್ನು ಸರ್ಕಾರ ಕಸಿದುಕೊಂಡು ತನ್ನ ಕಪಿಮುಷ್ಢಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತದೆ ಎಂಬ ಗಂಭೀರ ಆರೋಪವನ್ನು ವ್ಯಕ್ತಪಡಿಸಿದರು.

ನಗರದ ಖ್ಯಾತ ವಕೀಲರಾದ ಹಾಗೂ ಈ ಹಿಂದೆ ಮಂಗಳೂರು ವಿವಿಯ ನಾಲ್ಕು ಅವಧಿಗಳ ವರೆಗೆ ಚುನಾಯಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ ಎಸ್. ಪಿ ಚೆಂಗಪ್ಪನವರು ಮಾತನಾಡಿ ಈ ಒಂದು ವಿಧೇಯಕವು ಕಸದ ಬುಟ್ಟಿಗೆ ಎಸೆಯಲು ಯೋಗ್ಯವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 1976ರ ಕಾಯ್ದೆಯನ್ನು ಇವತ್ತಿನ ಬದಲಾವಣೆಗಳೊಂದಿಗೆ ಮರು ಸ್ಥಾಪಿಸಲು ಆಗ್ರಹಿಸಿದರು ಅಲ್ಲದೆ ವಿವಿಗಳಲ್ಲಿ ಮೂರು ರೀತಿಯ ಕೌನ್ಸಿಲ್ ಗಳು ಇರಬೇಕೆಂದು ಸಲಹೆ ನೀಡಿದರು. ಮುರಳಿಧರ್ ನಾಯಕ ಅವರು ಮಾತನಾಡಿ 2000ರ ಕಾಯ್ದೆಯಲ್ಲಿ ಮಟಕುಗೊಳಿಸಿದ ಚುನಾಯಿತ ಸದಸ್ಯರ ನೇಮಕ ಪ್ರಕ್ರಿಯೆಯನ್ನು ಪುನಹಃ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾದ ಚ. ನ ಶಂಕರ್ ರಾವ್ ಮಾತನಾಡಿ ವಿಶ್ವವಿದ್ಯಾಲಯಗಳಿಗೆ ಈ ರೀತಿಯ ಸಮಸ್ಯೆಗಳು ಎದುರಾದಾಗ ಶಿಕ್ಷಣದ ಭಾಗವಾಗಿರುವ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು ಜಂಟಿಯಾಗಿ ಹೋರಾಟ ಮಾಡಬೇಕೆಂದು ಸಲಹೆ ನೀಡಿದರು. ಆದ್ದರಿಂದ ವಿದ್ಯಾರ್ಥಿ ಸಂಘಟನೆಗಳು ಮತ್ತು ಅಧ್ಯಾಪಕರ ಸಂಘಟನೆಗಳು ತಮ್ಮ ತಮ್ಮ ಭೇದಗಳನ್ನು ಮರೆತು ಶಿಕ್ಷಣದ ಉಳಿವಿಗಾಗಿ ಹೋರಾಟವನ್ನು ನಡೆಸಬೇಕೆಂದು ಒತ್ತಾಯಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಬಾಲಕೃಷ್ಣ ಅವರು ಮಾತನಾಡಿ ವಿವಿಯಲ್ಲಿರುವ ಸಿಂಡಿಕೇಟ್ ಸದಸ್ಯರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂಬ ಸಲಹೆ ನೀಡಿದರು.

ದುಂಡುಮೇಜಿನ ಸಭೆಯ ಸಮನ್ವಯ ಕಾರರಾಗಿ ಹಿರಿಯರಾದ ಪ್ರೊಫೆಸರ್ ಶ್ರೀಪತಿ ತಂತ್ರಿಯವರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಾಲಕೃಷ್ಣ ಭಟ್ ಹಾಗೂ ಮಂಗಳೂರು ನಗರ ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಪ್ರಭು ಅವರು ಅವರು ಉಪಸ್ಥಿತರಿದ್ದರು. ಅಲ್ಲದೆ ಈ ಸಭೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಬಸವೇಶ್ ಉಪಸ್ಥಿತರಿದ್ದರು ಹಾಗೂ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಕೇಶವ ಬಂಗೇರ ಅವರು ಸಭೆಯಲ್ಲಿ ಸ್ವಾಗತ ಭಾಷಣ ಮಾಡಿದರು.
ಈ ಸಭೆಯಲ್ಲಿ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಸರಕಾರವು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸದೇ, ಸಂಬಂಧಪಟ್ಟ ತಜ್ಞರೊಂದಿಗೆ ಚರ್ಚಿಸದೇ ಆತುರಾತುರವಾಗಿ ರೂಪಿಸಿರುವ ಮತ್ತು ವಿಧಾನ ಮಂಡಳಿಯಲ್ಲಿ ಅನುಮೋದಿಸಿರುವ “ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ-2017” ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ನಿಯಮಾವಳಿಗಳಿಗೆ ಅನುಗುಣವಾಗಿಲ್ಲ, ಮತ್ತು ವಿಶ್ವವಿದ್ಯಾಲಯಗಳ ಸ್ವಾಯತ್ತತೆಂiÀiನ್ನು ಕಸಿಯುವ ಈ ಮಸೂದೆಗೆ ಗೌರವಾನ್ವಿತ ರಾಜ್ಯಪಾಲರು ಒಪ್ಪಿಗೆ ಕೊಡಬಾರದೆಂದು ಕೋರಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.

ಅಲ್ಲದೇ ಸಮಗ್ರ ಶಿಕ್ಷಣ ನಿತಿಯನ್ನು ಕಾಲಮಿತಿಯೊಳಗೆ ರೂಪಿಸಬೇಕು ಮತ್ತು ಆ ಮೊದಲೇ ಶಿಕ್ಷಣಕ್ಕೆ ಸಂಬಂದಿಸಿದ ಕಾನೂನುಗಳನ್ನು ಆತುರಾತುರವಾಗಿ ರೂಪಿಸಬಾರದೆಂದು ಈ ಸಭೆಯು ಒಕ್ಕೊರಳಿನಿಂದ ಸರ್ಕಾರವನ್ನು ಒತ್ತಾಯಿಸುತ್ತದೆ, ವಿಶ್ವವಿದ್ಯಾಲಯಗಳ ಸ್ವಾಯತ್ತೆಯನ್ನು ಉಳಿಸುವ ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ, ತಜ್ಞರೊಂದಿಗೆ ಚರ್ಚಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಸಂಬಂದಪಟ್ಟ ಎಲ್ಲರೂ ಮಾಡಬೇಕೆಂದು ಈ ಸಭೆಯು ಕರೆ ನೀಡುತ್ತದೆ.

ಈ ಮೂರು ನಿರ್ಣಯಗಳನ್ನು ದುಂಡು ಮೇಜಿನ ಸಭೆಯು ಸರ್ವಾನುಮತದಿಂದ ಅನುಮೋದಿಸಿತು.


Spread the love