Home Mangalorean News Kannada News ಕರ್ನಾಟಕ ರೀಜಿನಲ್‍ ಕ್ರಿಕೆಟ್‍ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್‍ಗೆ ಅದ್ದೂರಿಯ ಆರಂಭ – ಅಜರುದ್ದೀನ್‍ ಆಟದ ಮೋಡಿ

ಕರ್ನಾಟಕ ರೀಜಿನಲ್‍ ಕ್ರಿಕೆಟ್‍ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್‍ಗೆ ಅದ್ದೂರಿಯ ಆರಂಭ – ಅಜರುದ್ದೀನ್‍ ಆಟದ ಮೋಡಿ

Spread the love

ಕರ್ನಾಟಕ ರೀಜಿನಲ್‍ ಕ್ರಿಕೆಟ್‍ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್‍ಗೆ ಅದ್ದೂರಿಯ ಆರಂಭ – ಅಜರುದ್ದೀನ್‍ ಆಟದ ಮೋಡಿ

ಮಂಗಳೂರು: ಕರ್ನಾಟಕ ರೀಜಿನಲ್‍ ಕ್ರಿಕೆಟ್‍ ಅಕಾಡಮಿಯ ಆಸರೆಯಲ್ಲಿ ದಿನಾಂಕ 17.12.2016ರಂದು ಆರಂಭವಾಗಲಿರುವ ಅಲ್ಮುಝೈನ್ – ವೈಟ್‍ಸ್ಟೋನ್‍ ಎಂಪಿಎಲ್ 20-20 ಕ್ರಿಕೆಟ್ ಪಂದ್ಯಾಟಕ್ಕೆಇಂದು ಸಂಜೆ ನವ ಮಂಗಳೂರಿನ ಬಿ.ಆರ್. ಅಂಬೇಡ್ಕರ್‍ ಕ್ರೀಡಾಂಗಣದಲ್ಲಿ ಅದ್ದೂರಿಯ ಚಾಲನೆ ಸಿಗಲಿದೆ.ಇಂದು ಸಂಜೆಯ ರಂಗಿನಲ್ಲಿ ಗಂಟೆ 4.30ಕ್ಕೆ ಆರಂಭವಾಗಲಿರುವ ವರ್ಣರಂಜಿತ ಸಮಾರಂಭವು ರವಿಯು ತೆರೆಮರೆಗೆ ಸರಿದೊಡನೆ ಬಣ್ಣದ ಬೆಳಕಿನ ಅಂಗಳದಲ್ಲಿ ಮುಂದುವರಿಯಲಿದೆ.

ಅದ್ದೂರಿಯ ನೃತ್ಯ ರಷಿಯನ್ ಬೆಂಕಿ ನೃತ್ಯ, ಅಗಸದಲ್ಲಿ ಬಣ್ಣದ ಬೆಡಗನ್ನು ಮೂಡಿಸಲಿರುವ ಸುಡುಮದ್ದುಗಳು ಪ್ರೇಕ್ಷಕ ವರ್ಗದ ಮನಸೂರೆಗೈಯ್ಯಲಿವೆ. ಎಂಪಿಎಲ್‍ನಲ್ಲಿ ಆಡಲಿರುವ ಎಲ್ಲ ಹನ್ನೆರಡು ತಂಡಗಳ ಆಟಗಾರರು, ಮಾಲಕರು, ತರಬೇತಿದಾರರು, ಎಂಪಿಎಲ್ ಪ್ರವರ್ತಕರು ಇವರೆಲ್ಲರ ಸಮಕ್ಷಮದಲ್ಲಿ ಭಾರತ ಕ್ರಿಕೆಟ್‍ ತಂಡದ ಮಾಜಿ ಕಪ್ತಾನ ಮಹಮ್ಮದ್‍ ಅಜರುದ್ದೀನ್‍ರವರು ಪಂದ್ಯಾ ಕೂಟವನ್ನು ಉದ್ಘಾಟಿಸಲಿದ್ದಾರೆ.

