ಕಾನ್ಸುಲೆಟ್ ಜೆನರಲ್ ಅಫ್ ಇಂಡಿಯಾ ಮತ್ತು ಎಫ್. ಒ. ಐ. ಈವೆಂಟ್ಸ್ ನ ಸಂಯೋಗದಲ್ಲಿ ದುಬಾಯಿಯಲ್ಲಿ ಯಶಸ್ವಿ ರಕ್ತದಾನ ಶಿಬಿರ
ಭಾರತದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಪ್ರತಿವರ್ಷ ದುಬಾಯಿಯಲ್ಲಿ ಆಯೋಜಿಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರ ಈ ಬಾರಿಯೂ ಸಹ ಕಾನ್ಸುಲೆಟ್ ಜೆನರಲ್ ಅಫ್ ಇಂಡಿಯಾ ಮತ್ತು ಎಫ್. ಒ. ಐ. ಈವೆಂಟ್ಸ್ ನ
ಸಂಯೋಗದಲ್ಲಿ ೨೦೨೪ ಆಗಸ್ಟ್ ೧೧ನೇ ತಾರೀಕಿನಂದು ದುಬಾಯಿ ಹೆಲ್ತ್ ಅಥಾರಿಟಿ ಹೆಡ್ ಕ್ವಾರ್ಟ್ರಸ್ ಜಡಾಫ್
ದುಬಾಯಿ ರಕ್ತದಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕಳೆದ ಹದಿನೆಂಟು ವರ್ಷಗಳಿಂದ ಹಲವು ಬಾರಿ ವಿವಿಧ ಸಂದರ್ಭಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಎಫ್. ಒ. ಐ. ಈವೆಂಟ್ಸ್ ನ ಮುಖ್ಯಸ್ಥರಲ್ಲಿ ಓರ್ವರಾಗಿರುವ ಶ್ರೀ ಭಾಗ್ಯರಾಜ್ ರಾವ್ ರವರ ಜೊತೆಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಸಮಾಜ ಸೇವಕರ ತಂಡ ಪೂರ್ವಭಾವಿ ತಯಾರಿಯೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ದುಬಾಯಿ ಲತಿಫಾ ಹಾಸ್ಪಿಟಲ್ ಮತ್ತು ಹೆಲ್ತ್ ಅಥಾರಿಟಿ ಆರೋಗ್ಯ ಸಿಬ್ಬಂದಿ ವರ್ಗದವರ ಮೇಲ್ವಿಚಾರಣೆಯಲ್ಲಿ ನಡೆಯಿತು. ರಕ್ತದಾನ ಶಿಬಿರಕ್ಕೆ ಐನೂರು ಮಂದಿ ರಕ್ತದಾನಿಗಳು ಹೆಸರು ನೋಂದಾಯಿಸಿ ಕೊಂಡಿದ್ದರು. ಬ್ಲಡ್ ಬ್ಯಾಂಕಿನ ಅಗತ್ಯಕ್ಕೆ ಅನುಗುಣವಾಗಿ ನೂರ ಎಂಬತ್ತು ಮಂದಿಯ ರಕ್ತವನ್ನು ಸಂಗ್ರಹಿಸಿ ಕೊಳ್ಳಲಾಯಿತು.
ಡೆಪ್ಯೂಟಿ ಕಾನ್ಸೂಲ್ ಜೆನರಲ್ ಗೌರವಾನ್ವಿತ ಶ್ರೀ ಯತಿನ್ ಪಟೇಲ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಮ್ಮ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದ ಸಂದರ್ಭದಲ್ಲಿ ಭಾರತದ ವಿವಿಧ ಭಾಗಗಳ ಅನಿವಾಸಿ ಭಾರತೀಯರು ಭಾವಹಿಸುತ್ತಾರೆ. ಪ್ರತಿ
ಶಿಬಿರದಲ್ಲಿ ಉಪಹಾರದ ವ್ಯವಸ್ಥೆ ಇರುತ್ತದೆ. ಈ ಬಾರಿ ಮಣಿಪುರ ರಾಜ್ಯ ಶೈಲಿಯ ಉಪಹಾರದ ವ್ಯವಸ್ಥೆಯನ್ನು
ಮಾಡಲಾಗಿತ್ತು.
ಪ್ರತಿದಿನ, ಪ್ರತಿ ಕ್ಷಣ ತುರ್ತಾಗಿ ಜೀವವನ್ನು ಉಳಿಸಲು ರಕ್ತದ ಅಗತ್ಯವಿದೆ. ಜಗತ್ತಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಪಡೆದು ರಕ್ತ ಬ್ಯಾಂಕಿಗೆ ನೀಡಿ ಕೋಟ್ಯಾಂತರ ಜೀವ ರಕ್ಷಕರಾಗಿ ಸಮಾಜ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರತಿಬಾರಿ ರಕ್ತದಾನ ಮಾಡುತ್ತಿರುವವರು ತಮ್ಮ ತಮ್ಮ ಆರೊಗ್ಯವನ್ನು ಕಾಪಾಡಿ ಕೊಳ್ಳುತ್ತಿರುವುದು ಅವರ ಆರೋಗ್ಯದ ಗುಟ್ಟು.
ರಕ್ತ ದಾನಿಗಳು ರಕ್ತದ ಒತ್ತಡ, ಹೈ ಕೊಲೆಸ್ಟಾçಲ್, ಕ್ಯಾನ್ಸರ್, ಸ್ಟೆçಸ್ ಮತ್ತು ಹೆಚ್ಚು ತೂಕದ ಮತ್ತು ಇನ್ನಿತರ ಹಲವಾರು ಸಮಸ್ಯೆಗಳಿಗೆ ತುತ್ತಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ರಕ್ತದಾನದ ಬಗ್ಗೆ ಇನ್ನು ಹೆಚು ಹೆಚ್ಚು ಜಾಗೃತಿ ಮೂಡಿಸ ಬೇಕಾಗಿದೆ. ಇಂದಿನ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿರುವ ರಕ್ತದಾನಿಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ರಕ್ತದಾನ ಮಹಾ ದಾನ, ರಕ್ತದಾನ ಪವಿತ್ರ ದಾನದ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವವರಿಗೆ ಕಾನ್ಸುಲೆಟ್ ಜೆನರಲ್ ಅಫ್ ಇಂಡಿಯಾ ಮತ್ತು ಎಫ್. ಒ. ಐ. ಈವೆಂಟ್ಸ್ ತಮ್ಮ ಪ್ರಶಂಸೆಯನ್ನು ಸಲ್ಲಿಸಿದ್ದಾರೆ.
ಬಿ. ಕೆ. ಗಣೇಶ್ ರೈ – ದುಬಾಯಿ