ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ಜ.1 ರಂದು ಪಂಪ್ವೆಲ್ ಮೇಲ್ಸೇತುವೆಯ ಅಣುಕು ಉದ್ಘಾಟನೆ!

Spread the love

ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ಜ.1 ರಂದು ಪಂಪ್ವೆಲ್ ಮೇಲ್ಸೇತುವೆಯ ಅಣುಕು ಉದ್ಘಾಟನೆ!

ಮಂಗಳೂರು: ಫ್ಲೈಓವರ್ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಪಂಪ್ವೆಲ್ ಫ್ಲೈಓವರ್ಗೆ ಡಿಸೆಂಬರ್ 31 ರಂದು ಭೇಟಿ ನೀಡಿತು.

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, “ಕಳೆದ 10 ವರ್ಷಗಳಿಂದ ಫ್ಲೈಓವರ್ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಆದರೆ ಇನ್ನೂ ಪೂರ್ಣಗೊಂಡಿಲ್ಲ. ಮೂರು ತಿಂಗಳ ಮೊದಲು ದಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜನವರಿ 1, 2020 ರಂದು ಫ್ಲೈಓವರ್ ಉದ್ಘಾಟಿಸುವ ಭರವಸೆ ನೀಡಿದ್ದರು. ಫ್ಲೈಓವರ್ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲು ನಾವು ಇಲ್ಲಿದ್ದೇವೆ ಎಂದರು”.

ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಪಂಪ್ವೆಲ್ ಮೇಲ್ಸೇತುವೆ (ಫ್ಲೈಓವರ್) ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಜನವರಿ 1ರಂದು ಸಂಜೆ ಇದರ ಅಣಕು ಉದ್ಘಾಟನೆ ಮಾಡಲಾಗುವುದು. ಗದಿಪಡಿಸಿದ ಗಡುವಿನ ಪ್ರಕಾರ ಈ ಮೇಲ್ಸೇತುವೆಯ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೂಲಕ ಜನವರಿ 1ರಂದು ಸಂಜೆ ಮೇಲ್ಸೇತುವೆಯ ಅಣಕು ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೊರತಾದ ಹೇಳಿಕೆಯನ್ನು ನೀಡಿ ಸಂಸದರು ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಹತ್ತು ವರ್ಷಗಳಿಂದ ನಡೆಯುತ್ತಿದ್ದರೂ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂಗತಿಗಳ ಬಗ್ಗೆ ಸಂಸದರು ಗಮನಹರಿಸದೆ ಅಭಿವೃದ್ದಿ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಜನವರಿ ಅಂತ್ಯದೊಳಗೆ ಉದ್ಘಾಟನೆಯಾಗದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಅಸಮರ್ಪಕ ಮೇಲ್ಸೇತುವೆಯ ಕಾಮಗಾರಿಯೂ ಅಸಮರ್ಪಕವಾಗಿದೆ. ನಿಗದಿತ ಎತ್ತರವಿಲ್ಲದ ಕಾರಣ ಮೇಲ್ಸೇತುವೆಯಡಿಯಲ್ಲಿ ಆಳ ಮಾಡಲು ಹೊರಟಿದ್ದಾರೆ. ಪಡೀಲ್ ಕೆಳ ಸುರಂಗ ಮಾರ್ಗವೂ ಸಮರ್ಪಕವಾಗಿಲ್ಲ. ಮಂಗಳೂರು-ಕಾರ್ಕಳ ಹೆದ್ದಾರಿ ಕಾಮಗಾರಿ %


Spread the love