ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ
ಮಂಗಳೂರು : ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಮತ್ತು ಮೂಡಿಗೆರೆ, ತುಮಕೂರು ಜಿಲ್ಲೆಯ ಶಿರಾ ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರಗಳು. ಕೋಮುವಾದಿ ವಿರೋಧಿ ಮತಗಳು ಹಂಚಿಹೋಗದಿರಲಿ ಎಂಬ ಕಾಳಜಿಯಿಂದ ಒಂದು ರಾಷ್ಟ್ರೀಯ ಪಕ್ಷವಾಗಿ ಸಿಪಿಐ ಕನಿಷ್ಠ ಸ್ಥಾನಗಳಲ್ಲಿ ಸ್ಪರ್ಧೆಗೆ ಸೀಮಿತಗೊಳಿಸಿದೆ ಎಂದು ಸಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಸಾತಿ ಸುಂದರೇಶ್ ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾವು ಸ್ಪರ್ಧೆ ಮಾಡದೆ ಇರುವ ಇತರ ಕ್ಷೇತ್ರಗಳಲ್ಲಿ ಜಾತ್ಯಾತೀತ-ಪ್ರಜಾಪ್ರಭುತ್ವವಾದಿ-ಎಡ ಪಕ್ಷಗಳ ಮತ್ತು ದಲಿತ, ರೈತ ಕನ್ನಡ ಚಳವಳಿಯ ನಾಯಕರುಗಳು ಸ್ಪರ್ಧೆ ಮಾಡುತ್ತಿದ್ದಲ್ಲಿ ಅಂತಹವರು ಬಿಜೆಪಿಯನ್ನು ಸೋಲಿಸುವ ಸಾಧ್ಯತೆ ಇರುವ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಪಕ್ಷ ಸ್ಪಷ್ಠವಾಗಿ ತೀರ್ಮಾನಿಸಿದೆ. ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಸ್ತುತ ಕರ್ನಾಟಕ ವಿಧಾನ ಸಭೆ ಚುನಾವಣೆಯು ಬಹಳ ಮಹತ್ವಪೂರ್ಣವಾಗಿರುವುದರಿಂದ ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬಾರದಂತೆ ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಪೂರ್ವದಲ್ಲಿ ಮತ್ತು ಚುನಾವಣೋತ್ತರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡುವಂತಹ ಪಕ್ಷಗಳನ್ನು ಬೆಂಬಲಿಸದಿರಲು ನಿರ್ಣಯ ಕೈಗೊಳ್ಳಲಾಯಿತೆಂದು ಅವರು ತಿಳಿಸಿದರು.
ಜಾತ್ಯಾತೀತ ಜನತಾದಳ ಪಕ್ಷದ ಹಿಂದಿನ ನಡವಳಿಕೆಯಿಂದ ಕರ್ನಾಟಕದಲ್ಲಿ ಪ್ರಥಮ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ಘಟನೆ ಮತ್ತು ಈ ಚುನಾವಣೆಯನಂತರ ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ಬಿಜೆಪಿ ಪಕ್ಷದೊಂದಿಗೆ ಮತ್ತೆ ಮೈತ್ರಿಮಾಡಿಕೊಳ್ಳುವ ಸಾಧ್ಯತೆ ಇದ್ದು, ಜನತಾದಳ ಪಕ್ಷವು ಇಂತಹ ಸಾಧ್ಯತೆಯನ್ನು ಇಲ್ಲಿಯವರೆಗೆ ನಿರಾಕರಿಸದೆ ಇರುವುದರಿಂದ ಈ ಚುನಾವಣೆಯಲ್ಲಿ ಜನತಾದಳ (ಜಾತ್ಯಾತೀತ) ಪಕ್ಷವನ್ನು ಬೆಂಬಲಿಸದಿರಲು ಸಭೆ ನಿರ್ಣಯ ಕೈಗೊಂಡಿದೆ ಎಂದು ಕಾಮ್ರೇಡ್ ಸಾತಿ ಸುಂದರೇಶ್ ಸ್ಪಷ್ಠೀಕರಿಸಿದ್ದಾರೆ.
ಕಾಂಗ್ರೆಸ್ ಜವಾಬ್ದಾರಿ ಕುರಿತು
ಫ್ಯಾಸಿಸ್ಟ್ ಬಿ.e.ಪಿ. ಯನ್ನು ಅಧಿಕಾರದಿಂದ ದೂರವಿಡುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಎಸ್. ಪಿ. ಮತ್ತು ಬಿ.ಎಸ್.ಪಿ. ಪಕ್ಷಗಳ ಚುನಾವಣಾ ಹೊಂದಾಣಿಕೆ ಶ್ಲಾಘನೀಯವಾಗಿದೆ. ದೇಶದಲ್ಲಿ ಕೋಮುವಾದಿ, ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಹೊರಗಿಡಲು ಇಂತಹ ಜಾತ್ಯಾತೀತ, ಪ್ರಗತಿಪರ, ಎಡ ಪಕ್ಷಗಳ ಐಕ್ಯತೆ ಅನಿವಾರ್ಯವಾಗಿದೆ.
