ಕಾಂಗ್ರೆಸ್ ಸಮಾವೇಶ: ವಾಹನ ಸಂಚಾರ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಾರ್ಪಾಡು
ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ದಿನಾಂಕ: 17-02-2024 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರು ಆಗಮಿಸಲಿರುತ್ತಾರೆ.
ಸದರಿ ಕಾರ್ಯಕ್ರಮವು ಪಡೀಲ್ ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 73 ರ ರಸ್ತೆಯ ಸಮೀಪದಲ್ಲಿ ನಡೆಯುತ್ತಿದ್ದು, ಸದ್ರಿ ಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಸದರಿ ರಸ್ತೆಯು ಸಂಚಾರ ದಟ್ಟಣೆಯಿಂದ ಕೂಡುವ ಸಾಧ್ಯತೆ ಇರುತ್ತದೆ. ಆದ ಕಾರಣ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 73 ರ ರಸ್ತೆಯಲ್ಲಿ ಸಂಚರಿಸುವ ಘನ ವಾಹನಗಳ ಸಂಚಾರದಲ್ಲಿ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ ಹಾಗೂ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ವಾಹನಗಳನ್ನು ನಿಲ್ಲಿಸಲು ಈ ಕೆಳಕಂಡ ಸ್ಥಳಗಳನ್ನು ನಿಗದಿ ಪಡಿಸಲಾಗಿದೆ.
ಘನ ವಾಹನಗಳ ಸಂಚಾರದಲ್ಲಿ ಬದಲಾವಣೆ:-
- ಉಡುಪಿ ಕಡೆಯಿಂದ ಮಂಗಳೂರು ನಗರದ ಮೂಲಕ ಬಿ.ಸಿ.ರೋಡ್ / ಬೆಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ನಂತೂರು-ಪಂಪ್ ವೆಲ್-ತೊಕ್ಕೊಟ್ಟು-ಮುಡಿಪು-ಮೆಲ್ಕಾರ್ ಮೂಲಕ ಸಂಚರಿಸುವುದು.
- ಬೆಂಗಳೂರು / ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೆಲ್ಲಾರ್- ಮುಡಿಪು-ತೊಕ್ಕೊಟ್ಟು-ಪಂಪ್ ವೆಲ್ ಮೂಲಕ ಸಂಚರಿಸುವುದು.
ಈ ತಾತ್ಕಾಲಿಕ ಸಂಚಾರ ಮಾರ್ಪಾಡು ದಿನಾಂಕ: 17-02-2024 ರಂದು ಬೆಳಗ್ಗೆ 09.00 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಊರ್ಜಿತದಲ್ಲಿರುತ್ತದೆ.
ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನ ಪಾರ್ಕಿಂಗ್ ಸ್ಥಳಗಳ ವಿವರ:-
- ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳು ಹಾಗೂ ಸಾರ್ವಜನಿಕರ ಮೋಟಾರು ಸೈಕಲ್ಗಳನ್ನು ಕಾಮತ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಕಾರುಗಳನ್ನು ಅಡ್ಯಾರ್ನ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಕಾರ್ಯಕರ್ತರನ್ನು ಕಾಮತ್ ಪಾರ್ಕಿಂಗ್ ಬಳಿ ಇಳಿಸಿ ಅಲ್ಲಿಂದ ಮುಂದುವರಿದು ಬಸ್ಸನ್ನು ಕಣ್ಣೂರಿನಲ್ಲಿ ಯೂ ಟರ್ನ್ ಮಾಡಿ ಮೋತಿಶ್ಯಾಮ್/ಷಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳನ್ನು ಅಡ್ಯಾರ್ ಗಾರ್ಡನ್ ನಲ್ಲಿ ಪಾರ್ಕಿಂಗ್ ಮಾಡುವುದು.
- ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳ ಚಾಲಕರು ಕಾರ್ಯಕರ್ತರನ್ನು ಅಡ್ಯಾರ್ ಗಾರ್ಡನ್ ಮುಂಭಾಗ ಇಳಿಸಿ ಸೋಮನಾಥಕಟ್ಟೆಯಲ್ಲಿ ಯೂ ಟರ್ನ್ ಮಾಡಿ ಕಣ್ಣೂರು ಮಸೀದಿ ಬಳಿ ಇರುವ ಷಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮೋಟಾರ್ ಸೈಕಲ್ಗಳನ್ನು ಅಡ್ಯಾರ್ ಗಾರ್ಡನ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
- ಅಡ್ಯಾರ್ ಕಟ್ಟೆಯಲ್ಲಿರುವ ಜಯಶೀಲ ರವರ ಮೈದಾನದಲ್ಲಿ ಕೂಡಾ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.