ಕಲ್ಲಡ್ಕ ಘಟನೆಯ ಕುರಿತು ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ಮಾಹಿತಿ ನೀಡಿ: ದಕ ಜಿಲ್ಲಾ ಪೋಲಿಸ್

Spread the love

ಕಲ್ಲಡ್ಕ ಘಟನೆಯ ಕುರಿತು ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ಮಾಹಿತಿ ನೀಡಿ: ದಕ ಜಿಲ್ಲಾ ಪೋಲಿಸ್

ಮಂಗಳೂರು: ಕಲ್ಕಡ್ಕ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಮುಕಾಂತರ ಸುಳ್ಳು ವದಂತಿಗಳನ್ನು ಹರಿಯಬಿಡುತ್ತಿರುವವರ ಮಾಹಿತಿಯನ್ನು ಪೋಲಿಸರಿಗೆ ನೀಡುವಂತೆ ವಿನಂತಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ದಕ ಜಿಲ್ಲಾ ಪೋಲಿಸ್ ಕಲ್ಲಡ್ಕದಲ್ಲಿ ನಡೆದ ಘಟನೆಯ ಕುರಿತು ಇಲ್ಲಿಯ ವರೆಗೆ 10 ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ತನಿಖೆಗೆ ಎರಡು ಕೋಮಿನ ಜನರು ಸಹಕರಿಸುತ್ತಿದ್ದು, ಕೆಲವು ಸಮಾಜಘಾತುಕ ವ್ಯಕ್ತಿಗಳು ಸಾಮಾಜಿಕ ಜಾಲತಾನದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ಇಂತಹ ಸಂದೇಶಗಳನ್ನು ಯಾರೂ ಕೂಡ ಫಾರ್ವರ್ಡ್ ಮಾಡದಂತೆ ಸೂಚಿಸಿರುವ ಪೋಲಿಸರು, ಫಾರ್ವರ್ಡ್ ಮಾಡಿದ್ದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇಂತಹ ರೀತಿಯ ಸಂದೇಶಗಳನ್ನು ಸ್ಕ್ರೀನ್ ಶಾಟ್ ಫೋಟೊ ತೆಗೆದು ಅದನ್ನು 9480800941 ಅಥವಾ 9480805300 ಜಿಲ್ಲಾ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಗೆ ವಾಟ್ಸ್ಯಾಪ್ ಮಾಡುವಂತೆ ಸೂಚಿಸಿದ್ದಾರೆ.  ಮಾಹಿತಿ ನೀಡಿದವರ ವಿವರನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love