Home Mangalorean News Kannada News ಕಲ್ಲಡ್ಕ ಘಟನೆ: ಸೂಕ್ತ ಕ್ರಮಕ್ಕೆ ಎಸ್ಸೆಸ್ಸೆಫ್ ಆಗ್ರಹ

ಕಲ್ಲಡ್ಕ ಘಟನೆ: ಸೂಕ್ತ ಕ್ರಮಕ್ಕೆ ಎಸ್ಸೆಸ್ಸೆಫ್ ಆಗ್ರಹ

Spread the love
RedditLinkedinYoutubeEmailFacebook MessengerTelegramWhatsapp

ಕಲ್ಲಡ್ಕ ಘಟನೆ: ಸೂಕ್ತ ಕ್ರಮಕ್ಕೆ ಎಸ್ಸೆಸ್ಸೆಫ್ ಆಗ್ರಹ

ಕೊಡಗು: ಕಲ್ಲಡ್ಕದಲ್ಲಿ ಕೋಮುಗಲಭೆಯ ಕಿಡಿ ಹಚ್ಚುವ ಪ್ರಯತ್ನ ಮತ್ತೊಮ್ಮೆ ನಡೆದಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಆಗ್ರಹಿಸಿದ್ದಾರೆ.

ಇತ್ತೀಚೆಗೆ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ನಿಯೋಜಿಸಲಾಗಿದ್ದ ಪೋಲಿಸರು ಸ್ಥಳದಲ್ಲಿ ಇದ್ದಾಗ್ಯೂ ಕಲ್ಲು ತೂರಾಟ ನಡೆದಿರುವುದು ಆಫಾತಕಾರಿ ಬೆಳವಣಿಗೆಯಾಗಿದೆ. ಇಂತಹ ಸಂದರ್ಭಗಳಲ್ಲಿ ಅಮಾಯಕರ ಬಂಧನವಾಗದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಾಗಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರಾವಳಿ ಪ್ರದೇಶದಲ್ಲಿ ಗಲಭೆಗೆ ಹುನ್ನಾರ ಮಾಡುತ್ತಿರುವ ಕೋಮುಶಕ್ತಿಗಳ ವಿರುದ್ಧ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ


Spread the love
RedditLinkedinYoutubeEmailFacebook MessengerTelegramWhatsapp

Exit mobile version