ಕಾನೂನು ಸುವ್ಯವಸ್ಥೆಗೆ ಕಮೀಷನರೆಟ್ ವ್ಯಾಪ್ತಿಯಲ್ಲಿ 480 ಬೀಟ್ ವ್ಯವಸ್ಥೆ: ಚಂದ್ರಶೇಖರ್
ಮಂಗಳೂರು: ನಗರ ಪೋಲಿಸ್ ಆಯುಕ್ತಲಾಯ ವ್ಯಾಪ್ತಿಯಲ್ಲಿ 480 ಬೀಟ್ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಎಂ ಚಂದ್ರಶೇಖರ್ ತಿಳಿಸಿದ್ದಾರೆ.
ಅವರು ರವಿವಾರ ತನ್ನ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಗರ ಪೋಲಿಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಗೆ ಹೊಸ ರೂಪ ನೀಡಿದ್ದು, ಪ್ರತಿ ಬೀಟ್ ಗೆ ಒಬ್ಬ ಪೋಲಿಸರನ್ನು ನೇಮಿಸಲಾಗಿದೆ. ಅವರು ಬೀಟ್ ವ್ಯಾಪ್ತಿಯ ಕನಿಷ್ಠ 50 ಮಂದಿಯ ಜೊತೆ ಸಂಪರ್ಕ ಬೆಳೆಸಿ ವಾರಕ್ಕೊಮ್ಮೆ ಸಭೆ ನಡೆಸಲಿದ್ದಾರೆ. ಬೀಟ್ ಗೆ ನೇಮಿಸಿದ ಸಿಬಂದಿಗೆ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣದ ಜವಾಬ್ದಾರಿ, ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಎಸ್ಸೈ ಅಥವಾ ಎ ಎಸ್ಐ ನೆರವು ಪಡೆಬಹುದು ಎಂದರು.
ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ 33 ಮಂಗಳೂರು ಪೂರ್ವ 35, ಬರ್ಕೆ 20, ಉರ್ವ 31, ಮಹಿಳಾ 5, ದಕ್ಷಿಣ 41, ಗ್ರಾಮಾಂತರ 36, ಉಳ್ಳಾಲ 42, ಕೊಣಾಜೆ 32, ಕಂಕನಾಡಿ ನಗರ 21, ಪಣಂಬೂರು 24, ಕಾವೂರು 27, ಸುರತ್ಕಲ್ 37, ಬಜ್ಪೆ 34, ಮುಲ್ಕಿ 34, ಮೂಡಬಿದರೆ 28 ಹೀಗೆ 16 ಠಾಣಾ ವ್ಯಾಪ್ತಿಯಲ್ಲಿ 480 ಬೀಟ್ ಪಾಯಿಂಟ್ ಗಳನ್ನು ಗುರುತಿಸಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಡಿಸಿಪಿ ಡಾ ಸಂಜೀವ್ ಪಾಟೀಲ್, ಎಸಿಪಿ ರಾಜೇಂದ್ರ ಉಪಸ್ಥಿತರಿದ್ದರು.