ಕಲಾಂಗಣದಲ್ಲಿ 209 ನೇ ತಿಂಗಳ ವೇದಿಕೆಯಲ್ಲಿ ಮಕ್ಕಳ ಪ್ರತಿಭಾ ಕಲರವ

Spread the love

ಕಲಾಂಗಣದಲಿ 209 ನೇ ತಿಂಗಳ ವೇದಿಕೆಯಲ್ಲಿ ಮಕ್ಕಳ ಪ್ರತಿಭಾ ಕಲರವ

ಇಂದಿನ ಪ್ರಪಂಚವು ವಿಪರೀತ ಸ್ಪರ್ಧಾತ್ಮಕವಾಘಿದೆ ಈ ಸ್ಪರ್ಧೆಯನ್ನು ಎದುರಿಸುವ ಭರದಲ್ಲಿ ಪ್ರತಿಭೆಗಳು ಒಳಗೊಳಗೆ ಕಮರಿ ಹೋಗುತ್ತವೆ. ಆಗ ನಮಗೆ ಭರವಸೆಯಾಗಿ ಕಾಣುವುದು ಮಾಂಡ್ ಸೊಭಾಣ್ ಅಂತಹ ಸಂಸ್ಥೆಗಳು ಆಯೋಜಿಸುವ ವಿಭಿನ್ನ ಮಾದರಿಯ ಶಿಬಿರಗಳು. ಇಲ್ಲಿ ಮಕ್ಕಳ ಪ್ರತಿಭೆಗಳು ಸಾಣೆ ಹಿಡಿದು ವೇದಿಕೆಯಲ್ಲಿ ಪ್ರಜ್ವಲಿಸುತ್ತವೆ. ಖಮಿರ್ ಶಿಬಿರ ಇದಕ್ಕೊಂದು ಉದಾಹರಣೆ ಎಂದು ಅನಿವಾಸಿ ಉದ್ಯಮಿ ಹಾಗೂ ಕೊಂಕಣಿ-ತುಳು ಚಲನಚಿತ್ರ ನಟ ರೊನ್ ರೊಡ್ರಿಗಸ್ ಲಂಡನ್ ಹೇಳಿದರು. ಅವರು  ಕಲಾಂಗಣದಲ್ಲಿ ನಡೆದ 209 ನೇ ತಿಂಗಳ ವೇದಿಕೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಸ್ಯಾಮ್ವೆಲ್ ಸಿಕ್ವೇರಾ ಮತ್ತು ಆನ್ವಿಟಾ ಡಿಕುನ್ಹಾ, ದಿಶಾ ಪರ್ಲ್ ಮಸ್ಕರೇನ್ಹಸ್ ಹಾಗೂ ಮೆಲ್‍ರೊಯ್ ಲೋಬೊ ತಮ್ಮ ಅನುಭವವನ್ನು ಹಂಚಿಕೊಂಡರು. ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ಸಿಡಿ-ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ವಿಭಾಗ ಶ್ರೇಷ್ಟ ಶಿಬಿರಾರ್ಥಿಯಾಗಿ ಆಯ್ಕೆಯಾದ ಒಲಿಟಾ ಪಿಂಟೊ (ಗಾಯಾನ) ಮೆಲ್‍ರೊಯ್ ಲೋಬೊ (ನೃತ್ಯ) ಹಾಗೂ ರಿಯಾ ಸೋನಲ್ ಲೋಬೊ (ನಾಟಕ) ಇವರಿಗೆ ತಲಾ ರು. ಎರಡು ಸಾವಿರ ನಗದು ಹಾಗೂ ಶ್ರೇಷ್ಟ ಶಿಬಿರಾರ್ಥಿಯಾಗಿ ಆಯ್ಕೆಯಾದ ಒಲಿಟಾ ಪಿಂಟೊ ಇವರಿಗೆ ರು. ಮೂರು ಸಾವಿರ ನಗದು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಿದ ನಿಹಾಲ್ ತಾವ್ರೊ ಅವರನ್ನು ಕೊಂಕ್ಣಿ ಗಾಯಾನ್ ನೆಕೆತ್ರ್ ಬಿರುದು ನೀಡಿ ಸನ್ಮಾನ ಮಾಡಲಾಯಿತು.

ಶಿಬಿರದ ಯಶಸ್ಸಿಗೆ ಕಾರಣಿಕರ್ತರಾದ ಶಿಬಿರ ನಿರ್ದೇಶಕರಾದ ಎರಿಕ್ ಒಝೇರಿಯೊ ನಾಟಕ ವಿಭಾಗದ ವಿಕಾಸ್ ಲಸ್ರಾದೊ, ಮನೀಶ್ ಪಿಂಟೊ, ಆಮ್ರಿನ್ ಡಿಸೋಜ, ಶ್ರವಣ್ ಬಾಳಿಗಾ, ಸವಿತಾ ಸಲ್ಡಾನ್ಹಾ, ಫ್ಲಾವಿಯಾ ರೊಡ್ರಿಗಸ್, ನೃತ್ಯ ವಿಭಾಗದ ರಾಹುಲ್ ಪಿಂಟೊ, ವೆಲನಿ ಗೋವಿಯಸ್, ಜೀವನ್ ಸಿದ್ದಿ, ಗಾಯನ ವಿಭಾಗದ ಜೇಸನ್ ಲೋಬೊ, ಡಿಯಾಲ್ ಡಿಸೋಜ, ಶರ್ವಿನ್ ಡಿಸೋಜ, ಜೈಸನ್ ಸಿಕ್ವೇರಾ ಹಾಗೂ ಕೊಂಕಣಿ ಭಾಷೆ ಕಲಿಸಿದ ವಿತೊರಿ ಕಾರ್ಕಳ ಮತ್ತು ಫ್ಲಾವಿಯಾ ರೊಡ್ರಿಗಸ್ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ ಹಾಗೂ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ನಂತರ ಮಕ್ಕಳಿಂದ ಸಮೂಹ ಗಾಯನ, ನೃತ್ಯ ಪ್ರದರ್ಶನ, ಕವಿತಾ ವಾಚನ ಹಾಗೂ ಕಿರು ನಾಟಕ `ಪ್ರಕೃತಿ ನಾಸ್-ಮನ್ಶಾಂಚೆಂ ಸತ್ಯಾನಾಸ್’ ಪ್ರಸ್ತುತವಾಯಿತು.

ಸಭಾ ಕಾರ್ಯಕ್ರಮವನ್ನು ವಿತೊರಿ ಕಾರ್ಕಳ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ದಿಯಾ ಮಸ್ಕರೇನ್ಹಸ್ ಮತ್ತು ಆ್ಯಶಿಲ್ ಮಸ್ಕರೇನ್ಹಸ್ ನಿರ್ವಹಿಸಿದರು.


Spread the love