mpl-16

ಅಜರುದ್ದೀನ್ ಆಟ:

ಉದ್ಘಾಟನೆಯ ನಂತರ ಮಹಮ್ಮದ್‍ ಅಜರುದ್ದೀನ್‍ರವರು ಎಂಪಿಎಲ್‍ ಆಯೋಜಕರ ತಂಡದ ನಾಯಕತ್ವ ವಹಿಸಿಕೊಂಡು ಅರ್ಜುನ್ ಶೆಟ್ಟಿ ನೇತೃತ್ವದ ತುಳು ಚಿತ್ರ ತಾರೆಯರ ತಂಡದ ವಿರುದ್ಧ 20-20 ಪ್ರದರ್ಶನ ಪಂದ್ಯವನ್ನುಆಡಲಿದ್ದಾರೆ. ಬಹು ಸಮಯದ ಅಂತರದ ಬಳಿಕ ಮೈದಾನಕ್ಕಿಳಿಯಲಿರುವ ಅಜರುದ್ಧೀನ್‍ರವರ ಆಟದ ಸೊಬಗನ್ನು ನೋಡುವ ಅವಕಾಶ ಇಲ್ಲಿನ ಪ್ರೇಕ್ಷಕರಿಗೆ ಲಭಿಸಲಿದೆ. ಪ್ರದರ್ಶನ ಪಂದ್ಯವನ್ನಾಡಲಿರುವ ಎಂಪಿಎಲ್‍ ಅಯೋಜಕರ ತಂಡದಲ್ಲಿ ದೇಶ-ವಿದೇಶಗಳ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದರೆ, ಪ್ರದರ್ಶನ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿ ನಿರಂತರ ಅಭ್ಯಾಸದಲ್ಲಿ ತೊಡಗಿರುವ ಅರ್ಜುನ್‍ಕಾಪಿಕಾಡ್ ನೇತೃತ್ವದ ತುಳು ಚಿತ್ರತಾರೆಯರ ತಂಡವು ಸಡ್ಡು ಹೊಡೆದು ನಿಲ್ಲಲು ತಯಾರಾಗಿದೆ ಇದುವರೆಗೆ ವಿವಿಧೆಡೆಯ ಮೈದಾನಗಳಲ್ಲಿ ಎಂಪಿಎಲ್‍ ಕ್ರಿಕೆಟ್‍ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದ ಎಲ್ಲ ತಂಡಗಳು ಎಂಪಿಎಲ್‍ನ ಉದ್ಘಾಟನಾ ಸಮಾರಂಭದಲ್ಲಿ ಅವರವರ ಬಣ್ಣ ಬಣ್ಣದ ಧಿರಿಸುಗಳೊಂದಿಗೆ ಮೇಳೈಸಲಿವೆ. ಭಾನುವಾರದಿಂದ ಆರಂಭವಾಗಲಿರುವ ಹಣಾ ಹಣಿಯಲ್ಲಿ ಎದುರಾಳಿಗಳನ್ನು ಬಗ್ಗು ಬಡಿಯಲುಎಲ್ಲ ತಂಡಗಳು ರಣತಂತ್ರವನ್ನು ಹೆಣೆದುಕೊಂಡಿದೆ. ಐಪಿಎಲ್, ಕೆ.ಪಿ.ಎಲ್‍ ಆಟಗಾರರು ತಮ್ಮ ತಂಡಗಳಲ್ಲಿ ಈಗಾಗಲೇ ಐದಾರು ಅಭ್ಯಾಸ ಪಂದ್ಯಗಳನ್ನು ಆಡಿರುವರು.

