ಕಾಂಗ್ರೆಸ್ ನಿಂದ ದೆಹಲಿ ಮತ್ತು ಕರ್ನಾಟಕದಲ್ಲಿ ಸಂವಿಧಾನದ ಕಗ್ಗೊಲೆ – ನಳಿನ್ ಕುಮಾರ್ ಕಟೀಲ್
ಮಂಗಳೂರು: ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ದೆಹಲಿ ಮತ್ತು ಕರ್ನಾಟಕದಲ್ಲಿ ಸಂವಿಧಾನದ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು
ಅವರು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಈ ದೇಶದ ರಾಷ್ಟ್ರಭಕ್ತ ಹೃದಯ ಆಗಿರೋ ಲೋಕಸಭೆಯ ಒಳಗೆ ರಾಹುಲ್ ಗಾಂಧಿ ವರ್ತನೆ ಖಂಡನೀಯ. ಇದು ರಾಹುಲ್ ಗಾಂಧಿ ಸಂವಿಧಾನಕ್ಕೆ ಮಾಡಿರೋ ಅಪಚಾರ ಎಂದರು.
ಬೆಳಗಾವಿ ಅಧಿವೇಶನ ಹೊತ್ತಲ್ಲಿ ನಡೆದ ಘಟನೆ ಸರಿಯಲ್ಲ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆಯನ್ನ ಖಂಡಿಸುತ್ತೇನೆ. ವಿಧಾನಸಭೆಯ ಒಳಗಿನ ಎಲ್ಲಾ ಚರ್ಚೆಗಳು ಸಭಾಪತಿಗಳ ಅಂಗಳದ ವಿಚಾರವಾಗಿದ್ದು ಈ ವಿಚಾರದಲ್ಲಿ ಸಭಾಪತಿ ಕೊಡುವ ರೂಲ್ ಅಂತಿಮವಾಗಿರುತ್ತದೆ. ಹೊರಗಿನ ವ್ಯಕ್ತಿಗಳು ಮತ್ತು ಒಬ್ಬ ಶಾಸಕರಿಗೆ ಹಲ್ಲೆ ನಡೆಸುತ್ತಾರೆ ಅಂದ್ರೆ ಏನರ್ಥ?
ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಗೂಂಡಾ ಪ್ರವೃತ್ತಿ ಹೆಚ್ಚಿದ್ದು, ಕಾಂಗ್ರೆಸ್ ನ ಗೂಂಡಾಗಳಿಗೆ ಧೈರ್ಯ ಹೆಚ್ಚಾಗಿದೆ, ಭಯೋತ್ಪಾದಕರಿಗೂ ಧೈರ್ಯ ಬಂದಿದೆ. ಸಭಾ ಗೌರವ, ನಿಯಮ ಗಾಳಿಗೆ ತೂರಿ ಸಿ.ಟಿ.ರವಿ ಬಂಧಿಸಲಾಗಿದೆ. ಇದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸರ್ಕಾರದ ದ್ವೇಷದ ರಾಜಕಾರಣವಾಗಿದೆ.
ಸಭಾಪತಿ ಹೇಳದೇ ಕಾನೂನಾತ್ಮಕವಾಗಿ ಬಂಧಿಸುವ ಹಕ್ಕಿಲ್ಲ ಪ್ರಕರಣ ದಾಖಲಿಸಿದ್ರೂ ನೋಟಿಸ್ ಕೊಡುವ ಬದಲು ಬಂಧಿಸಿದ್ದಾರೆ ಇವತ್ತು ಜಂಗಲ್ ಹಾಗೂ ಗೂಂಡಾ ರಾಜ್ಯ ನಿರ್ಮಾಣ ಆಗಿದೆ. ಕಾಂಗ್ರೆಸ್ ಆಡಳಿತ ವೈಫಲ್ಯ ಮುಚ್ಚಿ ಹಾಕಲು ಇದೆಲ್ಲಾ ಮಾಡಲಾಗ್ತಿದೆ. ಸಿ.ಟಿ.ರವಿ ಬಂಧನದ ಮೂಲಕ ಬೇರೆ ವಿಚಾರ ಮುಚ್ಚಿ ಹಾಕುವ ಕೆಲಸ ಆಗಿದೆ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ, ಇದನ್ನ ಬಿಡಬಾರದು
ಸಿ.ಟಿ.ರವಿ ಕೊಟ್ಟ ದೂರಿನ ಬಗ್ಗೆ ಏನೂ ಆಗಿಲ್ಲ, ವಿನಯ್ ಕುಲಕರ್ಣಿ ಮೇಲೆ ರೇಪ್ ಕೇಸ್ ಇದೆ, ಮಹಿಳೆ ದೂರು ಕೊಟ್ಟಿದ್ದಾರೆ. ಆದರೆ ವಿನಯ್ ಕುಲಕರ್ಣಿ ಬಂಧನ ಯಾಕೆ ಆಗಿಲ್ಲ? ಆದರೆ ಒಬ್ಬ ಪರಿಷತ್ ಸದಸ್ಯನ ಬಂಧನ ಆಗಿದೆ, ಅವರೇನು ಟೆರರಿಸ್ಟಾ? ಎಂದು ಪ್ರಶ್ನಿಸಿದರು.
ಅಧಿವೇಶನ ಮುಗಿದ ಮೇಲೆ ಡಿಕೆಶಿ-ಸಿದ್ದರಾಮಯ್ಯ ಒಳಜಗಳ ಹೊರಗೆ ಬರ್ತದೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಬರುತ್ತೆ ಅಂತ ಇದನ್ನು ಮಾಡಲಾಗಿದೆ. ಇದೊಂದು ದ್ವೇಷದ ರಾಜಕಾರಣ, ಸಭಾಪತಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿ. ಸಭಾಪತಿಯೇ ನಿನ್ನೆ ರೂಲ್ ಕೊಟ್ಟಿದ್ದಾರೆ, ಅಡಿಯೂ, ವಿಡಿಯೋ ಇಲ್ಲ ಅಂತ. ಸುವರ್ಣ ಸೌಧದ ಒಳಗೆ ಶಾಸಕರು, ಸಚಿವರಿಗೆ ರಕ್ಷಣೆ ಇಲ್ಲ, ಇದು ಆಡಳಿತ ವೈಫಲ್ಯವಾಗಿದ್ದು, ಇವತ್ತು ಪೊಲೀಸರನ್ನ ಗೃಹ ಸಚಿವರ ಕೂಲಿಯಾಳುಗಳಾಗಿ ಮಾಡಿ ಇಟ್ಟಿದ್ದಾರೆ. ಸಿ.ಟಿ.ರವಿಯವರ ಜೊತೆ ಇಡೀ ಭಾರತೀಯ ಜನತಾ ಪಾರ್ಟಿ ಇದ್ದು, ರಾಜ್ಯಾಧ್ಯಕ್ಚರ ಜೊತೆ ಚರ್ಚಿಸಿ ನಾವು ಉಗ್ರ ಹೋರಾಟ ಮಾಡ್ತೇವೆ ಎಂದರು.