ಕಲಾಂಗಣದಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್ ಇದರ ತಿಂಗಳ ವೇದಿಕೆ ಸರಣಿಯ 217 ನೇ ಕಾರ್ಯಕ್ರಮ 05.01.2020 ರಂದು ಕಲಾಂಗಣದಲ್ಲಿ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಚೇತನ್ ಲೋಬೊ ಘಂಟೆ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು.
ನಂತರ ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಸಂಘದ ಕಲಾವಿದರುಗಳಾದ ಮನೀಶ್ ಕಲಾಕುಲ್, ಮರ್ವಿನ್ ಫೆರ್ನಾಂಡಿಸ್, ರೊವಿಟಾ ಮಿನೇಜಸ್, ಸ್ವೀಡಲ್ ಮೊನಿಸ್, ಆ್ಯಶೆಲ್ ಡಿಸಿಲ್ವಾ, ಪ್ರೆಸ್ಟನ್ ಲೋಬೊ, ಮರಿಯಾ ಮೊಂತೇರೊ, ನಿಶೆಲ್ ಕುಟಿನ್ಹಾ, ಚೆಲ್ಸಿಯಾ ಡಿಸೋಜ, ಸಲೋಮಿ ಆಲ್ವಾರಿಸ್, ವೆಲೆಂಟಿನೊ ಲೋಬೊ, ರೋಹನ್ ಸಲ್ಡಾನ್ಹಾ ಮತ್ತು ಫ್ಲೆಕ್ಸನ್ ಲೋಬೊ ಕೊಂಕಣಿಯ ಪ್ರಸಿದ್ಧ ಸಾಹಿತಿ ಸ್ಟೇನ್ ಆಗೇರಾ ಮುಲ್ಕಿ ಇವರ ಮೂರು ಕಥೆಗಳಾಧಾರಿತ ನಾಟಕ `ಕೊಪಾಂತ್ ಖಿರಯಿಲ್ಲಿಂ ಕಾಪಾಂ’ ಅಭಿನಯಿಸಿದರು.
ರೋಹನ್ – ಜ್ಯಾಕ್ಸನ್ – ಮನೀಶ್ ಕಲಾಕುಲ್ ಇವರು ನಿರ್ದೇಶನ, ಸಂಗೀತ, ವೇದಿಕೆ ಹಾಗೂ ಬೆಳಕಿನ ವಿನ್ಯಾಸ ನಿರ್ವಹಿಸಿದರು.