Home Mangalorean News Kannada News ಕರ್ನಾಟಕ ಸಂಘ ಶಾರ್ಜಾದ ಸಂಭ್ರಮದ ಮಯೂರ ಕಪ್ ತ್ರೋಬಾಲ್, ವಾಲಿಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ

ಕರ್ನಾಟಕ ಸಂಘ ಶಾರ್ಜಾದ ಸಂಭ್ರಮದ ಮಯೂರ ಕಪ್ ತ್ರೋಬಾಲ್, ವಾಲಿಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ

Spread the love

ಕರ್ನಾಟಕ ಸಂಘ ಶಾರ್ಜಾದ ಸಂಭ್ರಮದ ಮಯೂರ ಕಪ್ ತ್ರೋಬಾಲ್, ವಾಲಿಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ

ಅರಬ್ ಸಂಯುಕ್ತ ಸಂಸ್ಥದಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯೋನ್ಮುಖವಾಗಿರುವ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಪ್ರತಿಷ್ಠಿತ ಮಯೂರ ಕಪ್ ಮಹಿಳಾ ಮತ್ತು ಪುರುಷರ ತ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ಪಂದ್ಯಾಟ ಹಾಗೂ ಪುರುಷರು ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಯು.ಎ.ಇ. ಮಟ್ಟದಲ್ಲಿ ಆಯೋಜಿಸಲಾಗಿತ್ತು.

2024ನೇ ಫೆಬ್ರುವರಿ 4ನೇ ತಾರೀಕು ಭಾನುವಾರ ಬೆಳಗ್ಗೆ 8.00 ಗಂಟೆಗೆ ಅಜ್ಮಾನ್ ತುಂಬೆ ಮೆಡಿಸಿಟಿ ಗ್ರೌಂಡ್ಸ್ ನಲ್ಲಿ ಉದ್ಘಾಟನೆಯೊಂದಿಗೆ ಸಂಜೆಯವರೆಗೆ ಅತ್ಯಂತ ಸAಭ್ರಮ ಹರ್ಷೊದ್ಘಾರದೊಂದಿಗೆ ನಡೆಯಿತು. ತುಂಬೆ ಗ್ರೂಪಿನ ಬೋರ್ಡ್ ಮೆಂಬರ್ ಹಾಗೂ ನಿರ್ದೇಶಕರಾದ ಶ್ರೀ ಫರಾದ್ ಸಿ. ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ, ಪೋಷಕರಾದ ಶ್ರೀ ಮಾರ್ಕ್ ಡೆನಿಸ್ ಡಿ ಸೋಜಾ ಹಾಗೂ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರ ಸಮ್ಮುಖದಲ್ಲಿ ಬೆಳಿಗ್ಗೆ 8.00 ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ಕ್ರೀಡಾ ಪ್ರಮಾಣ ವಚನ ಸ್ವೀಕಾರದೊಂದಿಗೆ ಥ್ರೋಬಾಲ್, ವಾಲಿಬಾಲ್, ಹಗ್ಗ ಜಗ್ಗಾಟ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಅರಬ್ ಸಂಯುಕ್ತ ಸಂಸ್ಥಾನದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಬಂಟ್ಸ್ ದುಬಾಯಿ, ಕೊಂಕಣ್ಸ್ ದುಬಾಯಿ, ಕೆ.ಸಿ.ಒ. ಆಬುಧಾಬಿ, ಕೋಸ್ಟಲ್ ಫ್ರೆಂಡ್ಸ್ ದುಬಾಯಿ, ಆಕ್ಮೆ ದುಬಾಯಿ, ಯುನೈಟೆಡ್ ವಾಲಿಬಾಲ್, ಕರಾವಳಿ ವಾಲಿಬಾಲ್, ಪಾರ್ಕರ್ ಎಕ್ಸ್ ಪ್ರೆಸ್ಸ್ ಶಿಪ್ಪಿಂಗ್, ಎಲೆಕ್ಟಿçಕ್ ವೇ ದುಬಾಯಿ, ಸ್ಪಾರ್ಕರ್ ಕರ್ನಾಟಕ್ ಸ್ಟೆöÊಕರ್ಸ್, ಟೀಮ್ ಟಿ ಪಾರ್ಟಿ ಒಫಿಸಿಅಲ್ ಎ, ಟೀಮ್ ಟಿ ಪಾರ್ಟಿ ಒಫಿಸಿಅಲ್ ಬ್, ಕೊಡಗು ಸ್ಪೆöÊಕರ್ ಟೆಅಮ್, ಎಬಿ, ಆಲ್ ಸ್ಟಾರ್ಸ್, ಬಿಲ್ಲವ ಫ್ಯಾಮಿಲಿ, ಥ್ರೋಬಾಲ್ ಫ್ರೆಂಡ್ಸ್ ಉತ್ಸಾಹಿ ಕ್ರೀಡಾಪಟುಗಳು ತಮ್ಮ ತಮ್ಮ ಅಮೋಘ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಸೆಳೆದರು.

