Home Mangalorean News Kannada News ಕಾಂಗ್ರೆಸ್ ಗೂಂಡಾ ಸಂಸ್ಕೃತಿಗೆ ತಕ್ಕ ಉತ್ತರ ನೀಡಲು ಉತ್ತರ ಸಿದ್ಧ – ಅಕ್ಷಿತ್ ಶೆಟ್ಟಿ ಹೆರ್ಗ

ಕಾಂಗ್ರೆಸ್ ಗೂಂಡಾ ಸಂಸ್ಕೃತಿಗೆ ತಕ್ಕ ಉತ್ತರ ನೀಡಲು ಉತ್ತರ ಸಿದ್ಧ – ಅಕ್ಷಿತ್ ಶೆಟ್ಟಿ ಹೆರ್ಗ

Spread the love

ಕಾಂಗ್ರೆಸ್ ಗೂಂಡಾ ಸಂಸ್ಕೃತಿಗೆ ತಕ್ಕ ಉತ್ತರ ನೀಡಲು ಉತ್ತರ ಸಿದ್ಧ -ಅಕ್ಷಿತ್ ಶೆಟ್ಟಿ ಹೆರ್ಗ

ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಕಾಂಗ್ರೇಸ್ ಶಾಸಕ ಹ್ಯಾರಿಸ್ ಮಗನ ಗೂಂಡಾಗಿರಿಯನ್ನು ನಾಚಿಸುವಂತೆ ಉಡುಪಿಯಲ್ಲಿ ಕಾಂಗ್ರೆಸಿನ ಪುಡಾರಿಯೊಬ್ಬ ರೌಡಿಗಳ ತಂಡ ಕಟ್ಟಿಕೊಂಡು ಅಮಾಯಕ ಯುವಕನನ್ನು ಮಾರಣಾಂತಿಕವಾಗಿ ಥಳಿಸಿದ್ದಾನೆ.

ನಗರಸಭೆಯ ಸದಸ್ಯನಾಗಿರುವ ಈತ ಸಂವಿಧಾನಾತ್ಮಕವಾಗಿ ಜನ ಸೇವೆ ಮಾಡುವುದನ್ನು ಬಿಟ್ಟು ಅಕ್ರಮ ಕೂಟ ರಚಿಸಿಕೊಂಡು ತನ್ನ ಗೂಂಡಾಗಿರಿ ಪ್ರದರ್ಶನ ಮಾಡುತ್ತಿದ್ದು, ಈತನಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕದೇ ಹೋದರೆ ನಗರದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ಯುವಮೋರ್ಚಾ ನಗರಾದ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿ ಸಮಾಜಘಾತುಕ ಶಕ್ತಿಗಳು ವಿಜ್ರಂಭಿಸುತ್ತಿವೆ. ಪೊಲೀಸ್ ಇಲಾಖೆಯನ್ನುದುಬಲಗೊಳಿಸಿವೆ.

ಉಡುಪಿಯ ನಗರಸಭಾ ಸದಸ್ಯ ರಮೇಶ್ ಪೂಜಾರಿ ಎಂಬಾತ ರಸ್ತೆ ತಕರಾರಿಗೆ ಸಂಭಂಧಿಸಿ ಪ್ರಾಣೇಶ್ ಆಚಾರ್ಯ ಮತ್ತು ಗಣೇಶ್ ಆಚಾರ್ಯ ಎಂಬ ಸಹೋದರರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಈ ಹಲ್ಲೆಕೋರ ಇದೀಗ ಜಾಮೀನಿನ ಮೇಲೆ ಹೊರಬಂದಿದ್ದು, ತನ್ನ ಮೇಲೆ ದಾಖಲಾಗಿದ್ದ ಅಷ್ಟೂ ಪ್ರಕರಣಗಳನ್ನು ಪೆಟ್ಟು ತಿಂದ ಸಂತ್ರಸ್ಥ ಯುವಕರ ಮೇಲೆ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಸತ್ಯಾಸತ್ಯತೆಯನ್ನು ಪರಾಮರ್ಷಿಸದೆ ರಾಜಕೀಯ ಒತ್ತಡಕ್ಕೆ ಸಿಲುಕಿ ಅನ್ಯಾಯಕ್ಕೆ ಗುರಿಯಾದವರ ಮೇಲೆ ಮತ್ತೆ ಪ್ರಕರಣ ದಾಖಲಿಸಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ರಮೇಶ್ ಪೂಜಾರಿಯ ಕರ್ಮಕಾಂಡಗಳಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದು, ಇದನ್ನು ಉಡುಪಿಯ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು,ಸಚಿವರು ತನ್ನ ಚಾಳಿಯನ್ನು ಬದಲಾಯಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಈ ಕಾಂಗ್ರೆಸಿನ ಗೂಂಡಾಗಳನ್ನು ಜನರು ಜಿಲ್ಲೆಯಿಂದಲೇ ಗಡಿಪಾರು ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಈ ರಮೇಶ್ ಪೂಜಾರಿ ನಗರಸಭೆಯ ಮಹಿಳಾ ಸದಸ್ಯೆಯೊಬ್ಬರ ಮೇಲೆ ಕೈಮಾಡಿ ಸಾರ್ವಜನಿಕರಿಂದ ಛೀಮಾರಿಗೆ ಒಳಗಾಗಿದ್ದ. ಕಾಂಗ್ರೆಸಿಗೆ ನೈತಿಕತೆ ಎನ್ನುವುದಿದ್ದರೆ ಆತನನ್ನು ಆಗಲೇ ತನ್ನ ಪಕ್ಷದಿಂದ ಅಮಾನತು ಮಾಡಬಹುದಿತ್ತು. ಆದರೆ ಕಾಂಗ್ರೆಸಿಗರ ಸಂಸ್ಕೃತಿಯೇ ಗೂಂಡಾಗಳನ್ನು ಬೆಳೆಸುವುದಾದ ಕಾರಣ ರಮೇಶ್ ಪೂಜಾರಿ ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾನೆ.. ಇಲಾಖೆ ಈತನ ಕುಮ್ಮಕ್ಕಿನಂತೆ ಅಮಾಯಕ ಯುವಕರ ಮೇಲೆ ಹಾಕಿರುವ ಕೇಸುಗಳನ್ನು ಹಿಂಪಡೆಯದಿದ್ದರೆ ಉಡುಪಿ ನಗರದಲ್ಲಿ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ತಿಳಿಸಿದ್ದಾರೆ.


Spread the love

Exit mobile version