Home Mangalorean News Kannada News ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೊಲೀಸರ ಮನವಿ

ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೊಲೀಸರ ಮನವಿ

Spread the love
RedditLinkedinYoutubeEmailFacebook MessengerTelegramWhatsapp

ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೊಲೀಸರ ಮನವಿ

ಮಂಗಳೂರು:   ಮಹಮ್ಮದ್ ಆಸೀಫ್ ಪ್ರಾಯ (38)  ಅಬ್ದುಲ್ ಅಜೀಜ್ ಎಂಬವರ ಕೆ.ಐ ಕನೆಕ್ಷನ್ ಕಂಪನಿ ವತಿಯಿಂದ ಶಿವಮೊಗ್ಗದ ಸಿದ್ಲಿಪುರ ಎಂಬಲ್ಲಿ ಕೆಲಸ ಮಾಡಿಕೊಡಿದ್ದರು. ಕಳೆದ ಎರಡು ವಾರಗಳ ಹಿಂದೆ ಪಿರ್ಯಾದಿದಾರರ ಅಣ್ಣ ಮಹಮ್ಮದ್ ಆಸೀಫ್  ರವರು ಊರಿಗೆ ಬಂದವರು ಅದೇ ಮಾಲಕರ ಬಾಬ್ತು ಕಂಪನಿಯ ಕೆಲಸವು ಕುತ್ತಾರ ಪ್ರದೇಶದಲ್ಲಿ ಇದ್ದು ಪಿರ್ಯಾದಿದಾರರ ಅಣ್ಣ ಪ್ರತಿ ದಿನ ಮನೆಯಿಂದಲೇ ಹೋಗಿ ಬಂದು ಮಾಡಿಕೊಂಡಿದ್ದವರು ದಿನಾಂಕ 24-02-2025 ರಂದು ಬೆಳಿಗ್ಗೆ 8.30 ಗಂಟೆಗೆ ಕುತ್ತಾರಿನ ಕೆಲಸಕ್ಕೆ ಹೋಗಿ ಬರುವುದಾಗಿ ಪಿರ್ಯಾದಿದಾರರ ತಂದೆ ಹಾಗೂ ಮಹಮ್ಮದ್ ಆಸೀಫ್ ರವರ ಹೆಂಡತಿ  ಬಳಿ ಹೇಳಿ ಹೋದವರು ಕೆಲಸಕ್ಕೂ ಹೋಗದೆ ಮನೆಗೂ ಬಾರದೇ ಕಾಣೆಯಾಗಿದ್ದು.ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 31/2025, ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾದವರ ಚಹರೆ ಇಂತಿದೆ
1.  ಎತ್ತರ 5.4 ಅಡಿ
2. ಮೈಬಣ್ಣ ಎಣ್ಣೆ ಕಪ್ಪು ಮೈಬಣ್ಣ
3. ಇತರ ಸಾಧರಣ ಶರೀರ, ದುಂಡು ಮುಖ
4. ಧರಿಸಿದ್ದ ಬಟ್ಟೆ ನಸು ಪಚ್ಚೆ ಬಣ್ಣದ ತುಂಬು ತೋಳಿನ ಅಂಗಿ ಕ್ರೀಮ್ ಕಲರ್ ಪ್ಯಾಂಟ್
5. ತಿಳಿದಿರುವ ಭಾಷೆ ಕನ್ನಡ, ಬ್ಯಾರಿ ,ತುಳು, ಮಲಯಾಳಂ
6. ವಿದ್ಯಾಭ್ಯಾಸ 10ನೇ ತರಗತಿ
ಕಾಣೆಯಾದ ಮಹಮ್ಮದ್ ಆಸೀಫ್ ಪ್ರಾಯ: 38 ವರ್ಷ, ಎಂಬವರು ಪತ್ತೆಯಾದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ  0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಪೊಲೀಸರು ಕೋರಿದ್ದಾರೆ

Spread the love
RedditLinkedinYoutubeEmailFacebook MessengerTelegramWhatsapp

Exit mobile version