Home Mangalorean News Kannada News ಕಾಂಗ್ರೆಸಿಗೆ ಜನಾದೇಶ ಲಭಿಸಿದ್ದಲ್ಲಿ ಕಾಪು ತಾಲೂಕು ಕೇಂದ್ರ : ವಿನಯ್ ಕುಮಾರ್ ಸೊರಕೆ

ಕಾಂಗ್ರೆಸಿಗೆ ಜನಾದೇಶ ಲಭಿಸಿದ್ದಲ್ಲಿ ಕಾಪು ತಾಲೂಕು ಕೇಂದ್ರ : ವಿನಯ್ ಕುಮಾರ್ ಸೊರಕೆ

Spread the love

ಉಡುಪಿ: ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ದೊರಕಿದ್ದಲ್ಲಿ ಕಾಪುವನ್ನು ಮತ್ತೆ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ಕಾಪು ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪು ರಾಜೀವ್ ಭವನದಲ್ಲಿ ಪುರಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿ ಕಾಪು ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಯಾವುದೇ ರಾಜಕೀಯ ರಣನೀತಿಯನ್ನು ಹೊಂದಿಲ್ಲ. ಕಾಪು ಪುರಸಭೆಯಾಗಿಸಿ ನಡೆಸಿದ ಅಭಿವೃದ್ಧಿ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಒಲೈಸುಲು ಕಾರ್ಯತಂತ್ರ ರೂಪಿಸಲಾಗಿದೆ.

image007kaup-tmc-congress-manifesto-20160412

ಸಮಗ್ರ ಕಾಪುವಿನ ಅಭಿವೃದ್ಧಿ ಹಾಗೂ ಜನರ ಸಂತೃಪ್ತಿಯ ಬದುಕು ಪಕ್ಷದ ಗುರಿಯಾಗಿದೆ. ಕಾಪು ಕ್ಷೇತ್ರದಲ್ಲಿ 27 ಗ್ರಾಮಪಂಚಾಯತುಗಳಿದ್ದು, ಒಂದೇ ಒಂದು ನಗರಸಭೆ, ಪುರಸಭೆ ಅಥವಾ ಪಟ್ಟಣಪಂಚಾಯತ್ ಹೊಂದಿಲ್ಲದಿರುವುದರಿಂದ ನಗರಾಭಿವೃದ್ಧಿ ಇಲಾಖೆಯಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಕಾಪುವನ್ನು ಪುರಸಭೆಯಾಗಿ ಪರಿವರ್ತಿಸಿದ್ದು, ಈ ಮೂಲಕ ನಗರಾಭಿವೃದ್ಧಿ ಇಲಾಖೆಯಿಂದ ಸಾಕಷ್ಟು ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು.
ಕಾಪು ಪುರಸಭೆಯ ಸಮಗ್ರ ಅಭಿವೃದ್ಧಿಗೆ 130 ಕೋಟಿ ರೂಗಳ ನೀಲ ನಕ್ಷೆ ತಯಾರಿಸಿದ್ದು, ಪುರಸಭೆ ವ್ಯಾಪ್ತಿಯ ನೀರಿನ ಸಮಸ್ಯೆ ನೀಗಿಸಲು ಶುದ್ಧಗಂಗಾ ಯೋಜನೆ, ಕೊಳಚೆ ನೀರು ಶುದ್ಧಿಕರಣ ಘಟಕ ಮತ್ತು ಒಳಚರಂಡಿ ವ್ಯವಸ್ಥೆ, ಕಸಮುಕ್ತ ಕಾಪು, ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ, ಅತಿಥಿ ದೇವೋಭವ ಯೋಜನೆ ಸಂಕಲ್ಪ, ವರ್ತುಲ ರಸ್ತೆಗಳ ನಿರ್ಮಾಣ, ರಾಜ್ಯಕ್ಕೆ ಮಾದರಿಯಾದ ಪೌರಾಡಳಿತ ಸಂಸ್ಥೆ ನಿರ್ಮಾಣದ ಗುರಿ, ಶಿಕ್ಷಣ, ಆರೋಗ್ಯ, ವಸತಿ ಕೈಗಾರಿಕೆಗೆ ಒತ್ತು, ಸರಕಾರಿ ಆಸ್ಪತ್ರೆ ನವೀಕರಣ, ಹಸಿವು ಮುಕ್ತ ಕಾಪು, ಪುರಸಭೆಯ ವ್ಯಾಪ್ತಿಯಲ್ಲಿ ಹಸಿರುವನ ನಿರ್ಮಾಣ, ಹಾಗೂ ಸಮುದ್ರ ಕೊರೆತ ತಡೆಗೆ ಕಾಂಡ್ಲಾವನ ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಸರಸು ಬಂಗೇರ, ದೇವಿಪ್ರಸಾದ್ ಶೆಟ್ಟಿ, ಅಬ್ದುಲ್ ಅಜೀಜ್, ವಿನಯ್ ಬಲ್ಲಾಳ್, ಕಿಶೋರ್ ಕುಮಾರ್, ಕಾಪು ದಿವಾಕರ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


Spread the love

Exit mobile version