ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟಿಕರಣಕ್ಕೆ ಹಿಂದೂಗಳ ಬಲಿ; ಸುರೇಂದ್ರ ಕೋಟೆಶ್ವರ
ಕೋಟ: ಹೊನ್ನವಾರದ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ಸಾಸ್ತಾನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಾಸ್ತಾನ ಬಸ್ಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಜರಂಗ ದಳದ ಮುಖಂಡ ಸುರೇಂದ್ರ ಕೋಟೇಶ್ವರ ಹೊನ್ನಾವರ ಪರೇಶ ಮೇಸ್ತ ಹತ್ಯಯ ಹಿಂದೆ ರಾಜಕೀಯ ಕೈವಾಡವಿದೆ ಅಲ್ಲದೆ ಪೋಲೀಸ್ ಇಲಾಖೆಯನ್ನು ಬಳಸಿ ಕೊಂಡು ಮುಸ್ಲಿಂರ ರಕ್ಷಣೆ ಮಾಡಲಾಗುತ್ತಿದೆ ಇದರ್ಥ ಏನು ಅಂದರೆ ಇಸ್ಲಾಂ ತುಷ್ಠಿಕರಣ ಇದು ರಾಜ್ಯ ವ್ಯಾಪಿಯಾಗಿ ನಡೆಯುತ್ತಿದ್ದು ಇಂದು ರಾಜ್ಯದಲ್ಲಿ ಹಿಂದೂಗಳ ಮೇಲೆ ವ್ಯವಸ್ಥಿತವಾದ ದಾಳಿ ಹತ್ಯೆ ನಡೆಯಲು, ಹೊತ್ತಿ ಉರಿಯಲು ಕಾರಣ ರಾಜ್ಯದ ಕಾಂಗ್ರೆಸ್ ಸರಕಾರವೇ ಕಾರಣ ನಿರಂತರವಾಗಿ 20ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಹತ್ಯೆ ಮಾಡಲಾಗಿದೆ ಅದರ ಬಗ್ಗೆ ಗಮನ ಹರಿಸುವುದಿಲ್ಲ ಬದಲಾಗ ಪ್ರತಿಭಟಿಸುವರ ವಿರುದ್ಧ ಕೇಸು ದಾಖಲಿಸಿ ಹಿಂದೂ ದಮನ ನೀತಿ ಅನುಸರಿಸುತ್ತಾರೆ ಅಲ್ಪ ಸಂಖ್ಯಾತರ ತುಷ್ಠಿಕರಣದಿಂದ ಹಿಂದೂಗಳು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣ ಒಂದೆಡೆಯಾದರೆ ಇನ್ನೊಂದೆಡೆ ಜಿಹಾದಿ ಪ್ರವೃತಿಯ ಮೂಲಕ ಈ ರಾಜ್ಯದಲ್ಲಿ ಐಸಿಸ್ ಮಾದರಿಯ ಸಂಘಟನೆ ಬೆಳೆಯುವಂತೆ ಮಾಡುತ್ತಿದ್ದಾರೆ ಇದು ಹೀಗೆ ಮುಂದುವರಿದರೆ ಈ ರಾಜ್ಯದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ ಇದರ ವಿರುದ್ಧ ಹಂದೂ ಸಮುದಾಯ ಸಿಡಿದೇಳುತ್ತಿದ್ದು ಅದರ ಇಂದು ನೋಟ ಪರೇಶ ಮೇಸ್ತ ಹತ್ಯೆಯ ವಿರುದ್ಧ ಪ್ರತಿಭಟನೆಯೇ ಸಾಕ್ಷೀಕರಿಸಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇಡೀ ರಾಜ್ಯವೇ ಹೊತ್ತಿಉರಿಯುವುದರಲ್ಲಿ ಸಂಭವವಿಲ್ಲ ಇದಕ್ಕೆಲ ಆಸ್ಪದ ನೀಡಬೇಡಿ ಎಂದು ಎಚ್ಚರಿಸಿದರು.
ಹಿಂದೂ ಸಂಘಟನೆಯ ಮುಖಂಡರಾದ ವಸಂತ್ ಗುಂಡ್ಮಿ, ಅವಿನಾಶ್ ಉಳ್ತೂರು, ಶಂಕರ್ ಕೋಟ, ಪ್ರವೀಣ್ ಯಕ್ಷಿಮಠ, ರಮೇಶ ಪಾಂಡೇಶ್ವರ, ಗಿರೀಶ್ ಆಚಾರ್ಯ,ಕಾರ್ಕಡ ರಾಜು ಪೂಜರಿ, ಸುರೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಡಿ.ವೈ.ಎಸ್.ಪಿ. ಕುಮಾರಸ್ವಾಮಿ ಹಾಗೂ ಉಡುಪಿ ವೃತ್ತ ನಿರೀಕ್ಷಕ ನವೀನ್ಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ, ಹಿರಿಯಡ್ಕ, ಉಡುಪಿ ಮಹಿಳಾ ಠಾಣೆಯ ಎಸ್.ಐ.ಗಳು ಉಪಸ್ಥಿತರಿದ್ದರು