ಆದರೆ ಕರ್ನಾಟಕದಲ್ಲಿ ಬಿ.ಜೆ.ಪಿ.ಗೆ ಸವಾಲಾಗಬಲ್ಲ ಕಾಂಗ್ರೆಸ್ ತನ್ನ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸಲು ಮುಂದಾಗಿರುವುದು ವಾಸ್ತವ ಸ್ಥಿತಿಗಳನ್ನು ಅರ್ಥೈಸಿಕೊಳ್ಳಲು ವಿಫಲವಾದಂತೆ ತೋರುತ್ತದೆ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ವಂತ ಬಲದಿಂದ ಬಹುಮತ ಪಡೆಯುವುದು ಅಷ್ಟು ಸುಲಭವಲ್ಲ. ಹಿಂದಿನ ವಿಧಾನ ಸಭೆ ಚುನಾವಣೆಯಲ್ಲಿ 1000ದಿಂದ 5000 ಮತಗಳ ಅಂತರದಿಂದ ಗೆದ್ದ ಮತ್ತು ಸೋತ ಕ್ಷೇತ್ರಗಳ ಉದಾಹರಣೆ ನಮ್ಮ ಮುಂದಿದೆ. ಹಿಂದೆ ಬಿ.ಜೆ.ಪಿ. ವಿಘಟನೆಗೊಂಡು P.Ée.Éಪಿ. ಮತ್ತು ಬಿ.ಎಸ್.ಆರ್. ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ ಪರಿಣಾಮವಾಗಿ ಬಿ.ಜೆ.ಪಿ. ಮತಗಳು ಹರಿದು ಹಂಚಿ ಹೋಗಿತ್ತು. ಆದರೆ ಇಂದು ಇವರ ಒಗ್ಗಟ್ಟು, ಕೇಂದ್ರ ಸರಕಾರದ ಬೆಂಬಲ ಮತ್ತು ಸಂಘ ಪರಿವಾರದ ಸಂಘಟನಾ ಶಕ್ತಿಗಳು ಬಿ.ಜೆ.ಪಿ ಗೆಲುವಿಗೆ ಸಹಕಾರಿಯಾಗಬಹುದು.
ಈ ಹಿನ್ನೆಲೆಯಲ್ಲಿ ಬಿ.e.ಪಿ ವಿರೋಧಿ ಮತಗಳನ್ನು ಕ್ರೋಢೀಕರಣ ಮಾಡುವ ನಿಟ್ಟಿನಲ್ಲಿ ಕರ್ನಾಟಕದ ದಲಿತ ಚಳುವಳಿ, ರೈತ ಚಳುವಳಿ, ಎಡ ಚಳುವಳಿ, ಕನ್ನಡ ಚಳುವಳಿಗಳ ವಿಶಾಲ ವೇದಿಕೆ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಬೇಕಿದೆ.
ಈ ಸಂಬಂಧ ಈಗಾಗಲೆ ರೈತ ಸಂಘದ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸದಿರುವ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ. ಈ ತೀರ್ಮಾನವನ್ನು ಸಿ.ಪಿ.ಐ. ಸ್ವಾಗತಿಸುತ್ತದೆ. ಇದೇ ಮಾದರಿಯಲ್ಲಿ ದಲಿತ, ಕನ್ನಡಪರ ಮತ್ತು ಎಡ ಪಕ್ಷಗಳನ್ನು ಜೊತೆಗೆ ಕೊಂಡೊಯ್ಯುವ ಬಗ್ಗೆ ಕಾಂಗ್ರೆಸ್ ಪಕ್ಷ ಕೂಡಲೇ ತೀರ್ಮಾನಿಸಬೇಕೆಂದು ನಾವು ಒತ್ತಾಯಿಸುತೇವೆ.
ಪತ್ರಿಕಾ ಗೋಷ್ಠಿಯಲ್ಲಿ ವಿ ಕುಕ್ಯಾನ್, (ಕಾರ್ಯದರ್ಶಿ ದ ಕ ಮತ್ತು ಉಡುಪಿ ಜಿಲ್ಲಾ ಸಮಿತಿ), ವಿ. ಎಸ್ ಬೇರಿಂಜ, (ಕಾರ್ಯದರ್ಶಿ ಮಂಗಳೂರು ತಾಲೂಕು ಸಮಿತಿ), ಬಿ ಶೇಖರ, (ಕಾರ್ಯದರ್ಶಿ ಬಂಟ್ವಾಳ ತಾಲೂಕು ಸಮಿತಿ),ಸುರೇಶ್ ಕುಮಾರ್ ಬಂಟ್ವಾಳ, ಜಿಲ್ಲಾ ಸಮಿತಿ ಸದಸ್ಯರು –ಉಪಸ್ಥಿತರಿದ್ದರು.