Home Mangalorean News Kannada News ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ- ನಗರದ ಸಮಸ್ಯೆಗಳ ಬಗ್ಗೆ ಮನವಿ

ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ- ನಗರದ ಸಮಸ್ಯೆಗಳ ಬಗ್ಗೆ ಮನವಿ

Spread the love

ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ- ನಗರದ ಸಮಸ್ಯೆಗಳ ಬಗ್ಗೆ ಮನವಿ

ಉಡುಪಿ: ಉಡುಪಿಯ ಕಾಂಗ್ರೆಸ್ ಪಕ್ಷದ ನಗರಸಭೆಯ ಸದಸ್ಯರಗಳು ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜಿ.ಜಗದೀಶ್ ಅವರನ್ನು ಭೇಟಿಯಾಗಿ ಸೋಮವಾರ ಅಭಿನಂದನೆ ಸಲ್ಲಿಸಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪರಿಸರದ ಸಾರ್ವಜನಿಕ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣ -2 ಕಟ್ಟಡ ಪರವಾನಿಗೆ ಅನ್ ಲೈನ್ ತಂತ್ರಾಂಶದಲ್ಲಿ ಸಮಸ್ಯೆ ಇದ್ದು ಇದರಿಂದ ಜನರಿಗೆ ವಿದ್ಯುತ್ ಎನ್ ಒ ಸಿ ಸಿಗುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಗರಸಭೆಯ 35 ವಾರ್ಡುಗಳಲ್ಲಿ ದಾರಿದೀಪಗಳು ಉರಿಯುತ್ತಿಲ್ಲ ಅಲ್ಲದೆ ಡಿವೈಡರ್ ಜಂಕ್ಷನ್ ಗಳ ಮಿನಿ ಹೈಮಾಸ್ಟ್ ದೀಪಗಳನ್ನು ದುರುಸ್ತಿಗೊಳಿಸಬೇಕು.

ಗಣೇಶ ಚತುರ್ಥಿ ಹಬ್ಬ ಸನೀಹದಲ್ಲಿದ್ದರೂ ಕೂಡ ಹುಲ್ಲು ಕತ್ತರಿಸುವ ಯಂತ್ರ ತಯಾರಾಗಿಲ್ಲ. ನಗರದ ಪ್ರಮುಖ ರಸ್ತೆಯ ಚರಂಡಿ ಹದಗೆಟ್ಟಿದ್ದು, ರಸ್ತೆಯಲ್ಲಿ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದ್ದು, ಆರೋಗ್ಯದ ದೃಷ್ಠಿಯಿಂದ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ನಗರಸಭಾ  ಸದಸ್ಯರಾದ ರಮೇಶ್ ಕಾಂಚನ್, ವಿಜಯ್ ಪೂಜಾರಿ ಬೈಲೂರು, ಅಮೃತ ಕೃಷ್ಣಮೂರ್ತಿ, ಸೇಲಿನಾ ಕರ್ಕಾಡ, ಮಾಜಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ್,ಮಾಜಿ ನಗರಸಭಾ ಉಪಾಧ್ಯಕ್ಷರಾದ ಸಂಧ್ಯಾ ತಿಲಕ್, ಮಾಜಿ ನಗರಸಭಾ ಸದಸ್ಯರಾದ ಶಶಿರಾಜ್ ಕುಂದರ್, ಆರ್.ಕೆ.ರಮೇಶ್, ಶಾಂತ ರಾಮ್ ಸಾಲ್ವಂನ್ ಕರ್ ಉಪಸ್ಥಿತರಿದ್ದರು.


Spread the love

Exit mobile version