ಕಲ್ಮಾಡಿ ಚರ್ಚಿನ ಪ್ರತಿಷ್ಟಾಪನಾ ಮಹೋತ್ಸವದ ನವ ದಿನಗಳ ನೊವೆನಾ ಕಾರ್ಯಕ್ರಮಕ್ಕೆ ಚಾಲನೆ

Spread the love

ಕಲ್ಮಾಡಿ ಚರ್ಚಿನ ಪ್ರತಿಷ್ಟಾಪನಾ ಮಹೋತ್ಸವದ ನವ ದಿನಗಳ ನೊವೆನಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.

 

 

ಪಡುಕೋಣೆ ಸಂತ ಅಂತೋನಿಯವರ ಚರ್ಚಿನ ಧರ್ಮಗುರು ಹಾಗೂ ಉಡುಪಿ ವಲಯದ ಮಾಜಿ ಪ್ರಧಾನ ಧರ್ಮಗುರುಗಳಾದ ವಂ ಫ್ರೆಡ್ ಮಸ್ಕರೆನ್ಹಸ್ ಅವರು ಒಂಬತ್ತು ದಿನಗಳ ನೊವೆನಾ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.

ಅಗೋಸ್ತ್ 15 ಚರ್ಚಿನ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದ್ದು, ಒಂಬತ್ತು ದಿನಗಳ ನೊವೆನಾ ಕಾರ್ಯಕ್ರಮದಲ್ಲಿ ವಿವಿಧ ಉದ್ದೇಶಗಳಾದ, ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕ್ರೈಸ್ತ ಕುಟುಂಬಗಳು, ವಿದೇಶದಲ್ಲಿ ನೆಲೆಸಿರುವ ಕ್ರೈಸ್ತ ವಿಶ್ವಾಸಿಗಳು, ದಾನಿಗಳು, ಮದುವೆಯಾದ ದಂಪತಿಗಳು, ಮಕ್ಕಳು, ಹಾಗೂ ಭಕ್ತಿಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಅಗೋಸ್ತ್ 13 ರಂದು ಮಧ್ಯಾಹ್ನ 2.30 ಕ್ಕೆ ವೆಲಂಕಣಿ ಮಾತೆಯ ಮೂರ್ತಿಯನ್ನು ಆದಿ ಉಡುಪಿ ಜಂಕ್ಷನ್‍ನಿಂದ, ಕಲ್ಮಾಡಿ ಚರ್ಚಿನ ವರೆಗೆ ಮೆರವಣಿಗೆಯಲ್ಲಿ ತರಲಾಗುವುದು. ಬಳಿಕ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ರೆಕ್ಟರ್ ವಂ ಜೋರ್ಜ್ ಡಿಸೋಜ ಪವಿತ್ರ ಬಲಿಪೂಜೆಯನ್ನು ಅರ್ಪಿಸುವರು.

ಅಗೋಸ್ತ್ 15 ರಂದು ಪ್ರತಿಷ್ಠಾಪನಾ ಮಹೋತ್ಸವದ ಪ್ರಧಾನ ಬಲಿಪೂಜೆಯನ್ನು ಬೆಳಿಗ್ಗೆ 10.30 ಕ್ಕೆಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ. ಜೆರಾಲ್ಡ್ ಐಸಾಕ್ ಲೋಬೊ ಅರ್ಪಿಸುವರು. ಅದೇ ದಿನ ಬೆಳಿಗ್ಗೆ 7 ಗಂಟೆಗೆ ಕೊಂಕಣಿ, ಸಂಜೆ 4 ಗಂಟೆಗೆ ಕನ್ನಡ ಹಾಗೂ 6 ಗಂಟೆಗೆ ಇಂಗ್ಲೀಷ್ ಭಾಷೆಯಲ್ಲಿ ಪವಿತ್ರ ಬಲಿಪೂಜೆಯ ನಡೆಯಲಿದೆ.

ನೊವೆನಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ ಆಲ್ಬನ್ ಡಿಸೋಜಾ, ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Sanith Daniel
7 years ago

ನಾವು ನಿಮ್ಮ ಮಾಧ್ಯಮದ ಸುದ್ದಿಯನ್ನು ಒದುವವರಾಗಿದ್ದು, ದೂರದ ವಿದೇಶ /ಗಲ್ಫ್ ರಾಷ್ಟ್ರದಲ್ಲಿರುವ ನಮಗೆ ಊರಿನ ಪ್ರಮುಖ ಸುದ್ದಿಗಳನ್ನು ನೀಡುತ್ತಿರುವ ನಿಮಗೆ ನಮ್ಮ ಅಭಿನಂದನೆಗಳು ಕಲ್ಮಾಡಿ ಚರ್ಚಿನ ಕುರಿತು ಉತ್ತಮ ಸುದ್ದಿಯನ್ನು ಪ್ರಕಟಿಸಿದ್ದೀರಿ. ಅದೇ ಕಲ್ಮಾಡಿ ಚರ್ಚು ಹಡಗಿನ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೂರನೇ ಅತೀ ದೊಡ್ಡ ಚರ್ಚಾಗಿದೆ. ಇದರ ನಿರ್ಮಾಣದ ವಿನ್ಯಾಸದ ಕುರಿತು ಗಲ್ಫ್ ದೇಶದ ಕ್ರೈಸ್ತ ಬಾಂಧವರಿಗೆ ಮಾಹಿತಿಯನ್ನು ನೀಡಿ. ನಿಮ್ಮ ಸೇವೆಗೆ ಧನ್ಯವಾದಗಳು.

ಕ್ರೈಸ್ತರ ಒಕ್ಕೂಟ ಇಸ್ರೇಲ್