ಮೈದಾನದಲ್ಲಿ ವೀಕ್ಷಕ ವಿವರಣೆಗಾರರು, ಟಿ.ವಿ. ನೇರ ಪ್ರಸಾರ, ವಿಐಪಿ ಗಳಿಗಾಗಿ ಹವಾ ನಿಯಂತ್ರಿತ ಕೊಠಡಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಂದ್ಯಗಳು ಯುಸಿಎನ್, ಸಿ4ಯು ಚಾನಲ್‍ಗಳಲ್ಲಿ, ಯೂ ಟ್ಯೂಬ್‍ಗಳ ಮೂಲಕವೂ ನೇರ ಪ್ರಸಾರವನ್ನು ಕಾಣಲಿದೆ. ಅಸ್ಟ್ರೋಟರ್ಫ್‍ ಕ್ರಿಕೆಟ್ ಪಿಚ್ಚ್ ಬ್ಯಾಟಿಂಗ್ ಮತ್ತು ಬೌಲಿಂಗ್‍ಗಳೆರಡಕ್ಕೂ ಅನುಕೂಲಕರವಾಗಿದೆ. 14 ದಿನಗಳ ಕಾಲ ಜರಗಲಿರುವ ಪಂದ್ಯಾಟಗಳಲ್ಲಿ ಗೆಲುವನ್ನು ಕಾಣುವ ತಂಡವು ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನವನ್ನು ಪಡೆಯಲಿದೆ. ಸರಣಿ ಶ್ರೇಷ್ಠ ಆಟಗಾರನು ಮೈದಾನದಲ್ಲಿರಿಸಲಾಗಿರುವ ಕಾರಿನ ಮಾಲಕನಾದರೆ, ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ಬೈಕನ್ನೇರಲಿದ್ದಾರೆ.

ಹನ್ನೆರಡು ತಂಡಗಳು

ಈ ಕ್ರಿಕೆಟ್‍ಕೂಟದಲ್ಲಿ ಭಾಗವಹಿಸಲಿರುವ ಹನ್ನೆರಡು ತಂಡಗಳಾದ ರೆಡ್ ಹಾಕ್ಸ್‍ಕುಡ್ಲ, ಟೀಮ್‍ ಎಲಿಗೆಂಟ್ ಮೂಡಬಿದಿರೆ, ಕಂಕನಾಡಿ ನೈಟ್‍ರೈಡರ್ಸ್, ಕರಾವಳಿ ವಾರಿಯರ್ಸ್ ಪಣಂಬೂರು, ಕಾರ್ಕಳ ಗ್ಲೇಡಿಯೇಟರ್ಸ್, ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ, ಮೇಸ್ಟ್ರೋಟೈಟಾನ್ಸ್, ಸ್ಪಾರ್ಕ್‍ಎವೆಂಜರ್ಸ್ ಬೋಳಾರ, ಕೋಸ್ಟಲ್‍ಡೈಜೆಸ್ಟ್, ಸುರತ್ಕಲ್ ಸ್ಟ್ರೈಕರ್ಸ್, ಯುನೈಟೆಡ್ ಉಲ್ಲಾಳ, ಉಡುಪಿ ಟೈಗರ್ಸ್ ಈಗಾಗಲೇ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗುತ್ತಿದ್ದು ಮಣಿಪಾಲ ಮತ್ತು ಇತರೆಡೆಗಳಲ್ಲಿ ಪರಸ್ಪರ ಅಭ್ಯಾಸ ಪಂದ್ಯಗಳಲ್ಲಿ ತೊಡಗಿವೆ. ಎಲ್ಲ ತಂಡಗಳು ರಾಜ್ಯದ ಅನುಭವೀ ಐಪಿಎಲ್/ಕೆಪಿಲ್ ಆಟಗಾರರೊಂದಿಗೆ ಸ್ಥಳೀಯ ಕ್ರಿಕೆಟ್‍ ಆಟಗಾರರ ಪಡೆಯನ್ನು ಹೊಂದಿದ್ದು, ಉನ್ನತ ಮಟ್ಟದ ಕ್ರಿಕೆಟ್ ಪ್ರದರ್ಶನವು ಹದಿನಾಲ್ಕು ದಿನಗಳ ಕಾಲ ಇಲ್ಲಿನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ನಿರೀಕ್ಷಿಸಲಾಗಿದೆ.


Spread the love

Exit mobile version