ಮಯೂರ ಕಪ್ ಮಹಿಳಾ ಥ್ರೋಬಾಲ್
ವಿನ್ನರ್ಸ್: ಕೆ.ಸಿ.ಒ ಅಬುಧಾಬಿ ಮಹಿಳಾ ತಂಡ
ಪ್ರಥಮ ರನ್ನರ್ಸ್ ಅಪ್: ಕೋಸ್ಟಲ್ ಫ್ರೆಂಡ್ಸ್ ದುಬಾಯಿ ಮಹಿಳಾ ತಂಡ
ದ್ವಿತೀಯ ರನ್ನರ್ಸ್: ಕೊಂಕಣ್ಸ್ ದುಬಾಯಿ
ತೃತಿಯ ರನ್ನರ್ಸ್: ಆಕ್ಮೇ ದುಬಾಯಿ
ಬೆಸ್ಟ್ ಅಟೇಕರ್: ಸುಮಂಗಲಾ (ಕೆ.ಸಿ.ಒ)
ಬೆಸ್ಟ್ ಡಿಫೆಂಡರ್: ಸಾಲಿಕಾ (ಕೋಸ್ತಲ್ ಫ್ರೆಂಡ್ಸ್)
ಬೆಸ್ಟ್ ಆಲ್ ರೌಂಡರ್: ಶುಭ (ಕೆ.ಸಿ.ಒ)
ಮಯೂರ ಕಪ್ ಪುರುಷ ಥ್ರೋಬಾಲ್ ವಿನ್ನರ್ಸ್: ಕೊಂಕಣ್ಸ್ ದುಬಾಯಿ
ಪ್ರಥಮ ರನ್ನರ್ಸ್ ಅಪ್: ಕೆ.ಸಿ.ಒ ಅಬುಧಾಬಿ
ದ್ವಿತೀಯ ರನ್ನರ್ಸ್: ಆಕ್ಮೇ ದುಬಾಯಿ
ತೃತಿಯ ರನ್ನರ್ಸ್: ಕೋಸ್ಟಲ್ ಫ್ರೆಂಡ್ಸ್ ದುಬಾಯಿ
ಬೆಸ್ಟ್ ಅಟೇಕರ್: ಹಸನ್ (ಕೊಂಕಣ್ಸ್ ದುಬಾಯಿ)
ಬೆಸ್ಟ್ ಡಿಫೆಂಡರ್: ರಾವುಲ್ (ಕೆ.ಸಿ.ಒ.)
ಬೆಸ್ಟ್ ಆಲ್ ರೌಂಡರ್: ಇಶಾನ್ (ಕೊಂಕಣ್ಸ್ ದುಬಾಯಿ)

ಮಯೂರ ಕಪ್ ಪುರುಷ ವಾಲಿಬಾಲ್

ವಿನ್ನರ್ಸ್: ಎಲೆಕ್ಟಿçಕ್ ವೇ
ಪ್ರಥಮ ರನ್ನರ್ಸ್ ಅಪ್: ಪಾರ್ಕರ್ ಎಕ್ಸ್ ಪ್ರೆಸ್ಸ್ ಶಿಪ್ಪಿಂಗ್
ದ್ವಿತೀಯ ರನ್ನರ್ಸ್: ಕರಾವಳಿ ಮಿಲನ್ ದುಬಾಯಿ
ತೃತಿಯ ರನ್ನರ್ಸ್: ಸ್ಪಾರ್ಟನ್ ಕರ್ನಾಟಕ
ಬೆಸ್ಟ್ ಅಟೇಕರ್: ಪ್ರಜ್ವಲ್ (ಪಾರ್ಕರ್ ಎಕ್ಸ್ ಪ್ರೆಸ್ಸ್ ಶಿಪ್ಪಿಂಗ್)
ಬೆಸ್ಟ್ ಸೆಟ್ಟರ್: ಜಲೀಲ್ (ಎಲೆಕ್ಟಿçಕ್ ವೇ)
ಬೆಸ್ಟ್ ಆಲ್ ರೌಂಡರ್: ನವೀದ್ (ಎಲೆಕ್ಟಿçಕ್ ವೇ)

