ಕಾಪು: ಅಕ್ರಮ ಜಾನುವಾರು ಸಾಗಾಟ – ಇಬ್ಬರ ಬಂಧನ
ಉಡುಪಿ: ಯಾವುದೇ ಪರವಾನಿಗೆ ಇಲ್ಲದೆ ಕಂಟೈನರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಎತ್ತು, ಎಮ್ಮೆ ಮತ್ತು ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿ 18 ಜಾನುವಾರುಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಂಟೈನರ್ ಲಾರಿ ಚಾಲಕ ದಾವಣಗೆರೆ ನಿವಾಸಿ ತನ್ವೀರ್ ಯಾನೆ ತನ್ವೀರ್ ಅಹ್ಮದ್ (25) ಮತ್ತು ಹೈದರ್ ಆಲಿ ಎಂದು ಗುರುತಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾದ ನಿಶಾ ಜೇಮ್ಸ್ರವರು ನೀಡಿದ ಮಾಹಿತಿಯಂತೆ ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ. ಉಡುಪಿ ಹಾಗೂ ಜೈಶಂಕರ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ ವಿಭಾಗ ಕಾರ್ಕಳ, ಹಾಗೂ ಮಹೇಶ್ ಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತರವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 28ರಂದು ರಾಜಶೇಖರ್ ಬಿ ಸಾಗನೂರ್ ಪೊಲೀಸ್ ಉಪ ನಿರೀಕ್ಷಕರು, ಕಾಪು, ಪ್ರೋಬೆಷನರಿ ಪಿ.ಎಸ್.ಐ.ರವರಾದ ಉದಯರವಿ ಮತ್ತು ಮಹಾದೇವ್ ಬೋಸ್ಲೆ, ಎ.ಎಸ್.ಐ. ಕರುಣಾಕರ್, ಸಿಬ್ಬಂದಿಯವರಾದ ಗಿರೀಶ್, ಆನಂದ, ಶ್ರೀನಾಥ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳಾದ ನಾಗೇಶ್ ಮತ್ತು ವೆಂಕಟರಮಣರವರೊಂದಿಗೆ ಕಟಪಾಡಿ ಜಂಕ್ಷನ್ನಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಎತ್ತು, ಎಮ್ಮೆ ಮತ್ತು ಕೋಣಗಳನ್ನು ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಕಂಟೈನರ್ ಲಾರಿ ನಂಬ್ರ ಕೆಎ 51 ಎ 9846ನ್ನು ಪತ್ತೆ ಹಚ್ಚಿ ಅದರಲ್ಲಿದ್ದ 10 ಎತ್ತು, 07 ಎಮ್ಮೆ ಮತ್ತು 01 ಕೋಣ ಒಟ್ಟು 18 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಾರಿ ಮಾಲಕ ಇಮ್ರಾನ್ ವಿರುದ್ದ ಪ್ರಕರಣದ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಎತ್ತು, ಎಮ್ಮೆ ಹಾಗೂ ಕೋಣವನ್ನು ಬ್ರಹ್ಮಾವರದ ನೀಲಾವರ ಗೋಶಾಲೆಗೆ ಸೇರಿಸಲಾಗಿದೆ.