Home Mangalorean News Kannada News ಕಾಂಗ್ರೇಸ್ ನ ವಕ್ತಾರ ರೀತಿಯಲ್ಲಿ ಎಸ್ಪಿ ರಿಷ್ಯಂತ್ ಪತ್ರಿಕಾಗೋಷ್ಠಿ – ಶಾಸಕ ಹರೀಶ್ ಪೂಂಜಾ ಆರೋಪ

ಕಾಂಗ್ರೇಸ್ ನ ವಕ್ತಾರ ರೀತಿಯಲ್ಲಿ ಎಸ್ಪಿ ರಿಷ್ಯಂತ್ ಪತ್ರಿಕಾಗೋಷ್ಠಿ – ಶಾಸಕ ಹರೀಶ್ ಪೂಂಜಾ ಆರೋಪ

Spread the love

ಕಾಂಗ್ರೇಸ್ ನ ವಕ್ತಾರ ರೀತಿಯಲ್ಲಿ ಎಸ್ಪಿ ರಿಷ್ಯಂತ್ ಪತ್ರಿಕಾಗೋಷ್ಠಿ – ಶಾಸಕ ಹರೀಶ್ ಪೂಂಜಾ ಆರೋಪ

ದಕ್ಷಿಣಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ರಿಷ್ಯಂತ್ ವಿರುದ್ದ ಶಾಸಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಾಗ್ದಾಳಿ ನಡೆಸಿದ್ದು, ಎಸ್ಪಿ ಮಾಡಿರುವ ಪತ್ರಿಕಾಗೋಷ್ಠಿ ಕಾಂಗ್ರೇಸ್ ವಕ್ತಾರರು ನಡೆಸಿದ ಪತ್ರಿಕಾಗೋಷ್ಠಿ ರೀತಿ ಇತ್ತು ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅವರು ಧರ್ಮಸ್ಥಳದಲ್ಲಿ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ವಿಚಾರಗಳು ಸುಳ್ಳಾಗಿದ್ದು, ಎಸ್ಪಿ ಅವರು ಕಾಂಗ್ರೇಸ್ ವಕ್ತಾರರ ರೀತಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಬೆಳ್ತಂಗಡಿ ನನ್ನ ಮನೆಗೆ ಅಂದು ಮೂರು ಮಂದಿ ಪೋಲಿಸರು ನೋಟಿಸ್ ನೀಡಲು ಬಂದಿದ್ದರು ಎಸ್ಪಿ ಹೇಳಿದ್ದರು. ಆದರೆ ಎಷ್ಟು ಜನ ಬಂದಿದ್ದಾರೆ ಅಂತ ಮನೆಯ ಸಿಸಿ ಟಿವಿ ಪರಿಶೀಲನೆ ನಡೆಸಲಿ ಎಂದ ಅವರು ಮೂರು ವಾಹನದಲ್ಲಿ 15 ಕ್ಕೂ ಹೆಚ್ಚು ಪೊಲೀಸರು ಮನೆಗೆ ಬಂದಿದ್ದು, ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತೇನೆ ಅಂದಿದ್ದರು, ಅಲ್ಲದೆ ಕಾನೂನು ರೀತಿಯ ಪ್ರಕ್ರಿಯೆ ಮಾಡಲಿಲ್ಲ, ಸಂಜೆ 7 ಗಂಟೆಯವರೆಗೆ ದೌಜನ್ಯ ‌ಮಾಡಿದ್ದಾರೆ ಎಂದು ಆರೋಪಿಸಿದ ಹರೀಶ್ ಪೂಂಜಾ, ನಮ್ಮ ಮನೆಯಲ್ಲಿ ಸಾಮಾನ್ಯ ತುಂಬಾ ಜನ ಸೇರುತ್ತಾರೆ.. ಪ್ರೊಟೆಕ್ಷನ್‌ ಗೆ ಪೊಲೀಸರನ್ನು ಹಾಕ್ತಾರಾ? ಎಂದು ಪ್ರಶ್ನಿಸಿದರು.

ಎಸ್ಪಿ ಅವರು ರಸ್ತೆ ಕಿರಿದಾಗಿದ್ದಕ್ಕೆ ನಾವು ಪೊಲೀಸರನ್ನು ವಾಪಾಸ್ ಕರೆದುಕೊಂಡು ಹೋಗಿದ್ದೇವೆ ಎಂಬ ಎಸ್ಪಿ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ನನ್ನ ಮನೆ ಮಾರ್ಗ ಚಿಕ್ಕದು ಅಂತಾರೆ? ಮಾರ್ಗ ಸರಿ ಇಲ್ಲ ಅಂತ ಬಿಟ್ಟು ಹೋಗ್ತಾರಾ, ಎಸ್‌ಪಿಯವರೆ ಕಾಗಕ್ಕ ಗೂಬಕ್ಕ ಕಥೆ ಹೇಳಬೇಡಿ, ಎಸ್‌ಪಿ, ಜನ ಪ್ರತಿನಿಧಿ ಹೇಳಿದ್ರು, ಬಿಟ್ಟು ಹೋದೆವು ಅಂತಾರೆ, ಅದು ಸರಿಯಾದ ನಿಯಮವೇ ಎಂದರು. ದೇಶದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಆಗೇ ಇಲ್ವಾ ಹಾಗಾದ್ರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಸಾರ್ವಜನಿಕ ಹಕ್ಕು. ಕಲ್ಲು ಗಣಿಗಾರಿಕೆ ನಡೆದದ್ದು ಯಾವ ಸ್ಥಳದಲ್ಲಿ ಇದೆ ಅನ್ನೋದನ್ನು ತನಿಖೆ ‌ಮಾಡಬೇಕು ಅಂತ ಹೇಳಿದ್ದಾರೆ. ಆ್ಯಫ್ ಮೂಲಕ ನೋಡಿದ್ರೆ ಗೊತ್ತಾಗುದಿಲ್ವಾ, ಸಾಮಾನ್ಯ ಜ್ಞಾನ ಎಸ್‌ಪಿ ಅವರಿಗೆ ಇಲ್ವಾ ಎಂದು ಆರೋಪಿಸಿದರು. ಮೂರು ದಿನಗಳಲ್ಲೇ ಜಾರ್ಜ್ ಶೀಟ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಸ್‌ಪಿ, ಶಶಿರಾಜ್ ಶೆಟ್ಟಿ ಅಮಾಯಕ.. ಅವನನ್ನು ಹೇಗೆ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿದರು.


Spread the love

Exit mobile version