ಮಹಿಳಾ ಹಗ್ಗ ಜಗ್ಗಾಟ (ಟಗ್ ಆಫ್ ವಾರ್)

ಚಾಂಪಿಯನ್ : ಎ. ಬಿ. ತಂಡ
ದ್ವಿತೀಯ : ಆಲ್ ಸೆಟ್ಟರ್,

ಪುರುಷರ ಹಗ್ಗ ಜಗ್ಗಾಟ (ಟಗ್ ಆಫ್ ವಾರ್)

ಚಾಂಪಿಯನ್ : ಆಲ್ ಸ್ಟಾರ್ ಚಾಂಪಿಯನ್ಸ್
ದ್ವಿತೀಯ : ಎ. ಬಿ. ತಂಡ

ದಿನ ಪೂರ್ತಿ ನಡೆದ ಪಂದ್ಯಾಟಗಳ ವಾಲಿಬಾಲ್ ತೀರ್ಪುಗಾರರಾಗಿ ಶ್ರೀಯುತರುಗಳಾದ ಸಾಜಿ, ಸುಧೀರ್, ಆನಂದ್ ಹಾಗೂ ಥ್ರೋಬಾಲ್ ತೀರ್ಪುಗಾರರಾಗಿ ಶಿವ ಶೆಟ್ಟಿ, ದೀಪ್ತಿ ಶೆಟ್ಟಿ, ಕಿಶೋರ್, ಡ್ಯಾನಿ, ಟಗ್ ಅಫ್ ವಾರ್, ರೋಶನ್ ಪಿಂಟೊ, ಅನಿಲ್ ಇವರುಗಳು ನಿಷ್ಪಕ್ಷಪಾತವಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು. ಕ್ರೀಡೆಗಳ ವೀಕ್ಷಕ ವಿವರಣೆಯನ್ನು ದೀಕ್ಷಾ ರೈ, ರಿತೇಶ್ ಅಂಚನ್, ಅಶ್ರಫ್ ನಡೆಸಿಕೊಟ್ಟರು.

ಪಂದ್ಯಾಟಗಳ ಅಂತಿಮ ಬಹುಮಾನ ವಿತರಣೆ ತುಂಬೆ ಮೆಡಿಸಿಟಿ ಗ್ರೌಂಡ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿಯವರ ನೇತ್ರತ್ವದಲ್ಲಿ ಪೋಷಕರಾದ ಶ್ರೀ ಮಾರ್ಕ್ ಡೆನಿಸ್, ಸಲಹೆಗಾರರಾದ ಶ್ರೀಯುತರುಗಳಾದ ರಾಮಚಂದ್ರ ಹೆಗ್ಡೆ, ಬಿ. ಕೆ. ಗಣೇಶ್ ರೈ, ನೊಯಲ್ ಅಲ್ಮೆಡಾ, ಆನಂದ್ ಬೈಲೂರ್, ಕ್ರೀಡಾ ಕಾರ್ಯದರ್ಶಿ ಜೀವನ್ ಕುಕ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ, ವಿಶ್ವನಾಥ್ ಶೆಟ್ಟಿ, ಮಹ್ಮದ್ ಅಬ್ರಾರ್, ಅಜ್ಮಲ್ ಸಯ್ಯದ್, ಅಮರ್ ನಂತೂರ್, ಪ್ರೇಮಾನಂದ್ ಮಾರ್ನಾಡ್, ರಿತೇಶ್ ಅಂಚನ್ ಇವರ ಸಮ್ಮುಖದಲ್ಲಿ ಬಹುಮಾನ ವಿತರಣೆ ನಡೆಯಿತು.

ಪಂದ್ಯಾಟದ ಆಹ್ವಾನಿತ ಎಲ್ಲಾ ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು ಕರ್ನಾಟಕ ಸಂಘ ಶಾರ್ಜಾದ ಹಿತೈಷಿ ಪ್ರಾಯೊಜಕರ ಸಂಪೂರ್ಣ ಸಹಕಾರ್ದೊಂದಿಗೆ ಶ್ರೀಯುತ ನೊಯಲ್ ಡಿ ಅಲ್ಮೇಡಾ ರವರ ಸಂಪೂರ್ಣ ನಿರ್ದೇಶನದಲ್ಲಿ ಸರ್ವ ಸದಸ್ಯರು ಹಲವು ದಿನಗಳ ಪೂರ್ವ ತಯಾರಿಯಲ್ಲಿ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.


Spread the love

Exit mobile version